
'ಸ್ಟಾಕರ್' ಚಿತ್ರತಂಡ
ಕಿಶೋರ್ ಭಾರ್ಗವ್ ಆಕ್ಷನ್ ಕಟ್ ಹೇಳಿರುವ 'ಸ್ಟಾಕರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 31ಕ್ಕೆ 30 ಸ್ಕ್ರೀನ್ ಗಳಲ್ಲಿ ರಾಜ್ಯಾದ್ಯಂತ ಸ್ಟಾಕರ್ ಸಿನಿಮಾ ಬಿಡುಗಡೆಯಾಗಲಿದೆ. ಕಿಶೋರ್ ಭಾರ್ಗವ್ ಅವ್ರು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಳಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು ಎನ್ನುವುದು ವಿಶೇಷ.
ಇದನ್ನೂ ಓದಿ: ಕಚಗುಳಿ ಇಟ್ಟ ‘ಕಂಬ್ಳಿ ಹುಳ'’ ಫರ್ಸ್ಟ್ ಲುಕ್ ಬಿಡುಗಡೆ: ಹೊಸಬರ ಪ್ರಯತ್ನಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಸಾಥ್!
ಸ್ಟಾಕರ್ ಸಿನಿಮಾ ಫಸ್ಟ್ ಲುಕ್ ಮೂಲಕ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಸ್ಟಾಕರ್ ಸಿನಿಮಾದಲ್ಲಿ ಬೆಳದಿಂಗಳ ಬಾಲೆ ಸುಮನ್ ನರ್ಗಕರ್, ರಾಮ್, ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಶಾನ್ವಿ ಶ್ರೀವಾಸ್ತವ್ ಅಭಿನಯದ 'ಕಸ್ತೂರಿ ಮಹಲ್' ಬಿಡುಗಡೆ ಫಿಕ್ಸ್: ದಿನೇಶ್ ಬಾಬು 50ನೇ ಸಿನಿಮಾ
ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು, ಎಸ್ ಎಂ ಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ಆಡಿ ಎಂ ಎನ್ ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಬಗ್ಗೆ ನನಗೆ ವಿಶ್ವಾಸವಿದೆ. ಒಂದೂವರೆ ಗಂಟೆ ಅವಧಿಯ ಚಿತ್ರ, ಸ್ಟಾಕರ್ ವೇಗದ ಥ್ರಿಲ್ಲರ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ. ಸ್ಕಂಕ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ, ವಿನೋದ್ ಜೆ ರಾಜಿ ಅವರ ಛಾಯಾಗ್ರಹಣವಿದೆ ಎಂದು ನಿರ್ದೇಶಕ ಕಿಶೋರ್ ಭಾರ್ಗವ್ ಹೇಳಿದರು.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್