ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ: ವೇದಿಕೆ ಮೇಲೆ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ನಟ ವಿಲ್ ಸ್ಮಿತ್!
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ವೇದಿಕೆ ಮೇಲೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
Published: 28th March 2022 12:32 PM | Last Updated: 28th March 2022 01:28 PM | A+A A-

ಸಹನಟನಿಗೆ ಕಪಾಳ ಮೋಕ್ಷ ಮಾಡಿದ ನಟ ವಿಲ್ ಸ್ಮಿತ್
ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ವೇದಿಕೆ ಮೇಲೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
ನಟ ಹಾಗೂ ನಿರೂಪಕ ಕ್ರಿಸ್ ರಾಕ್ ಅವರಿಗೆ ವಿಲ್ ಸ್ಮಿತ್ ಕೆನ್ನೆಗೆ ಹೊಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಲ್ ಸ್ಮಿತ್ ಅವರ ಪತ್ನಿಯನ್ನು ಉಲ್ಲೇಖಿಸಿದಕ್ಕಾಗಿ ನಟ ವಿಲ್ ಸ್ಮಿತ್ ಕ್ರಿಸ್ ರಾಕ್ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಇನ್ನು ಆಸ್ಕರ್ ವೇದಿಕೆಯ ಮೇಲೆ ಈ ಘಟನೆ ನಡೆದಿರುವುದಕ್ಕೆ ಆಯೋಜಕರು, ಪ್ರೇಕ್ಷಕರ ಕ್ಷಮೆ ಕೋರಿದ್ದಾರೆ.
ಏನಿದು ಘಟನೆ?
ನಟ ವಿಲ್ ಸ್ಮಿತ್ ಹಾಗೂ ಪತ್ನಿ ಜಾಡಾ ಪಿಂಕೆಟ್ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು. ಕ್ರಿಸ್ ರಾಕ್ ಅವರು ವೇದಿಕೆಯ ಕೆಳ ಭಾಗದಲ್ಲಿ ವಿಲ್ ಸ್ಮಿತ್ ದಂಪತಿ ಭೇಟಿಯಾಗಿ ವಿಶ್ ಮಾಡಿದ್ದರು. ಇದೇ ವೇಳೆ ಜಾಡ ಪಿಂಕೆಟ್ ತಲೆಯ (ತಲೆ ಬೋಳಿಸಿಕೊಂಡಿದ್ದರು) ಬಗ್ಗೆ ತಮಾಷೆ ಮಾಡಿದ್ದರು. ಜಾಡ ಈ ವಿಷಯವನ್ನು ವಿಲ್ ಸ್ಮಿತ್ ಅವರಿಗೆ ತಿಳಿಸಿದ್ದರು. ಕ್ರಿಸ್ ರಾಕ್ ಸಾಕ್ಷ್ಯಚಿತ್ರವೊಂದರ ಪ್ರಶಸ್ತಿ ಘೋಷಣೆಗಾಗಿ ವೇದಿಕೆ ಮೇಲೆ ನಿರೂಪಣೆ ಆರಂಭಿಸುತ್ತಿದ್ದಂತೆ, ವಿಲ್ ಸ್ಮಿತ್ ವೇದಿಕೆ ಹತ್ತಿ ಕ್ರಿಸ್ ರಾಕ್ ಕೆನ್ನೆಗೆ ಹೊಡೆದು ನಿನ್ನ ಕೊಳಕಾದ ಬಾಯಿಯಿಂದ ನನ್ನ ಪತ್ನಿ ಹೆಸರು ಹೇಳಬೇಡ ಎಂದು ಎಚ್ಚರಿಸಿದರು.
Will Smith just Slaps Chris Rock on#Oscars front of everyone and he mean it . pic.twitter.com/z7pPtOlp7v
— Ali Abbas (@hajano111) March 28, 2022
ಬಳಿಕ ಮತ್ತೆ ತಮ್ಮ ಸೀಟ್ ನಲ್ಲಿ ಕುಳಿತು ಮತ್ತೆ ಕ್ರಿಸ್ ರಾಕ್ ರನ್ನು ಉದ್ದೇಶಿಸಿ ಮಾತನಾಡಿದ 'ನನ್ನ ಪತ್ನಿಯ ಬಗ್ಗೆ ಮಾತನಾಡಬೇಡ' ಎಂದು ಜೋರಾಗಿ ಹೇಳಿದರು. ಕೂಡಲೇ ಕ್ರಿಸ್ ರಾಕ್ ಓಕೆ..ಓಕೆ ಎಂದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೊಳಕು ಬಾಯಿಂದ ಹೇಳಬೇಡ' ಎಂದು ಕಿರುಚಿದರು. ನಂತರ ಕ್ರಿಸ್ ರಾಕ್ ಸುಮ್ಮನಾದರು. ಇದಾದ ನಂತರ ಕ್ರಿಸ್ ರಾಕ್ ಕಾರ್ಯಕ್ರಮವನ್ನು ಮುಂದುವರೆಸಿದರು.
ಎಲ್ಲರೂ ಈ ಘಟನೆಯನ್ನು ತಮಾಷೆ ಎಂದು ಭಾವಿಸಿದ್ದರು. ಆದರೆ ಆಸ್ಕರ್ ಆಯೋಜಕರು ಸ್ಮಿತ್ ಹಾಗೂ ಕ್ರಿಸ್ ರಾಕ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದಾಗ ಇದರ ಗಂಭೀರತೆ ತಿಳಿಯಿತು ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ. ಅಂದಹಾಗೆ 'ಕಿಂಗ್ ರಿಚರ್ಡ್ಸ್' ಸಿನಿಮಾದ ನಟನೆಗೆ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.