
ಅಂದೊಂದಿತ್ತು ಕಾಲ ಸಿನಿಮಾ ಸ್ಟಿಲ್
ವಿನಯ್ ರಾಜಕುಮಾರ್ ನಟನೆಯ ಅಂದೊಂದಿತ್ತು ಕಾಲ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ.
ಕೀರ್ತಿ ಚೊಚ್ಚಲ ನಿರ್ದೇಶನದ ಈ ಸಿನಿಮಾದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶಿವರಾಜಕುಮಾರ್ ನಟನೆಯ ಕೋದಂಡರಾಮ ಸಿನಿಮಾದಲ್ಲಿ ರವಿಚಂದ್ರನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಎರಡು ದಶಕಗಳ ನಂತರ ರಾಜಕುಮಾರ್ ಕುಟುಂಬದ ನಟನೊಂದಿಗೆ ಅಭಿನಯುಸುತ್ತಿದ್ದಾರೆ.
ಅಂದೊಂದಿತ್ತು ಕಾಲ ಚಿತ್ರದಲ್ಲಿ ವಿನಯ್ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 4 ದಿನಗಳ ಚಿತ್ರೀಕರಣ ಬಾಕಿಯಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಮುಗಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ವಿನಯ್ ಜೊತೆಗೆ ಅದಿತಿ ಪ್ರಭುದೇವ ನಟಿಸಿದ್ದಾರೆ.
ಇದನ್ನೂ ಓದಿ: ವಿನಯ್ ರಾಜಕುಮಾರ್ ನಟನೆಯ 'ಪೆಪೆ' ಗ್ಯಾಂಗಸ್ಟರ್ ಕಥೆಯಾಧಾರಿತ ಸಿನಿಮಾ!
ಅಂದೊಂದಿತ್ತು ಕಾಲ ಚಿತ್ರವು ಭುವನ್ ಸುರೇಶ್ ಅವರ ಮೊದಲ ನಿರ್ಮಾಣ ಸಿನಿಮಾವಾಗಿದೆ. ಭುವನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಯೋಜನೆಯನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದ ಸಂಗೀತ ಮತ್ತು ಛಾಯಾಗ್ರಹಣವನ್ನು ಕ್ರಮವಾಗಿ ರಾಘವೇಂದ್ರ ವಿ ಮತ್ತು ಅಭಿಷೇಕ್ ಕಾಸರಗೋಡು ನಿರ್ವಹಿಸಿದ್ದಾರೆ. ತೀರ್ಥಹಳ್ಳಿ, ಊಟಿ ಮತ್ತು ಬೆಂಗಳೂರಿನ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಕಡಿಪುಡಿ ಚಂದ್ರು ಮತ್ತು ಅರುಣಾ ಬಾಲರಾಜ್ ಕೂಡ ನಟಿಸಿದ್ದಾರೆ. ರವಿಚಂದ್ರನ್ ಸದ್ಯ ದರ್ಶನ್ ನಟನೆಯ ಕ್ರಾಂತಿ ಮತ್ತು ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸುತ್ತಿದ್ದು, ಅಂದೊಂದಿತ್ತು ಕಾಲ ಸಿನಿಮಾ ಶೂಟಿಂಗ್ ಗೆ ಏಪ್ರಿಲ್ ಮೊದಲ ವಾರದಲ್ಲಿ ಭಾಗವಹಿಸಲಿದ್ದಾರೆ.