
ನಾನಿ
ತೆಲುಗು ಚಿತ್ರರಂಗದ versatile ಆಕ್ಟರ್, ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹುನಿರೀಕ್ಷಿತ 'ದಸರಾ' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆಯಾಗಿದೆ. ವಿಭಿನ್ನ ಪ್ರಕಾರದ ಸಿನಿಮಾಗಳಿಗೆ ಹೆಸರಾದ ನಾನಿ ಈ ಬಾರಿ ಫ್ರೆಶ್ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಇದನ್ನೂ ಓದಿ: ನನ್ನ ಸಿನಿಮಾದಲ್ಲಿ ಸಂದೇಶ ಇರಲ್ಲ, ಮನರಂಜನೆ ಗ್ಯಾರಂಟಿ: RRR ನಿರ್ದೇಶಕ ರಾಜಮೌಳಿ
ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದಸರಾ ಸಿನಿಮಾ ಮಾಸ್ ಅಂಡ್ ಆಕ್ಷನ್ ಸಿನಿಮಾ ಆಗಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ನಾನಿ ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.
ಇದನ್ನೂ ಓದಿ: 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಟ್ರೇಲರ್ ಬಿಡುಗಡೆ: ಉತ್ತರ ಕನ್ನಡದ ಕುವರನ ಗೆಟಪ್ಪಿನಲ್ಲಿ ಮಿಂಚಿದ ದಿಗಂತ್
ನಾನಿ ಅವರಿಗೆ ಜೊತೆಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ. ಕಲ್ಲಿದ್ದಲು ಗಣಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆಯುವ ಪಕ್ಕಾ ಮಾಸ್ ಆಕ್ಷನ್ ಪ್ಯಾಕ್ಡ್ ಕಥೆಯನ್ನು ಸಿನಿಮಾ ಹೊಂದಿದೆ. ಸಮುದ್ರಖನಿ, ಸಾಯಿ ಕುಮಾರ್, ಜರೀನಾ ವಹಾಬ್ ಸಿನಿಮಾದಲ್ಲಿ ನಟಿಸಿದ್ದಾರೆ.
Dharani from #DASARA
— Nani (@NameisNani) March 20, 2022
RAGE IS REAL #SparkofDasarahttps://t.co/06QUaXXGyb pic.twitter.com/82ITCb0jRY
ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ನಟ ಪುನೀತ್ ಜೀವನಗಾಥೆ: ಪ್ರಾಥಮಿಕ ತರಗತಿ ಪುಸ್ತಕದಲ್ಲಿ ದೊಡ್ಮನೆ ಹುಡುಗನ ಯಶೋಗಾಥೆ!