'ಶಿವಲಿಂಗ' ನಂತರ ಮಾತೃಭಾಷೆ ಕನ್ನಡಕ್ಕೆ ಮರಳಲು ಉತ್ತಮ ಸ್ಕ್ರಿಪ್ಟ್ ಗಾಗಿ ಹುಡುಕುತ್ತಿದ್ದೆ: ವೇದಿಕಾ
ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಸಿನಿಮಾ ರಿಲೀಸ್ ಗಾಗಿ ಹಲವು ದಿನಗಳಿಂದ ಕಾಯುತ್ತಿದ್ದು, ಅಂತಿಮವಾಗಿ ಏಪ್ರಿಲ್ 1 ರಂದು ಸಿನಿಮಾ ರಿಲೀಸ್ ಆಗಲಿದೆ
Published: 30th March 2022 02:01 PM | Last Updated: 30th March 2022 02:55 PM | A+A A-

ವೇದಿಕಾ
ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಸಿನಿಮಾ ರಿಲೀಸ್ ಗಾಗಿ ಹಲವು ದಿನಗಳಿಂದ ಕಾಯುತ್ತಿದ್ದು, ಅಂತಿಮವಾಗಿ ಏಪ್ರಿಲ್ 1 ರಂದು ಸಿನಿಮಾ ರಿಲೀಸ್ ಆಗಲಿದೆ. ಸುಜಯ್ ಕೆ ಶ್ರೀ ಹರಿ ನಿರ್ದೇಶನದಲ್ಲಿ ತಯಾರಾಗಿರುವ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಉಪೇಂದ್ರಗೆ ವೇದಿಕಾ ನಾಯಕಿಯಾಗಿದ್ದಾರೆ.
ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲು ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ಆದರೆ ಬಿಡುಗಡೆಗೆ ಸಮಯ ಸರಿಯಾಗಿರಲಿಲ್ಲ, ಕೋವಿಡ್ ಸಾಂಕ್ರಾಮಿಕ ಮನರಂಜನಾ ಉದ್ಯಮಕ್ಕೆ ಭಾರೀ ಹೊಡೆತ ನೀಡಿತ್ತು. ಸಿನಿಮಾ ರಿಲೀಸ್ ಮಾಡುವ ಸಂಬಂಧ ಸಂದಿಗ್ಧತೆ ಎದುರಾಗದಿತ್ತು, ಈ ವೇಳೆ ಒಟಿಟಿಗಾಗಿ ಕೆಲಸ ಸಿನಿಮಾ ಮಾಡಿದೆ ಎಂದಿದ್ದಾರೆ.
ಹೋಮ್ ಮಿನಿಸ್ಟರ್ ಸಿನಿಮಾ ಮೇಲೆ ನಿರ್ದೇಶಕರು ಬಹಳ ನಂಬಿಕೆ ಇಟ್ಟಿದ್ದರು. ಉಪೇಂದ್ರ ನಟನೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂದು ನಂಬಿದ್ದಾರೆ.
ಈಗ ಯುಗಾದಿ ಹಬ್ಬದ ಸಂದರ್ಭದಲ್ಲಿ ಅಂದರೆ ಏಪ್ರಿಲ್ 1 ರಂದು ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಹೋಮ್ ಮಿನಿಸ್ಟರ್ ನಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ವೇದಿಕೆ ಮೊದಲ ಬಾರಿಗೆ ಪತ್ರಕರ್ತೆಯಾಗಿ ಅಭಿನಯಿಸಿದ್ದೇನೆ, ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತೇನೆ. ಶಿವರಾಜ್ ಕುಮಾರ್ ಜೊತೆಯಲ್ಲಿ ಶಿವಲಿಂಗ ಸಿನಿಮಾ ನಂತರ ಕನ್ನಡಕ್ಕೆ ಮರಳಲು ಉತ್ತಮ ಸ್ಕ್ರಿಪ್ಟ್ ಗಾಗಿಕಾಯುತ್ತಿದ್ದೆ, ಹೋಮ್ ಮಿನಿಸ್ಟರ್ ಸಿನಿಮಾ ನನಗೆ ಮತ್ತೆ ಅವಕಾಶ ಕಲ್ಪಿಸಿತು ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ನಾನು ಇಂದಿನ ಮಹಿಳೆಯನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ನಟಿಸಿದ್ದೇನ. ನನ್ನ ನಟನಾ ಸಾಮರ್ಥ್ಯವನ್ನು ಅನ್ವೇಷಿಸಲು ನನಗೆ ಅನುವು ಮಾಡಿಕೊಟ್ಟಿತು" ಎಂದು ವೇದಿಕಾ ಹೇಳಿದ್ದಾರೆ.
ಇದನ್ನೂ ಓದಿ: ಉಪೇಂದ್ರ- ವೇದಿಕಾ ಜೋಡಿಯ 'ಹೋಮ್ ಮಿನಿಸ್ಟರ್' ಸಿನಿಮಾ ಹಾಡುಗಳ ಬಿಡುಗಡೆ
ಈ ಪಾತ್ರವನ್ನು ನಿರ್ವಹಿಸಲು ನಾನು ಅನೇಕ ಸಂಭಾಷಣೆಗಳನ್ನು ಹೇಳಬೇಕಾಗಿತ್ತು. ನನಗೆ ಪ್ರತಿದಿನ 2-3 ಪುಟಗಳ ಡೈಲಾಗ್‌ಗಳನ್ನು ನೀಡಲಾಗುತ್ತಿತ್ತು. ಅದು ನನ್ನ ಮಾತೃಭಾಷೆಯಾದ್ದರಿಂದ ಅದನ್ನು ನಿಭಾಯಿಸಲು ಸಾಧ್ಯವಾಯಿತು. ಈ ಪಾತ್ರದಲ್ಲಿ ನಾನು ವಿವಿಧ ಶೇಡ್ ಗಲ್ಲಿ ನಟಿಸಿದ್ದೇನೆ, ಸಿನಿಮಾ ತುಂಬಾ ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
ಉಪೇಂದ್ರ ಅವರು ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಕಿಂಗ್ ವುಮೆನ್ ಹಾಗೂ ಗಂಡಸು ಮನೆ ಕೆಲಸ ಮಾಡುವುದರಲ್ಲಿ ಯಾವುದೇ ನಾಚಿಕೆ ಇಲ್ಲ ಎಂಬ ಸಂದೇಶ ನೀಡಲಿದೆ.

ಉಪೇಂದ್ರ ಅವರೊಂದಿಗೆ ಇದೇ ಮೊದಲ ಬಾರಿಗೆ ವೇದಿಕಾ ತೆರೆ ಹಂಚಿಕೊಳ್ಳುತ್ತಿದ್ದು, “ಉಪೇಂದ್ರ ಅವರ ಬಗ್ಗೆ ಅವರ ಕೆಲಸಗಖ ಮೂಲಕ ನನಗೆ ತಿಳಿದಿತ್ತು. ಆದರೆ ನಾನು ಅವರೊಂದಿಗೆ ಹೋಮ್ ಮಿನಿಸ್ಟರ್ ಸಿನಿಮಾ ಮಾಡುವಾಗ ಅವರ ಬಗ್ಗೆ ತಿಳಿದುಕೊಂಡೆ. ಅತ್ಯಂತ ವಿನಮ್ರ ಮತ್ತು ಅವರಲ್ಲಿ ಮಗುವಿನಂತಹ ಮುಗ್ಧತೆ ಇದೆ ಎಂದು ನಾನು ಅರಿತುಕೊಂಡೆ. ಅವರು ತುಂಬಾ ಪ್ರಾಮಾಣಿಕ ಮತ್ತು ಅವನ ಸುತ್ತಲಿರುವ ಪ್ರತಿಯೊಬ್ಬರಲ್ಲೂ ಉತ್ತಮವಾದದ್ದನ್ನು ಹೊರತರುತ್ತಾರೆ ಎಂದು ವೇದಿಕಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
