ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಜೊತೆ ಚರ್ಚೆ: ಸಚಿವ ಆರ್ ಅಶೋಕ್
ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
Published: 17th March 2022 02:44 PM | Last Updated: 17th March 2022 03:46 PM | A+A A-

ಸಚಿವ ಆರ್ ಅಶೋಕ್ ಮತ್ತು ಜೇಮ್ಸ್ ಚಿತ್ರದ ಪೋಸ್ಟರ್
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ಜೇಮ್ಸ್ ಚಿತ್ರ ಬಿಡುಗಡೆ: ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಪ್ಪು ಬಗ್ಗೆ ರಾಘಣ್ಣ ಹೇಳಿದ್ದೇನು?
ದೇಶಾದ್ಯಂತ ಇಂದು ದಿ.ನಟ ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ ಸಿನಿಮಾ ತೆರೆಕಂಡಿದ್ದು, ಸಿನಿಮಾಗೆ ತೆರಿಗೆ ರಿಯಾಯಿತಿ ನೀಡುವ ಕುರಿತು ಅವರ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಸದ್ಯದಲ್ಲೇ ಪುನೀತ್ ರಾಜ್ ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂ ಬೊಮ್ಮಾಯಿ
ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್ ಅವರು, 'ಪುನೀತ್ ಅಭಿಮಾನಿಗಳು ನನಗೆ ಕರೆಮಾಡಿದ್ದರು. ಇದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುವೆ ಎಂದು ಹೇಳಿರುವೆ ಎಂದು ಹೇಳಿದರು.
'ರಾಜ್ಯ ಕಂಡ ನಿಸ್ವಾರ್ಥ ಮತ್ತು ಅಧ್ಭುತ ನಟ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ಮನದಾಳದಿಂದ ಶುಭಾಶಯಗಳು.. ದಿ. ನಟ ಪುನೀತ್ ನಟನೆಯ ಕೊನೆಯ ಚಿತ್ರ ಇಂದು ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ನನಗೆ ಕರೆ ಮಾಡಿ ಜೇಮ್ಸ್ ಸಿನಿಮಾಗೆ ವಿನಾಯಿತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ, ಇದೇ ವಿಚಾರವನ್ನ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು.
ಕೆಲವರು ಸತ್ತಾಗ ಸ್ವಲ್ಪ ದಿನದಲ್ಲೆ ಮರೆಯುವುದು ಸರ್ವೇಸಾಮಾನ್ಯ, ಆದರೆ ಅವರು ಇಲ್ಲ ಅಂದ್ರು ಬದುಕಿರುವ ರೀತಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಅದ್ಭುತ, ಪುನೀತ್ ಗೆ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಆದಷ್ಟು ಬೇಗ ಅದನ್ನ ಕೊಡುವ ಕೆಲಸ ಆಗುತ್ತೆ ಎಂದರು.