ನಟ ಸಂಚಾರಿ ವಿಜಯ್ ನಟನೆಯ ತಲೆದಂಡ ಚಿತ್ರ ಏ.1ಕ್ಕೆ ಬಿಡುಗಡೆ
ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿದ, ನಟ ದಿವಂಗತ ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ.
Published: 23rd March 2022 01:26 PM | Last Updated: 23rd March 2022 01:59 PM | A+A A-

ನಟ ಸಂಚಾರಿ ವಿಜಯ್
ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿದ, ನಟ ದಿವಂಗತ ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ.
ಪ್ರವೀಣ ಕೃಪಾಕರ ಅವರು ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರವು ವಿಭಿನ್ನ ಕಥೆಯನ್ನು ಹೊಂದಿದೆ. ಕಥೆಯು ಭೂಮಿ ತಾಯಿಯ ಪ್ರಸ್ತುತ ಸನ್ನಿವೇಶವನ್ನು ಮತ್ತು ಮನುಷ್ಯರ ಸ್ವಾರ್ಥಕ್ಕಾಗಿ ಭೂಮಿ ಮೇಲಾಗುತ್ತಿರುವ ಶೋಷಣೆಯನ್ನು ಕೇಂದ್ರೀಕರಿಸಿದೆ. ಚಿತ್ರದಲ್ಲಿ ಸೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಅರೆಬುದ್ಧಿಮಾಂದ್ಯ ‘ಕುನ್ನ’ ಎಂಬ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.
ಇದನ್ನೂ ಓದಿ: ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್'ಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿತ್ತು: ನಿರ್ದೇಶಕ
ತಲೆದಂಡ ಚಿತ್ರವನ್ನು ಹೇಮಮಾಲಿನಿ ಕೃಪಾಕರ್ ಅವರು ನಿರ್ಮಾಣ ಮಾಡುತ್ತಿದ್ದು, ಅರುಣ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಜಗದೀಶ್ ಚಿತ್ರ ವಿತರಣೆ ಮಾಡುತ್ತಿದ್ದು, ಚಿತ್ರದಲ್ಲಿ ನಟಿ ಮಂಗಳಾ ನಾಗರಾಜ್ ರಾವ್, ಮಂಡ್ಯ ರಮೇಶ್ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ.