'ಪುರುಷೋತ್ತಮನ ಪ್ರಸಂಗ' ಮೂಲಕ ನಾಯಕನಾಗಿ ಅಜಯ ಪೃಥ್ವಿ ಸ್ಯಾಂಡಲ್ ವುಡ್ ಗೆ ಪ್ರವೇಶ
ಅಜಯ ಪೃಥ್ವಿ ರಾಷ್ಟ್ರಕೂಟರ ನಟನೆಯ ಆಸಕ್ತಿ ದಿವಂಗತ ಎಎಸ್ ಮೂರ್ತಿಯವರ ನಾಟಕ ತಂಡ ವಿಜಯನಗರ ಬಿಂಬವನ್ನು ಸೇರಿದಾಗ ಪ್ರಾರಂಭವಾಯಿತು. ಎಸ್ ವಿ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅವರು 20 ಪ್ರಾದೇಶಿಕ ನಾಟಕಗಳ ಭಾಗವಾಗಿದ್ದಾರೆ.
Published: 28th March 2022 12:55 PM | Last Updated: 28th March 2022 01:30 PM | A+A A-

ಚಿತ್ರದ ದೃಶ್ಯ
ಅಜಯ ಪೃಥ್ವಿ ರಾಷ್ಟ್ರಕೂಟರ ನಟನೆಯ ಆಸಕ್ತಿ ದಿವಂಗತ ಎಎಸ್ ಮೂರ್ತಿಯವರ ನಾಟಕ ತಂಡ ವಿಜಯನಗರ ಬಿಂಬವನ್ನು ಸೇರಿದಾಗ ಪ್ರಾರಂಭವಾಯಿತು. ಎಸ್ ವಿ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅವರು 20 ಪ್ರಾದೇಶಿಕ ನಾಟಕಗಳ ಭಾಗವಾಗಿದ್ದಾರೆ.
ತಮ್ಮ ಕಾನೂನು ಶಿಕ್ಷಣವನ್ನು ಮಧ್ಯದಲ್ಲಿ ಬಿಟ್ಟು ಟೊರೊಂಟೊ ಫಿಲ್ಮ್ ಸ್ಕೂಲ್ನಲ್ಲಿ ನಟನಾ ಕೋರ್ಸ್ ಅನ್ನು ಆರಂಭಿಸಿದರು. ಕೆನಡಾದ ನಿರ್ದೇಶಕ ಅಲೆಕ್ಸ್ ಗೋಲ್ಡ್ ಪೊಚಿನ್ ಅವರ ಅಡಿಯಲ್ಲಿ ತರಬೇತಿ ಪಡೆದ ಅದೃಷ್ಟಶಾಲಿಯಾಗಿದ್ದೆ. ಅವರ ಒಂದು ನಾಟಕಕ್ಕಾಗಿ ಆಡಿಷನ್ ಮೂಲಕ ನಾನು ಆಯ್ಕೆಯಾಗಿದ್ದು ದೊಡ್ಡ ಸಾಧನೆ ಎನ್ನುತ್ತಾರೆ.
ಈಗ ಬೆಳ್ಳಿತೆರೆಗೆ ಪ್ರವೇಶಿಸಲು ಬಯಸುತ್ತಿರುವ ಪೃಥ್ವಿ, ಸ್ಯಾಂಡಲ್ವುಡ್ನಲ್ಲಿ ಅನೂಪ್ ಆಂಟನಿ ಅವರ ಇನ್ನೂ ಬಿಡುಗಡೆಯಾಗದ ಮೆಹಬೂಬಾದಲ್ಲಿ ಒಂದು ಸಣ್ಣ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಭರತ್ ಜಿ ಅವರ ಸ್ಪೂಕಿ ಕಾಲೇಜ್ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಅಜಯ ಪೃಥ್ವಿ ಈಗ ಪುರುಷೋತ್ತಮನ ಪ್ರಸಂಗದಲ್ಲಿ ನಾಯಕನಾಗಿ ನಟಿಸಲು ಉತ್ಸುಕರಾಗಿದ್ದಾರೆ. ಕೌಟುಂಬಿಕ ಹಾಸ್ಯ ಪ್ರಧಾನ ಚಿತ್ರ ಇದಾಗಿದೆ.
ಕರಾವಳಿ ಭಾಗದಲ್ಲಿ ಚಿತ್ರ ಬಹುತೇಕ ಚಿತ್ರೀಕರಣವಾಗಿದ್ದು, ದೇವದಾಸ್ ಕಾಪಿಕಾಡ್ ಅವರಂತವರೊಂದಿಗೆ ನಟಿಸಲು ಅವಕಾಶ ಸಿಕ್ಕಿದೆ. “ಮಂಗಳೂರಿನ ಖ್ಯಾತ ಚಿತ್ರನಿರ್ಮಾಪಕ ಮತ್ತು ತುಳು ಇಂಡಸ್ಟ್ರಿಯಲ್ಲಿ ಖ್ಯಾತರಾಗಿರುವ ಒಬ್ಬರೊಂದಿಗೆ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಸಂತೋಷವಾಯಿತು. ಅವರ ಮಗ ಅರ್ಜುನ್ ಕಾಪಿಕಾಡ್, ಪ್ರಸ್ತುತ ತುಳು ಚಲನಚಿತ್ರ ನಾಯಕನಾಗಿದ್ದು, ಪುರುಷೋತ್ತಮನ ಪ್ರಸಂಗವನ್ನು ಸಹ-ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಕನ್ನಡದಲ್ಲಿ ಅವರ ಚೊಚ್ಚಲ ಪ್ರವೇಶವಾಗಿದೆ, ಬಹುತೇಕ ಶೂಟಿಂಗ್ ಮುಗಿಸಿದ್ದೇವೆ ಮತ್ತು ದುಬೈನಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ ಎಂದು ಅಜಯ್ ಪೃಥ್ವಿ ಹೇಳುತ್ತಾರೆ.
ಅಜಯ್ ಅವರ ಮುಂದಿನ ಚಿತ್ರ ರುದ್ರೇಶ್ ಎಂ ಗೌಡ ಅವರೊಂದಿಗೆ. ಯುಪಿಎಸ್ ಪರೀಕ್ಷೆಗೆ ತಯಾರಾಗುವ ಯುವಕನ ಕಥೆಯಾಧಾರಿಸಿದ ಚಿತ್ರವಾಗಿದೆ. ಚಿತ್ರ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ನಿರ್ದೇಶಕ ಅಂಬರೀಷ್ ಜೊತೆ ಮತ್ತೊಂದು ಪ್ರಾಜೆಕ್ಟ್ ಗೆ ಕೈಹಾಕಲಿದ್ದಾರೆ.