
ರಾಧೇ ಶ್ಯಾಮ್ ಸಿನಿಮಾ ಪೋಸ್ಟರ್
ಮಾಸ್ಕೊ: ಹಾಲಿವುಡ್ ನ ಪ್ರಮುಖ ಸ್ಟುಡಿಯೋಗಳು ರಷ್ಯಾದಲ್ಲಿ ತಮ್ಮ ಸಿನಿಮಾ ಪ್ರದರ್ಶನ ರದ್ದುಗೊಳಿಸಿದ ಬೆನ್ನಲ್ಲೇ, ರಷ್ಯಾ ಸರ್ಕಾರ ಹಾಲಿವುಡ್ ಅನ್ನು ಬದಿಗೊತ್ತಿದೆ. ಬಾಲಿವುಡ್ ಮತ್ತು ಕೊರಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಪುತಿನ್ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಭಾರತೀಯರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಬೇಕು: ಅಮೀರ್ ಖಾನ್
ಭಾರತದಲ್ಲಿ ಇತ್ತೀಚಿಗೆ ತೆರೆಕಂಡ ಪ್ರಭಾಸ್ ಅಭಿನಯದ ತೆಲುಗು ಸಿನಿಮಾ ರಾಧೇಶ್ಯಾಮ್ ರಷ್ಯಾದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವುದು ಕುತೂಹಲದ ಸಂಗತಿ.
ಇದನ್ನೂ ಓದಿ: ಮಾಡೋಕೆ ಬೇರೆ ಕೆಲ್ಸ ಇಲ್ಲ ಅಂತ ಕಾಂಟ್ರವರ್ಸಿ ಮಾಡುತ್ತಿದ್ದೆ: ಪೂನಂ ಪಾಂಡೆ
ಯುದ್ಧದ ಕಾರಣದಿಂದಾಗಿ ರಷ್ಯಾದಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಆದರೆ ಸಿನಿಮಾ ಟಿಕೆಟ್ ದರವನ್ನು ಇದುವರೆಗೂ ಏರಿಸಲಾಗಿಲ್ಲ. ಹಳೆಯ ದರವನ್ನೇ ನಿಗದಿಪಡಿಸಲಾಗಿದೆ. ದುಡಿಯುವ ವರ್ಗಕ್ಕೆ ಸಿನಿಮಾಗಳು ಉಲ್ಲಾಸ ತರುವುದರಿಂದ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಮಹಿಳೆಯರು ತಮಗೆ ಬೇಕಾದ ಬಟ್ಟೆ ಧರಿಸುವುದು ಅವರ ಹಕ್ಕು ಎಂದ ನಟಿ ಉರ್ಫಿ ಜಾವೇದ್