‘ಕನ್ನಡ ಇಂಡಸ್ಟ್ರಿಯಲ್ಲಿನ ಕೆಲಸ ನನ್ನ ಸಿನಿಮಾ ವೃತ್ತಿಜೀವನ ಉನ್ನತಿಗೆ ನೆರವು: ನಟ ಸಂಬೀತ್ ಆಚಾರ್ಯ
ಒಡಿಯಾ ಪ್ರಸಿದ್ಧ ನಟ ಸಂಬೀತ್ ಆಚಾರ್ಯ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖುಷಿಯಲಿದ್ದಾರೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ವಾಸುದೇವ್ ರೆಡ್ಡಿ ನಿರ್ದೇಶನದ ಮೈಸೂರು ಸಿನಿಮಾದಲ್ಲಿ ನಾಯಕ ನಟನಾಗಿ ಇವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಜಯಶ್ರೀ, ಕುರಿ ಪ್ರತಾಪ್, ಅಶೋಕ್ ಹೆಗ್ಡೆ ಕೂಡಾ ನಟಿಸಿದ್ದಾರೆ.
Published: 22nd March 2022 01:02 PM | Last Updated: 22nd March 2022 01:25 PM | A+A A-

ನಟ ಸಂಬೀತ್ ಆಚಾರ್ಯ
ಒಡಿಯಾ ಪ್ರಸಿದ್ಧ ನಟ ಸಂಬೀತ್ ಆಚಾರ್ಯ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖುಷಿಯಲಿದ್ದಾರೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ವಾಸುದೇವ್ ರೆಡ್ಡಿ ನಿರ್ದೇಶನದ ಮೈಸೂರು ಸಿನಿಮಾದಲ್ಲಿ ನಾಯಕ ನಟನಾಗಿ ಇವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಜಯಶ್ರೀ, ಕುರಿ ಪ್ರತಾಪ್, ಅಶೋಕ್ ಹೆಗ್ಡೆ ಕೂಡಾ ನಟಿಸಿದ್ದಾರೆ.
ನನ್ನನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ನಿರ್ದೇಶಕ ವಾಸುದೇವ್ ರೆಡ್ಡಿ ಅವರೊಂದಿಗಿನ ನನ್ನ ಸಂಬಂಧದಿಂದ ಈ ಸಿನಿಮಾ ಅವಕಾಶ ಸಿಕ್ಕಿತ್ತು. ನಾನು ಸಾಕ್ಷ್ಯಚಿತ್ರ ಮಾಡಿದ್ದೆ, ಅವರು ನನಗೆ ಈ ಚಲನಚಿತ್ರವನ್ನು ನೀಡಿದರು. ಎರಡನೆಯದಾಗಿ, ಈ ಸಿನಿಮಾ ಒಡಿಯಾ-ಕನ್ನಡಕ್ಕೆ ಹೊಂದಿಕೊಳ್ಳುತಿತ್ತು, ಅದು ಮತ್ತೊಂದು ಆಕರ್ಷಣೆ ಎಂದು ಸಂಬೀತ್ ಹೇಳುತ್ತಾರೆ.
ಕನ್ನಡ ಸಿನಿಮಾಗಳು, ವಿಶೇಷವಾಗಿ ಅದರ ವಿಶಿಷ್ಠ ಕಥೆಯ ಬಗ್ಗೆ ಆಗಾಗ್ಗೆ ಓದುತ್ತೇನೆ ಮತ್ತು ಕೇಳುತ್ತೇನೆ. ಇಂತಹ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ನನ್ನ ವೃತ್ತಿ ಜೀವನ ಉನ್ನತಿಯಾಗಲಿದೆ ಎಂದು ಯೋಚಿಸಿರುವುದಾಗಿ ತಿಳಿಸಿದರು.
ಈ ಮಧ್ಯೆ ಸಂಬೀತ್, ತೆಲುಗಿನಲ್ಲಿ ಮೊದಲ ಬಾರಿಗೆ ನಟಿಸಿರುವ ವಿಕ್ರಮ್ ರೆಡ್ಡಿ ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕನ್ನಡದಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಸೌಥ್ ನಲ್ಲಿ ಮತ್ತಷ್ಟು ಕೆಲಸ ಮಾಡಲು ಎದುರು ನೋಡುತ್ತೇನೆ. ಕುತೂಹಲಕಾರಿ ಪಾತ್ರಗಳ ಅವಕಾಶ ಸಿಗುತ್ತಿದೆ. ಒಪ್ಪಂದದ ನಂತರ ಘೋಷಿಸುವುದಾಗಿ ಹೇಳಿದರು.