
ನಟ ಉಪೇಂದ್ರ ಹೊಸ ಗೆಟಪ್
ಉಪೇಂದ್ರ- ವೇದಿಕಾ ಜೋಡಿ ನಟಿಸಿರುವ, ಜಿಬ್ರಾನ್ ಸಂಗೀತ ನೀಡಿರುವ 'ಹೋಮ್ ಮಿನಿಸ್ಟರ್' ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆನಂದ್ ಆಡಿಯೋ ಮೂಲಕ ಈ ಹಾಡುಗಳು ಬಿಡುಗಡೆಯಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ 'ಹೋಮ್ ಮಿನಿಸ್ಟರ್' ಸಿನಿಮಾ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಉಪೇಂದ್ರ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆಯೇ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರದ ‘ಹೋಮ್ ಮಿನಿಸ್ಟರ್’ ಸೆಟ್ಟೇರಿತ್ತು. ಚಿತ್ರದಲ್ಲಿನ ತಮ್ಮ ಹೊಸ ಗೆಟ್‌ಅಪ್ ಅನ್ನೇ ಇದೀಗ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಫೊಟೋವೊಂದನ್ನು ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಉಪೇಂದ್ರ ಅವರ ಈ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಹಲವು ಅಭಿಪ್ರಾಯಗಳನ್ನೂ ಅಭಿಮಾನಿಗಳು ಹಂಚಿಕೊಂಡಿದ್ದಾರೆ.