ಅಪ್ಪು ಅಗಲಿಕೆ ನೋವಲ್ಲಿ 47ನೇ ಹುಟ್ಟುಹಬ್ಬ: 'ಜೇಮ್ಸ್' ಚಿತ್ರ ಬಿಡುಗಡೆ, ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ
ಕನ್ನಡದ ವರನಟ ಡಾ ರಾಜ್ ಕುಮಾರ್ ಕಿರಿಯ ಪುತ್ರ, ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 47ನೇ(ಮಾ.17)ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ.
Published: 17th March 2022 07:58 AM | Last Updated: 17th March 2022 01:33 PM | A+A A-

ಜೇಮ್ಸ್ ಬಿಡುಗಡೆಗೊಂಡ ನಂತರ ಥಿಯೇಟರ್ ಮುಂದೆ ಕಂಡುಬಂದ ಹಬ್ಬದ ವಾತಾವರಣ
ಕನ್ನಡದ ವರನಟ ಡಾ ರಾಜ್ ಕುಮಾರ್ ಕಿರಿಯ ಪುತ್ರ, ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Rajkumar) ಅವರ 47ನೇ (ಮಾ.17) ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ.
ಇಂದು ಅಪ್ಪು ಅವರ ಜನ್ಮದಿನವನ್ನು ಜಾತ್ರೆಯ ರೀತಿ ನಾಡಿನಾದ್ಯಂತ ಅಭಿಮಾನಿಗಳು ಆಚರಿಸುತ್ತಿದ್ದಾರೆ, ಅದಕ್ಕೆ ಕಾರಣ ಅವರು ನಟಿಸಿರುವ ಕೊನೆಯ ಚಿತ್ರ ಜೇಮ್ಸ್ (James film) ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಆಕ್ಷನ್ ಆಧಾರಿತ ಸೈನಿಕನ ಪಾತ್ರದಲ್ಲಿ ನಟಿಸಿರುವ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರ ಇಂದು 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಗಳು ರಾರಾಜಿಸುತ್ತಿವೆ. ಅಭಿಮಾನಿಗಳು ಕಟೌಟ್, ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಹಾಲಿನ ಅಭಿಷೇಕ ಮಾಡಿ, ಬೃಹತ್ ಕಟೌಟ್ ಗಳಿಗೆ ಮೇಲಿನಿಂದ ಪುಷ್ಪಗಳ ಸುರಿಮಳೆಗೈದು, ಬಣ್ಣದ ಕಾಗದಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ.
ಜೇಮ್ಸ್ ಚಿತ್ರ ವೀಕ್ಷಿಸಿದ ಕುಟುಂಬಸ್ಥರು: ತಮ್ಮ ತಮ್ಮನ ಕೊನೆಯ ಚಿತ್ರ ಹೇಗಿದೆ, ಅಭಿಮಾನಿಗಳ ಸಂಭ್ರಮ, ಭಾವನೆಗಳು ಹೇಗಿವೆ ಎಂದು ತಿಳಿದುಕೊಳ್ಳಲು ಮೈಸೂರಿನ ಡಿಆರ್ ಎಕ್ಸ್ ಚಿತ್ರಮಂದಿರದಲ್ಲಿ ಇಂದು ಸಂಜೆ 4 ಗಂಟೆಗೆ ಶಿವರಾಜ್ ಕುಮಾರ್ (Shivaraj kumar) ಚಿತ್ರ ವೀಕ್ಷಿಸಲಿದ್ದಾರೆ. ಅನೇಕ ಚಿತ್ರ ಕಲಾವಿದರು ಇಂದು ಚಿತ್ರ ವೀಕ್ಷಿಸಲಿದ್ದಾರೆ. ಪುನೀತ್ ಅವರ ಸೋದರ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪತ್ನಿ ಜೊತೆ ಬೆಳಗ್ಗೆಯೇ ಆಗಮಿಸಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದಾರೆ.
ಹಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸಾಲುಸಾಲು ಸೀಟುಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಚಿತ್ರಮಂದಿರಗಳ ಬಳಿ ಜೇಮ್ಸ್ ವೀಕ್ಷಿಸಿದವರಿಗೆ ಬಿರಿಯಾನಿ, ಸ್ವೀಟ್ ಹಂಚಲಾಗುತ್ತಿದೆ.
ಹುಟ್ಟುಹಬ್ಬಕ್ಕೆ ಸಮಾಜಮುಖಿ ಕಾರ್ಯಗಳು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 47ನೇ ಜಯಂತಿ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಕೋಲಾರದಿಂದ ಒಬ್ಬರು ಹೊಸ ಬೈಕ್ ತಂದು ಕಂಠೀರವ ಸ್ಟುಡಿಯೊದಲ್ಲಿ ಅಪ್ಪು ಸಮಾಧಿ ಬಳಿ ಪೂಜೆ ಸಲ್ಲಿಸಿದ್ದಾರೆ.
.. #James Jathre #PuneethRajkumar's action entertainet directed by @BahaddurChethan to hit theatres on #March17 pic.twitter.com/2fYQyimZg8
— A Sharadhaa (@sharadasrinidhi) March 16, 2022