‘RRR’ ನಿರ್ಮಾಪಕ ದಾನಯ್ಯ ಪುತ್ರ ಚಿತ್ರರಂಗಕ್ಕೆ ಎಂಟ್ರಿ: 'ಅಧಿರಾ' ಟೀಸರ್ ಬಿಡುಗಡೆಗೊಳಿಸಿದ ರಾಜಮೌಳಿ
ಭಾರತದ ಪೌರಾಣಿಕ ಪಾತ್ರಗಳಿಂದ ಸ್ಫೂರ್ತಿ ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ, ಹಾಲಿವುಡ್ ಸೂಪರ್ ಹೀರೋ ಸಿನಿಮಾಗಳ ಪರಿಕಲ್ಪನೆಯಲ್ಲಿ 'ಅಧಿರಾ' ಸಿನಿಮಾ ನಿರ್ಮಿಸುತ್ತಿದ್ದಾರೆ.
Published: 29th March 2022 12:06 PM | Last Updated: 29th March 2022 12:56 PM | A+A A-

ಸಿನಿಮಾ ಪೋಸ್ಟರ್
'ಅಧಿರಾ' ಮೂಲಕ ‘RRR’ ನಿರ್ಮಾಪಕ ದಾನಯ್ಯ ಅವರ ಪುತ್ರ ಕಲ್ಯಾಣ್ ದಾಸರಿಯನ್ನು ಟಾಲಿವುಡ್ ನಲ್ಲಿ ಪರಿಚಯಿಸುತ್ತಿದ್ದಾರೆ. 'ಅಧಿರಾ' ಸಿನಿಮಾದ ಟೀಸರ್ ಅನ್ನು ರಾಜಮೌಳಿ, ರಾಮ್ ಚರಣ್, ತಾರಕ್ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2 ಟ್ರೈಲರ್: ಚಿತ್ರರಂಗದಲ್ಲಿ ಹೊಸ ದಾಖಲೆ, 24 ಗಂಟೆಗಳಲ್ಲಿ 109 ಮಿಲಿಯನ್ ಗೂ ಹೆಚ್ಚು ವೀಕ್ಷಣೆ!
ಸೂಪರ್ ಹೀರೋ ಹನುಮಾನ್, ಆಕ್ಷನ್ ಥ್ರಿಲ್ಲರ್ ಕಲ್ಕಿ, ಜೊಂಬಿ ರೆಡ್ಡಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕ್ರಿಯೇಟಿವ್ ಜೀನಿಯಸ್ ಡೈರೆಕ್ಟರ್ ಪ್ರಶಾಂತ್ ವರ್ಮಾ 'ಅಧಿರಾ' ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ' RRR! ಮೂರೇ ದಿನದಲ್ಲಿ ಬರೋಬ್ಬರಿ 499 ಕೋಟಿ ರೂ. ಕಲೆಕ್ಷನ್
ಭಾರತದ ಪೌರಾಣಿಕ ಪಾತ್ರಗಳಿಂದ ಸ್ಫೂರ್ತಿ ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ, ಹಾಲಿವುಡ್ ಸೂಪರ್ ಹೀರೋ ಸಿನಿಮಾಗಳ ಪರಿಕಲ್ಪನೆಯಲ್ಲಿ 'ಅಧಿರಾ' ಸಿನಿಮಾವನ್ನು ತಯಾರಿಸ್ತಿದ್ದು, ಅದ್ಭುತ ಸಾಹಸ ದೃಶ್ಯಗಳು ಸಿನಿಮಾದಲ್ಲಿರಲಿವೆ.
ಇದನ್ನೂ ಓದಿ: ಪುಷ್ಪ ಸಿನಿಮಾಗಿಂತ ಕೆಜಿಎಫ್ ಯಾಕೆ ಬೆಸ್ಟು: 10 ಕಾರಣಗಳು
ಮೊದಲ ಟೀಸರ್ ಮೂಲಕವೇ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡಿರುವ ಕಲ್ಯಾಣ್ ದಾಸರಿ ಭರವಸೆ ಮೂಡಿಸಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ 'ಅಧಿರಾ' ಸಿನಿಮಾ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್