ಕಚಗುಳಿ ಇಟ್ಟ ‘ಕಂಬ್ಳಿ ಹುಳ'’ ಫರ್ಸ್ಟ್ ಲುಕ್ ಬಿಡುಗಡೆ: ಹೊಸಬರ ಪ್ರಯತ್ನಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್!
ನೈಜ ಘಟನೆಯಾಧಾರಿತ 'ಕಂಬ್ಳಿ ಹುಳ'' ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.
Published: 29th March 2022 10:40 AM | Last Updated: 29th March 2022 01:13 PM | A+A A-

ನಾಯಕ ಅಂಜನ್, ನಾಯಕಿ ಅಶ್ವಿತಾ ಹೆಗ್ಡೆ
ಸ್ಯಾಂಡಲ್ ವುಡ್ ನಲ್ಲಿ 'ಕಂಬ್ಳಿ ಹುಳ' ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. ಒಂದಷ್ಟು ರಂಗಭೂಮಿ ಕಲಾವಿದರು ಸೇರಿ ಅಭಿನಯಿಸುತ್ತಿರೋ ಕಂಬ್ಳಿ ಹುಳ ಸಿನಿಮಾದ ಫರ್ಸ್ಟ್ ಲುಕ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2 ಟ್ರೈಲರ್: ಚಿತ್ರರಂಗದಲ್ಲಿ ಹೊಸ ದಾಖಲೆ, 24 ಗಂಟೆಗಳಲ್ಲಿ 109 ಮಿಲಿಯನ್ ಗೂ ಹೆಚ್ಚು ವೀಕ್ಷಣೆ!
ಈ ಹಿಂದೆ ಗೋಣಿಚೀಲ, ಜೋಡಿ ಕುದುರೆ ಎಂಬ ಕಿರುಚಿತ್ರ ಮಾಡಿ ಪ್ರಶಂಸೆ ಗಳಿಸಿರುವ ನವನ್ ಶ್ರೀನಿವಾಸ್ ಕಂಬ್ಳಿ ಹುಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಂಗಭೂಮಿ ಕಲಾವಿದರಾದ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದರೆ, ಅಶ್ವಿತಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ರೋಹಿತ್ ಕುಮಾರ್, ದೀಪಕ್ ರೈ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ಶಾನ್ವಿ ಶ್ರೀವಾಸ್ತವ್ ಅಭಿನಯದ 'ಕಸ್ತೂರಿ ಮಹಲ್' ಬಿಡುಗಡೆ ಫಿಕ್ಸ್: ದಿನೇಶ್ ಬಾಬು 50ನೇ ಸಿನಿಮಾ
ನೈಜ ಘಟನೆಯಾಧಾರಿತ ಕಂಬ್ಳಿ ಹುಳ ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಸತೀಶ್ ರಾಜೇಂದ್ರನ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಜಿತೇಂದ್ರ ನಾಯಕ್ ಹಾಗೂ ರಾಘವೇಂದ್ರ ಸಂಕಲನ, ಹೊಸ ಪ್ರತಿಭೆ ಶಿವಪ್ರಸಾದ್ ಸಂಗೀತ ಸಿನಿಮಾಗಿದೆ.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್