
ಶೋಕಿವಾಲಾ ಸಿನಿಮಾ ಸ್ಟಿಲ್
ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಸಿನಿಮಾ ಬೇಸಿಗೆ ರಜೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅಡಿಯಲ್ಲಿ ಟಿ.ಆರ್ ಚಂದ್ರಶೇಖರ್ ನಿರ್ಮಾಣದ ಪ್ರೇಮಕಥಾ ಹಂದರವುಳ್ಳ ಸಿನಿಮಾ ಏಪ್ರಿಲ್ 29 ರಂದು ರಿಲೀಸ್ ಆಗಲಿದೆ.
ಶೋಕಿವಾಲಾ ಗ್ರಾಮೀಣ ಹಿನ್ನಲೆಯಲ್ಲಿ ಮೂಡಿಬಂದಿದ್ದು, ಲವ್ ಯೂ ರಚ್ಚು ನಂತರ ಅಜಯ್ ರಾವ್ ನಟನೆಯ ಮತ್ತೊಂದು ಸಿನಿಮಾ ಶೋಕಿವಾಲಾ ರಿಲೀಸ್ ಆಗುತ್ತಿದೆ. ಅಜಯ್ ಹಳ್ಳಿಯ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಸ್ಯಾಂಡಲ್ ವುಡ್ ಜನಪ್ರಿಯ ನಟಿ ಸಹೋದರನ ವಿರುದ್ಧ ರೇಪ್ ಕೇಸ್!
ಚಿತ್ರದ ಬಹುತೇಕ ಚಿತ್ರೀಕರಣವನ್ನು ಮಂಡ್ಯ ಮತ್ತು ಚನ್ನಪಟ್ಟಣದಲ್ಲಿ ಮಾಡಲಾಗಿದೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಇದ್ದು, ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದು, ಶಿವ ಸೀನ ಛಾಯಾಗ್ರಹಣವಿದೆ.