ಟಾಲಿವುಡ್ ಗೆ ರಿಷಬ್ ಶೆಟ್ಟಿ ಎಂಟ್ರಿ; ಸ್ನೇಹಿತನಿಗಾಗಿ 'ಮಿಷನ್ ಇಂಪಾಸಿಬಲ್' ಸಿನಿಮಾದಲ್ಲಿ ನಟನೆ!
ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಸದ್ಯ ಕಾಂತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರೂ, ಈ ನಡುವೆ ಸದ್ದಿಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ.
Published: 17th March 2022 02:13 PM | Last Updated: 17th March 2022 02:25 PM | A+A A-

ರಿಷಬ್ ಶೆಟ್ಟಿ
ಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಸದ್ಯ ಕಾಂತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರೂ, ಈ ನಡುವೆ ಸದ್ದಿಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ.
ತಾಪ್ಸಿ ಪನ್ನು ನಟಿಸಿರುವ ‘ಮಿಷನ್ ಇಂಪಾಸಿಬಲ್’ ಸಿನಿಮಾ ಟ್ರೇಲರ್ ಅನ್ನು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ರಿಲೀಸ್ ಮಾಡಿದ್ದರು. ಈ ವೇಳೆ ರಿಷಬ್ ಶೆಟ್ಟಿ ಹಾಜರಿದ್ದದ್ದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿತ್ತು.
ತೆಲುಗು ಸಿನಿಮಾರಂಗದಲ್ಲಿ ಇದು ರಿಷಭ್ ಶೆಟ್ಟಿ ಚೊಚ್ಚಲ ಸಿನಿಮಾ, ಆರ್ ಎಸ್ ಜೆ ಸ್ವರೂಪ್ ತಮ್ಮ ಉತ್ತಮ ಗೆಳೆಯರಾಗಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಏಜೆಂಟ್ ಸಾಯ್ ಶ್ರೀನಿವಾಸ್ ಸಿನಿಮಾ ನನಗೆ ತುಂಬಾ ಹಿಡಿಸಿತ್ತು. ಅವರನ್ನು ಭೇಟಿ ಮಾಜಿದಾಗ ನಾನು ಆ ವಿಷಯವನ್ನು ಅವರಿಗೆ ತಿಳಿಸಿದ್ದೆ, ಅವರಿಗೆ ಮತ್ತಷ್ಟು ಪ್ರೋತ್ಸಾಹ ತುಂಬಲು ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: 'ತಿಥಿ' ನಂತರ ವಿದೇಶಿ ನೆಲದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ 'ಪೆದ್ರೊ': ಪೋಸ್ಟರ್ ಮತ್ತು ಅಧಿಕೃತ ಟ್ರೇಲರ್ ಬಿಡುಗಡೆ
ನನ್ನ ಸಿನಿಮಾಗಳನ್ನು ಸ್ವರೂಪ್ ಮೆಚ್ಚಿದ್ದಾರೆ, ಹೀಗಾಗಿ ನಮ್ಮಿಬ್ಬರ ಸಂಪರ್ಕ ಬೆಳೆಯಿತು, ನನಗಾಗಿ ಏನಾದರೂ ಮಾಡಬೇಕೆಂದು ಅವರ ಮನಸ್ಸಿನಲ್ಲಿತ್ತು, ಬೆಂಗಳೂರು ಮೂಲದ ಪಾತ್ರಕ್ಕಾಗಿ ಅವರು ಬರೆದಿದ್ದ ಕಥೆ ನನಗೆ ಇಷ್ಟವಾಯಿತು. ನನ್ನನ್ನೂ ಒಳಗೊಂಡಂತೆ ನಗರದ ಹಲವಾರು ಭಾಗದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ.
ಏಪ್ರಿಲ್ 1 ರಂದು ಸಿನಿಮಾ ರಿಲೀಸ್ ಆಗಲಿದೆ, ಈ ಸಿನಿಮಾವನ್ನು ಗೆಳೆತನಕ್ಕಾಗಿ ಮಾಡಲಾಗಿದೆಯೇ ಹೊರತು, ತೆಲುಗು ಸಿನಿಮಾಗೆ ಎಂಟ್ರಿ ಕೊಡಲು ಮಾಡಿಲ್ಲ ಎಂದು ರಿಷಬ್ ಸ್ಪಷ್ಟ ಪಡಿಸಿದ್ದಾರೆ.