'ಜೇಮ್ಸ್' ಪ್ರದರ್ಶನಕ್ಕೆ ಅಡ್ಡಿಯಾಗಲು ಬಿಡುವುದಿಲ್ಲ, ಆತಂಕ ಬೇಡ: ಸಿಎಂ ಬೊಮ್ಮಾಯಿ- ನಟ ಶಿವರಾಜ್ ಕುಮಾರ್ ಭರವಸೆ

ಒಂದೆಡೆ ಹಿಂದಿಯಲ್ಲಿ ಇತ್ತೀಚೆಗೆ ತೆರೆಕಂಡು ದೇಶಾದ್ಯಂತ ಸದ್ದು ಮಾಡುತ್ತಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರ, ಮತ್ತೊಂದೆಡೆ ನಾಳೆ ಬಿಡುಗಡೆಯಾಗುತ್ತಿರುವ ರಾಜಮೌಳಿ ನಿರ್ದೇಶನದ RRR ಚಿತ್ರದ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಕಮರ್ಷಿಯಲ್ ಚಿತ್ರ ‘ಜೇಮ್ಸ್’ ಸಿನಿಮಾಗೆ ಥಿಯೇಟರ್ ಸಮಸ್ಯೆ ಕೇಳಿಬರುತ್ತಿದೆ.

Published: 24th March 2022 12:11 PM  |   Last Updated: 24th March 2022 01:28 PM   |  A+A-


Actor Shivaraj kumar and his wife Geetha met CM Basavaraja Bommai at his residence

ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ ನಟ ಶಿವರಾಜ್ ಕುಮಾರ್ ದಂಪತಿ

Online Desk

ಬೆಂಗಳೂರು: ಒಂದೆಡೆ ಹಿಂದಿಯಲ್ಲಿ ಇತ್ತೀಚೆಗೆ ತೆರೆಕಂಡು ದೇಶಾದ್ಯಂತ ಸದ್ದು ಮಾಡುತ್ತಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರ, ಮತ್ತೊಂದೆಡೆ ನಾಳೆ ಬಿಡುಗಡೆಯಾಗುತ್ತಿರುವ ರಾಜಮೌಳಿ ನಿರ್ದೇಶನದ RRR ಚಿತ್ರದ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಕಮರ್ಷಿಯಲ್ ಚಿತ್ರ ‘ಜೇಮ್ಸ್’ ಸಿನಿಮಾಗೆ ಥಿಯೇಟರ್ ಸಮಸ್ಯೆ ಕೇಳಿಬರುತ್ತಿದೆ.

ಕಳೆದ ವಾರವಷ್ಟೇ ಬಿಡುಗಡೆಯಾಗಿ ಅದ್ಭುತ ಪ್ರದರ್ಶನ ಕಾಣುತ್ತಿರುವ ಜೇಮ್ಸ್ ಚಿತ್ರವನ್ನು ಹಲವು ಚಿತ್ರಮಂದಿರಗಳಲ್ಲಿ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಆರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಪುನೀತ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಮಧ್ಯೆ ಇಂದು ಬೆಳಗ್ಗೆ ನಟ ಪುನೀತ್ ಅಣ್ಣ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ್ದರು. ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ನಡೆಸಿಕೊಂಡು ಹೋಗುತ್ತಿರುವ ಮೈಸೂರಿನ ಶಕ್ತಿದಾಮದ ಹಲವು ಕಾಮಗಾರಿಗಳು ಪೂರ್ತಿಯಾಗಿದ್ದು ಅವುಗಳ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಏಪ್ರಿಲ್ 2ನೇ ವಾರದಲ್ಲಿ ಶಕ್ತಿದಾಮದ ಹಲವು ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮಾಡುತ್ತೇವೆ ಎಂದರು.

ಜೇಮ್ಸ್ ಪ್ರದರ್ಶನಕ್ಕೆ ಸಮಸ್ಯೆಯಾಗಲ್ಲ: ಜೇಮ್ಸ್ ಚಿತ್ರ ಪ್ರದರ್ಶನ ಬಗ್ಗೆ ಶಿವರಾಜ್ ಕುಮಾರ್ ಜೊತೆ ವಿಶೇಷ ಚರ್ಚೆಯಾಗಿಲ್ಲ. ಚಿತ್ರದ ನಿರ್ಮಾಪಕರಿಗೆ ಪ್ರದರ್ಶನಕ್ಕೆ ಸಮಸ್ಯೆಯಾಗಿದ್ದರೆ ಫಿಲ್ಮ್ ಚೇಂಬರ್ ಗೆ ಭೇಟಿಯಾಗಿ ಎಂದು ಹೇಳಿದ್ದೇನೆ. ನಾನು ಕೂಡ ಫಿಲ್ಮ್ ಚೇಂಬರ್ ಗೆ ಮಾತನಾಡಿದ್ದೇನೆ. ಚಿತ್ರ ಪ್ರದರ್ಶನಕ್ಕೆ ಏನಾದರೂ ಸಮಸ್ಯೆಗಳಾದರೆ ಅವರೊರಗೆ ಪ್ರದರ್ಶಕರು, ವಿತರಕರನ್ನು ಕರೆಸಿ ಮಾತನಾಡಿ ಬಗೆಹರಿಸುವ ವಿಧಾನ, ವೇದಿಕೆಯಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರ ಜೊತೆ ಮತ್ತೊಮ್ಮೆ ಮಾತನಾಡುತ್ತೇನೆ, ಸರ್ಕಾರದಿಂದ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಇದನ್ನೂ ಓದಿ: ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆ 

ಇನ್ನು ಸಿಎಂ ಭೇಟಿ ಮಾಡಿ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಒಂದು ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಥಿಯೇಟರ್ ನಿಂದ ಎತ್ತಂಗಡಿ ಮಾಡಬಾರದು, ಕಾಶ್ಮೀರಿ ಫೈಲ್ಸ್ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ, ಹಾಗಿರುವಾಗ ಅದನ್ನು ತೆಗೆಯುವ ಕೆಲಸ ಮಾಡಬಾರದು ಎಂದು ನಾವು ಅಪ್ಪಾಜಿ-ಅಮ್ಮನಿಂದ ಕಲಿತಿರುವ ಪಾಠ. ಜೇಮ್ಸ್ ಚಿತ್ರದಲ್ಲಿ ಭಾವನಾತ್ಮಕ ಸಂಬಂಧವಿದೆ, ನನ್ನ ತಮ್ಮನ ಚಿತ್ರವದು, ಇನ್ನು RRR ಸಿನೆಮಾ ದೊಡ್ಡ ಬಜೆಟ್ ನ ಸಿನೆಮಾ. ಕಾಶ್ಮೀರ್ ಫೈಲ್ಸ್ ಸಿನೆಮಾ ಪ್ರದರ್ಶನಕ್ಕೂ ಜೇಮ್ಸ್ ಗೂ ಸಂಬಂಧವೇ ಇಲ್ಲ ಎಂದರು.

ಕನ್ನಡ ಚಿತ್ರ ಬಂದಾಗ ನಾನು ಎಲ್ಲಾ ಸಿನೆಮಾಗಳಿಗೂ ಬೆಂಬಲ ನೀಡುತ್ತೇನೆ, ಅದು ನನ್ನ ಕುಟುಂಬದ ಚಿತ್ರ ಎಂದಲ್ಲ, ಕನ್ನಡ ಸಿನೆಮಾ ಬಂದಾಗ ಒಗ್ಗಟ್ಟು ತೋರಿಸಬೇಕು. ಜೇಮ್ಸ್ ಪ್ರದರ್ಶನಕ್ಕೆ ಯಾವುದೇ ಸಮಸ್ಯೆಯಾಗಲು ಬಿಡುವುದಿಲ್ಲ. ಸಿಎಂ ಬೊಮ್ಮಾಯಿಯವರೂ ಭರವಸೆ ನೀಡಿದ್ದಾರೆ ಎಂದರು. ಶಿವರಾಜ್ ಕುಮಾರ್ ಜೊತೆ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇದ್ದರು.

ಇದಾದ ಬಳಿಕ ಜೇಮ್ಸ್ ನಿರ್ಮಾಪಕರ ಜೊತೆ ಶಿವರಾಜ್ ಕುಮಾರ್ ಫಿಲ್ಮ್ ಚೇಂಬರ್ ಗೆ ಭೇಟಿ ನೀಡಿ ಅಧ್ಯಕ್ಷ ಜೈರಾಜ್ ಜೊತೆ ಮಾತುಕತೆ ನಡೆಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Parliament

2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷ ಯಾವುದು ಎಂದು ನೀವು ಭಾವಿಸುತ್ತೀರಿ?


Result
ಕಾಂಗ್ರೆಸ್
ಎಎಪಿ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp