
ತಲೆದಂಡ ಚಿತ್ರತಂಡ
ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಚಿತ್ರ ಏಪ್ರಿಲ್ 1ರಂದು ತೆರೆ ಕಾಣುತ್ತಿದೆ. ಅರೆ ಬುದ್ದಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಉಬ್ಬು ಹಲ್ಲಿನ ಹುಡುಗನಾಗಿ ಎಲ್ಲರ ಗಮನ ಸೆಳೆಯುತ್ತಾರೆ.
ಇದನ್ನೂ ಓದಿ: ಅಜಯ್ ರಾವ್ ನಟನೆಯ 'ಶೋಕಿವಾಲಾ' ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್!
ನಾಯಕಿಯಾಗಿ ಸಾಕಿ ಪಾತ್ರದಲ್ಲಿ ಚೈತ್ರಾ ಆಚಾರ್, ವಿಜಯ್ ತಾಯಿಯಾಗಿ ಮಂಗಳ (ರಂಗಾಯಣ ರಘು ಪತ್ನಿ), ತಂದೆಯ ಪಾತ್ರದಲ್ಲಿ ರಮೇಶ್ ಪಂಡಿತ್, ಎಂ.ಎಲ್.ಎ ಆಗಿ ಮಂಡ್ಯ ರಮೇಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಿ.ಸುರೇಶ್ ಇದ್ದಾರೆ.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್
ಅಧುನಿಕತೆ ನೆಪದಲ್ಲಿ ನಾವು ಪ್ರಕೃತಿಯನ್ನು ಯಾವ ರೀತಿ ಹಾಳು ಮಾಡುತ್ತಿದ್ದೇವೆ ಎಂಬದೇ 'ತಲೆದಂಡ' ಸಿನಿಮಾದ ಕಥಾಹಂದರ. ಈವರೆಗೂ ಐದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ ಎನ್ನುವುದು ವಿಶೇಷ.
ಇದನ್ನೂ ಓದಿ: ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ದುಶ್ಯಂತ್ ಗೆ ಆಶಿಕಾ ರಂಗನಾಥ್ ನಾಯಕಿ?
ಹಲವು ದೊಡ್ಡ ದೊಡ್ಡ ಚಿತ್ರಗಳ ನಡುವೆ ಏಪ್ರಿಲ್ ಒಂದರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಹರಸಿ ಎಂದರು ನಿರ್ದೇಶಕ ಪ್ರವೀಣ್ ಕೃಪಾಕರ್. ಸಿನಿಮೆಟೊಗ್ರಫಿ ಹೊಣೆಯನ್ನು ಅಶೋಕ್ ಕಶ್ಯಪ್ ಹೊತ್ತಿದ್ದರೆ, ಹರಿಕಾವ್ಯ ಸಂಗೀತ ನಿರ್ದೇಶನ, ಹಾಗೂ ಬಿ.ಎಸ್.ಕೆಂಪರಾಜ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ನಾನಿ ನಟನೆಯ ‘ದಸರಾ’ಗೆ ಶರ್ಮಿಳಾ ಮಾಂಡ್ರೆ ಆಕ್ಷೇಪ: ಟೈಟಲ್ ಬಳಸದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ