ನಾನಿ ನಟನೆಯ ‘ದಸರಾ’ಗೆ ಶರ್ಮಿಳಾ ಮಾಂಡ್ರೆ ಆಕ್ಷೇಪ: ಟೈಟಲ್ ಬಳಸದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ
ತೆಲುಗು ನಟ ನಾನಿ ನಾಯಕನಾಗಿ ನಟಿಸುತ್ತಿರುವ, ಎಸ್ಎಲ್ವಿ ಬ್ಯಾನರ್ನಡಿ ಸುಧಾಕರ್ ಚೆರುಕುರಿ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ಚಿತ್ರದ ಶೀರ್ಷಿಕೆ ಕುರಿತು ನಟಿ ಶರ್ಮಿಳಾ ಮಾಂಡ್ರೆ ಆಕ್ಷೇಪವೆತ್ತಿದ್ದಾರೆ.
Published: 24th March 2022 12:04 PM | Last Updated: 24th March 2022 01:25 PM | A+A A-

ಶರ್ಮಿಳಾ ಮಾಂಡ್ರೆ
ತೆಲುಗು ನಟ ನಾನಿ ನಾಯಕನಾಗಿ ನಟಿಸುತ್ತಿರುವ, ಎಸ್ಎಲ್ವಿ ಬ್ಯಾನರ್ನಡಿ ಸುಧಾಕರ್ ಚೆರುಕುರಿ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ಚಿತ್ರದ ಶೀರ್ಷಿಕೆ ಕುರಿತು ನಟಿ ಶರ್ಮಿಳಾ ಮಾಂಡ್ರೆ ಆಕ್ಷೇಪವೆತ್ತಿದ್ದಾರೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶರ್ಮಿಳಾ ಅವರು ಪತ್ರ ಬರೆದಿದ್ದಾರೆ. ‘ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್ನಡಿ ನಿರ್ಮಾಣಗೊಳ್ಳುತ್ತಿರುವ, ಸತೀಶ್ ನೀನಾಸಂ ನಾಯಕರಾಗಿ ನಟಿಸುತ್ತಿರುವ ನನ್ನ ಮೊದಲ ಸಿನಿಮಾದ ಶೀರ್ಷಿಕೆಯನ್ನು(ದಸರಾ) 2020ರ ಸೆ.30ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದೆ.
ನಮ್ಮ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎಸ್ಎಲ್ವಿ ಬ್ಯಾನರ್ನಡಿ ತೆಲುಗು ನಿರ್ಮಾಪಕರಾದ ಸುಧಾಕರ್ ಚೆರುಕುರಿ ಅವರು ‘ದಸರಾ’ ಎಂಬ ಶೀರ್ಷಿಕೆಯಲ್ಲೇ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ಸಮಸ್ಯೆಯಾಗಿದೆ.
ಈಗಾಗಲೇ ನಾವು ಹಲವು ವೇದಿಕೆಗಳಲ್ಲಿ ನಮ್ಮ ಸಿನಿಮಾ ಶೀರ್ಷಿಕೆಯನ್ನು ಹಂಚಿಕೊಂಡಿದ್ದು, ತೆಲುಗು ನಿರ್ಮಾಪಕರ ಈ ನಡೆಯಿಂದ ನಮಗೆ ತೊಂದರೆಯಾಗಿದೆ. ಇದರಿಂದ ನಮ್ಮ ಚಿತ್ರದ ಗಳಿಕೆಗೂ ಸಮಸ್ಯೆಯಾಗಲಿದ್ದು, ಕನಿಷ್ಠ ಕನ್ನಡ ಅವತರಣಿಕೆಯಲ್ಲಿ ‘ದಸರಾ’ ಶೀರ್ಷಿಕೆ ಬಳಸದಂತೆ ತಡೆಯಬೇಕು’ ಎಂದು ಶರ್ಮಿಳಾ ಮಾಂಡ್ರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 'ದಸರಾ' ಸಿನಿಮಾದ ಖಡಕ್ ಲುಕ್ ನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಮಿಂಚಿಂಗ್
2019ರಲ್ಲಿ ‘ದಸರಾ’ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು, ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಕಳೆದ ವರ್ಷಾಂತ್ಯಕ್ಕೆ ಪೂರ್ಣಗೊಂಡಿತ್ತು. ಅರವಿಂದ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾದಲ್ಲಿ ಸತೀಶ್ ಅವರು ಪತ್ತೆದಾರನ ಪಾತ್ರ ನಿಭಾಯಿಸುತ್ತಿದ್ದಾರೆ. ಶರ್ಮಿಳಾ ಅವರು ಪತ್ತೆದಾರಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅರವಿಂದ್ ಶಾಸ್ತ್ರಿ ನಿರ್ದೇಶನದ ದಸರಾದಲ್ಲಿ ಸತೀಶ್ ಮತ್ತು ಶರ್ಮಿಳಾ ಮಾಂಡ್ರೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಿಜಯ್ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಸರಾ ಚಿತ್ರಕ್ಕೆ ಜಿಜಿವಿವಿ ಖ್ಯಾತಿಯ ಮಿಧುನ್ ಮುಕುಂದನ್ ಸಂಗೀತ ನೀಡಿದ್ದು, ಅಬಿನ್ ರಾಜೇಶ್ ಛಾಯಾಗ್ರಹಣ ನೀಡಿದ್ದಾರೆ.