ತೆರೆಗೆ ಅಪ್ಪಳಿಸಿದ ರಾಜಮೌಳಿ RRR ಸಿನಿಮಾ, ಪ್ರೇಕ್ಷಕರಿಂದ ಕರತಾಡನ, ರಾಮ್ ಚರಣ್, ಎನ್ ಟಿಆರ್ ಜೀವಮಾನ ಶ್ರೇಷ್ಠ ಪ್ರದರ್ಶನ ಎಂದ ತಜ್ಞರು!
ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ದೇಶಾದ್ಯಂತ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ ತೆರೆಗೆ ಅಪ್ಪಳಿಸಿದ್ದು, ಸಿನಿಮಾ ನೋಡಿದ ಪ್ರೇಕ್ಷಕ ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ.
Published: 25th March 2022 10:03 AM | Last Updated: 26th March 2022 01:29 PM | A+A A-

ಆರ್ ಆರ್ ಆರ್ ಚಿತ್ರ ತೆರೆಗೆ
ಬೆಂಗಳೂರು: ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ದೇಶಾದ್ಯಂತ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ ತೆರೆಗೆ ಅಪ್ಪಳಿಸಿದ್ದು, ಸಿನಿಮಾ ನೋಡಿದ ಪ್ರೇಕ್ಷಕ ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ.
ದೇಶದ್ಯಾಂತ ಇಂದು RRR ಸಿನಿಮಾ ತೆರೆಕಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಮುಂಜಾನೆ 3 ಗಂಟೆಗೆ ದೊಡ್ಡಬಳ್ಳಾಪುರ ನಗರದ ಸೌಂದರ್ಯ ಮಹಲ್ನಲ್ಲಿ ಚಿತ್ರ ಪ್ರದರ್ಶನಗೊಂಡಿತು. ಅಭಿಮಾನಿಗಳಿಗಾಗಿ ಮುಂಜಾನೆಯೇ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಥಿಯೇಟರ್ ತುಂಬಾ ಜಮಾಯಿಸಿದ ಅಭಿಮಾನಿಗಳು ಪರದೆ ಮುಂದೆ ಕುಣಿದು ಕುಪ್ಪಳಿಸಿದರು. ಆರ್ಆರ್ಆರ್ ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಫ್ಯಾನ್ಸ್ ಹೂವಿನ ಸುರಿಮಳೆಗೈದರು. ನಂತರ ಸಿಹಿ ಹಂಚಿ, ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ದೇಶಪ್ರೇಮ, ಸ್ನೇಹ ಮತ್ತು ಮೈ ನವಿರೇಳಿಸುವ ಪೌರುಷಪ್ರಧಾನ ಸರ್ಕಸ್: RRR ಚಿತ್ರ ವಿಮರ್ಶೆ
'ಆರ್ಆರ್ಆರ್' ಸಿನಿಮಾವನ್ನ ಬಾಹುಬಲಿ, ಮಗಧೀರ ಮುಂತಾದ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಭಾರತೀಯ ಚಿತ್ರರಂಗದ ಖ್ಯಾತ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ತೇಜ್ ನಾಯಕರಾಗಿ ಮಿಂಚಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜ್ಯಾದ್ಯಂತ 450 ಥಿಯೇಟರ್ಗಳಲ್ಲಿ ರಿಲೀಸ್
ಆರ್ಆರ್ಆರ್ ಸಿನಿಮಾ (RRR Movie) ರಾಜ್ಯಾದ್ಯಂತ 450 ಥಿಯೇಟರ್ಗಳಲ್ಲಿ ರಿಲೀಸ್ ಆಗಿದ್ದು, ಈ ಪೈಕಿ 170ಕ್ಕೂ ಹಚ್ಚು ಸಿಂಗಲ್ ಸ್ಕ್ರೀನ್ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಇಡೀ ದಿನದ ಟಿಕೆಟ್ ಕೂಡ ಸೋಲ್ಡ್ಔಟಾಗಿ, ನಾಳಿನ ಟಿಕೆಟ್ಗೂ ಬೇಡಿಕೆ ಹೆಚ್ಚಾಗಿದೆ.
ಪಟಾಕಿ ಸಿಡಿಸಿ, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ
ರಾಮ್‌ಚರಣ್, ಜೂ.ಎನ್‌ಟಿಆರ್ ಮತ್ತು ಆಲಿಯಾ ಭಟ್ ಅಭಿನಯದ, ರಾಜಮೌಳಿ ನಿರ್ದೇಶನದ ಆರ್ಆರ್ಆರ್ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಪಾವಗಡ ಪಟ್ಟಣದ ಮಾರುತಿ ಚಿತ್ರಮಂದಿರದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬೆಳಗಿನಜಾವ 3 ಗಂಟೆಗೆ 3ಆರ್ ಫ್ಯಾನ್ ಶೋ ರಿಲೀಸ್ ಮಾಡಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ವರ ವಹಿಸಲಾಗಿದೆ. ಹುಬ್ಬಳ್ಳಿಯಲ್ಲೂ ಆರ್ಆರ್ಆರ್ ಹವಾ ಜೋರಾಗಿದ್ದು, ಇಂದು ಒಂದೇ ದಿನ ಬರೋಬ್ಬರಿ 30 ಶೋ ಆರೆಂಜ್ ಮಾಡಲಾಗಿದೆ. ಎರಡೂ ಥಿಯೆಟರ್ ಹಾಗೂ ಎರಡೂ ಮಲ್ಟಿಪ್ಲೆಕ್ಸ್ ನಲ್ಲಿ ಆರ್ ಆರ್ ಆರ್ ಪ್ರದರ್ಶನ ಕಾಣುತ್ತಿದೆ. ಸುಧಾ ಹಾಗೂ ಶೃಂಗಾರ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಇತ್ತ ಪಿವಿಆರ್ ಹಾಗೂ ಅರ್ಬನ್ ಒಯಾಸಿಸ್ ಮಾಲ್ನಲ್ಲಿ ತಲಾ 10 ಶೋಗಳು ನಡೆಯುತ್ತಿವೆ. ಬೆಳಿಗ್ಗೆ 9ಕ್ಕೆ ಮೊದಲ ಶೋ ಆಯೋಜನೆಯಾಗಿದ್ದು, ಈಗಾಗಲೇ ಮೊದಲ ಶೋ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ಚರಣ್-ಎನ್ಟಿಆರ್ ಫಾನ್ಸ್ ವಾರ್
ಇದೇ ವೇಳೆ ಜೂ.ಎನ್‌ಟಿಆರ್, ಚರಣ್ ಅಭಿಮಾನಿಗಳ ಮಧ್ಯೆ ಫೈಟ್ ಶುರುವಾಗಿದ್ದು, ತಮ್ಮ ಹೀರೋನೆ ಹೆಚ್ಚೆಂಬ ವಿಚಾರಕ್ಕೆ ಬೆಂಗಳೂರಿನ ಅಂಜನ್ ಚಿತ್ರಮಂದಿರದಲ್ಲಿ ಗಲಾಟೆ ನಡೆದಿದೆ. ಅಭಿಮಾನಿಗಳ ಕಿತ್ತಾಟದಿಂದ ಇತರೆ ಪ್ರೇಕ್ಷಕರಿಗೆ ಕಿರಿಕಿರಿಯಾಗಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಫ್ಯಾನ್ಸ್ ವಾರ್ ಹೋಗಿದೆ ಎನ್ನಲಾಗಿದೆ.