ಬಾಕ್ಸ್ ಆಫೀಸ್ ನಲ್ಲಿ RRR' ಭರ್ಜರಿ ಕಲೆಕ್ಷನ್, ವಿಶ್ವದಾದ್ಯಂತ 611 ಕೋಟಿ ರೂ. ಸಂಗ್ರಹ!
ಇತ್ತೀಚಿಗೆ ಬಿಡುಗಡೆಯಾದ ಎಸ್ ಎಸ್ ರಾಜಮೌಳಿ ಅವರ 'ಆರ್ ಆರ್ ಆರ್' ಸಿನಿಮಾ ವಿಶ್ವದಾದ್ಯಂತ ರೂ. 611 ಕೋಟಿ ಬಾಚಿರುವ ಬಗ್ಗೆ ಚಿತ್ರ ನಿರ್ಮಾಪಕರು ಬುಧವಾರ ಮಾಹಿತಿ ನೀಡಿದ್ದಾರೆ.
Published: 30th March 2022 07:42 PM | Last Updated: 30th March 2022 07:49 PM | A+A A-

ಆರ್ ಆರ್ ಆರ್ ಸ್ಟಿಲ್
ಮುಂಬೈ: ಇತ್ತೀಚಿಗೆ ಬಿಡುಗಡೆಯಾದ ಎಸ್ ಎಸ್ ರಾಜಮೌಳಿ ಅವರ 'ಆರ್ ಆರ್ ಆರ್' ಸಿನಿಮಾ ವಿಶ್ವದಾದ್ಯಂತ ರೂ. 611 ಕೋಟಿ ಬಾಚಿರುವ ಬಗ್ಗೆ ಚಿತ್ರ ನಿರ್ಮಾಪಕರು ಬುಧವಾರ ಮಾಹಿತಿ ನೀಡಿದ್ದಾರೆ.
ಡಿವಿವಿ ಎಂಟರ್ ಟೈನ್ ಮೆಂಟ್ ನಿರ್ಮಾಣದ ಈ ಸಿನಿಮಾ ಮಾರ್ಚ್ 25 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿತ್ತು. ಚಿತ್ರ ನಿರ್ಮಾಪಕರ ಪ್ರಕಾರ, ದೇಶದಲ್ಲಿ ಆರ್ ಆರ್ ಆರ್ ರೂ. 474 ಕೋಟಿ ಸಂಗ್ರಹಿಸಿದೆ. ಹಿಂದಿ ಆವೃತ್ತಿ ಒಂದರಲ್ಲಿಯೇ ರೂ. 107 ಕೋಟಿ ದೋಚಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ' RRR! ಮೂರೇ ದಿನದಲ್ಲಿ ಬರೋಬ್ಬರಿ 499 ಕೋಟಿ ರೂ. ಕಲೆಕ್ಷನ್
ಸ್ವಾತಂತ್ರ್ಯ ಪೂರ್ವದಲ್ಲಿನ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಕಾಲ್ಪನಿಕ ಕಥೆಯನ್ನಾಧರಿಸಿದ ಚಿತ್ರದಲ್ಲಿ ಕ್ರಮದಲ್ಲಿ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್ ಟಿಆರ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಐಮ್ಯಾಕ್ಸ್, ಐಮ್ಯಾಕ್ಸ್ 3ಡಿ, 3ಡಿ ಮತ್ತು ಡಲ್ಬಿ ಸೌಂಡ್ ನಲ್ಲಿ ಕಳೆದ ವಾರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.