ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ದುಶ್ಯಂತ್ ಗೆ ಆಶಿಕಾ ರಂಗನಾಥ್ ನಾಯಕಿ?
ಸುನಿ ನಿರ್ದೇಶನದ ಗತವೈಭವ ಸಿನಿಮಾದಲ್ಲಿ ದುಶ್ಯಂತ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇನ್ನೂ ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ.
Published: 24th March 2022 01:38 PM | Last Updated: 24th March 2022 01:55 PM | A+A A-

ಆಶಿಕಾ ರಂಗನಾಥ್
ಸುನಿ ನಿರ್ದೇಶನದ ಗತವೈಭವ ಸಿನಿಮಾದಲ್ಲಿ ದುಶ್ಯಂತ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇನ್ನೂ ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ.
ಮೇ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ. ಇದರ ಜೊತೆಗೆ ಆಶಿಕಾ ಹಲವು ಆಸಕ್ತಿದಾಯಕ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 6 ರಂದು ಆಶಿಕಾ ರಂಗನಾಥ್ ಮತ್ತು ಶರಣ್ ನಟನೆಯ ಅವತಾರ ಪುರುಷ ಸಿನಿಮಾ ರಿಲೀಸ್ ಆಗಲಿದೆ. ಪವನ್ ಒಡೆಯರ್ ನಿರ್ದೇಶನದ ರೆಮೋದಲ್ಲಿಯೂ ಇಶಾನ್ ಗೆ ನಾಯಕಿಯಾಗಿದ್ದಾರೆ.
ಇದನ್ನೂ ಓದಿ: 'ಗತ ವೈಭವ' ತರುತ್ತಿದ್ದಾರೆ 'ರಾಬಿನ್ ಹುಡ್' ಜೋಡಿ ಸುನಿ-ದುಶ್ಯಂತ್!
ಆಶಿಕಾ ಸದ್ಯ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 02 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಪ್ರವೇಶ ಮಾಡುತ್ತಿರುವ ಆಶಿಕಾ, ಅಥರ್ವ ಜೊತೆಗೆ ತಮಿಳಿನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ತೆಲುಗು ಪ್ರಾಜೆಕ್ಟ್‌ಗಾಗಿ ಮಾತುಕತೆ ನಡೆಸುತ್ತಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಅವತಾರ ಪುರುಷ ಸಿನಿಮಾ ನಂತರ ಸುನಿ ನಿರ್ದೇಶನದ ಗತ ವೈಭವದಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ. ಗತ ವೈಭವ ಸಿನಿಮಾಫ್ಯಾಂಟಸಿ ಕಥೆಯಾಗಿದ್ದು, ದುಷ್ಯಂತ್ ವಿಎಫ್‌ಎಕ್ಸ್ ಕಲಾವಿದನಾಗಿ ನಟಿಸಿದ್ದಾರೆ. ದೀಪಕ್ ತಿಮ್ಮಪ್ಪ ಹಾಗೂ ನಿರ್ದೇಶಕ ಸುನಿ ಸಹಯೋಗದ ಈ ಚಿತ್ರಕ್ಕೆ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಭರತ್ ಬಿಜೆ ಮತ್ತು ಜೂಡಾ ಸ್ಯಾಂಡಿ ಅವರ ಸಂಗೀತವಿದೆ.