ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ' RRR! ಮೂರೇ ದಿನದಲ್ಲಿ ಬರೋಬ್ಬರಿ 499 ಕೋಟಿ ರೂ. ಕಲೆಕ್ಷನ್
ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾ ಮತ್ತೆ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಶುಕ್ರವಾರ ಬಿಡುಗಡೆಯಾಗಿರುವ RRR ಸಿನಿಮಾ ಮೂರೇ ದಿನದಲ್ಲೇ ಬರೋಬ್ಬರಿ 499 ಕೋಟಿ ಬಾಚಿದೆ.
Published: 29th March 2022 12:45 AM | Last Updated: 29th March 2022 12:52 AM | A+A A-

ಆರ್ ಆರ್ ಆರ್ ಫೋಸ್ಟರ್
ಹೈದ್ರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾ ಮತ್ತೆ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಶುಕ್ರವಾರ ಬಿಡುಗಡೆಯಾಗಿರುವ RRR ಸಿನಿಮಾ ಮೂರೇ ದಿನದಲ್ಲೇ ಬರೋಬ್ಬರಿ 499 ಕೋಟಿ ಬಾಚಿದೆ.
ಈ ಮೂಲಕ ಇಡೀ ವಿಶ್ವದಲ್ಲೇ ವೀಕೆಂಡ್ ನಲ್ಲಿ 499 ಕೋಟಿ ಗಳಿಸಿರುವ ಖ್ಯಾತಿಗೆ ಆರ್‌ಆರ್‌ಆರ್ ಚಿತ್ರ ಸೇರ್ಪಡೆಯಾಗಿದೆ. ಜಾಗತಿಕ ಮಟ್ಟದಲ್ಲಿ ಆರ್‌ಆರ್‌ಆರ್ ಸಿನಿಮಾ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡ್ತಿದೆ. ಮೂರನೇ ದಿನದವರೆಗಿನ ಜಾಗತಿಕ ಕಲೆಕ್ಷನ್ ಅಂಕಿಅಂಶಗಳ ಪ್ರಕಾರ ಆರ್‌ಆರ್‌ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿ ಮುನ್ನುಗ್ಗುತ್ತಿದೆ. ಭಾನುವಾರ ಒಂದು ದಿನದ ಗಳಿಕೆ ಸುಮಾರು 118 ಕೋಟಿ ರೂ. ಆಗಿದ್ದು, ಬಾಲಿವುಡ್ , ಹಾಲಿವುಡ್, ಕಾಲಿವುಡ್ ಇಂಡಸ್ಟ್ರೀಗಳನ್ನು ಗರಬಡಿದಂತೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರೇಡ್ ಅನಾಲಿಸ್ಟ್ ಮನೋಬಲ ವಿಜಯ ಬಾಲನ್, ಆರ್ ಆರ್ ಆರ್ ಸಿನಿಮಾ ವಾರಾಂತ್ಯದಲ್ಲಿ 490 ಕೋಟಿ ರೂ. ಗಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇಷ್ಟೊಂದು ಪ್ರಮಾಣದ ಗಳಿಕೆ ಮೆಚ್ಚುವಂತಹದ್ದಾಗಿದ್ದರೂ ಬಾಹುಬಲಿ ಗಳಿಕೆಗಿಂತ ಕಡಿಮೆ. ಬಾಹು ಬಲಿ ಬಿಡುಗಡೆಯಾದ ಮೊದಲ ವಾರಾಂತ್ಯಕ್ಕೆ 526 ಕೋಟಿ ಗಳಿಸಿ ಎಲ್ಲ ದಾಖಲೆಗಳನ್ನು ಮುರಿದಿತ್ತು.
ಆರ್ ಆರ್ ಆರ್ ಸಿನಿಮಾ ಮೊದಲ ದಿನ 257. 15 ಕೋಟಿ, ಎರಡನೇ ದಿನ 114. 38 ಕೋಟಿ ಹಾಗೂ ಭಾನುವಾರ 118. 63 ಕೋಟಿ ರೂ. ಗಳಿಸಿದೆ. ಹಿಂದಿಯಲ್ಲಿ ಮೂರು ದಿನಗಳಲ್ಲಿ 74. 5 ಕೋಟಿ ಬಾಚಿದೆ.
#RRRMovie WW Box Office
— Manobala Vijayabalan (@ManobalaV) March 28, 2022
Rare milestone of HAT-TRICK + cr
Day 1 - ₹ 257.15 cr
Day 2 - ₹ 114.38 cr
Day 3 - ₹ 118.63 cr
Total - ₹ 490.16 cr#RamCharan #JrNTR