ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್!
ಪ್ರಜ್ವಲ್ ದೇವರಾಜ್ ಕೈಯ್ಯಲ್ಲಿ ಸದ್ಯ ಹಲವು ಸಿನಿಮಾಗಳಿವೆ, ಅವರ ಸಿನಿಮಾಗಳು ವಿವಿಧ ಹಂತದಲ್ಲಿವೆ, ಸದ್ಯ ಲೋಹಿತ್ ನಿರ್ದೇಶನದ ಮಾಫಿಯಾದಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದಾರೆ.
Published: 02nd May 2022 01:02 PM | Last Updated: 02nd May 2022 02:31 PM | A+A A-

ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್ ಕೈಯ್ಯಲ್ಲಿ ಸದ್ಯ ಹಲವು ಸಿನಿಮಾಗಳಿವೆ, ಅವರ ಸಿನಿಮಾಗಳು ವಿವಿಧ ಹಂತದಲ್ಲಿವೆ, ಸದ್ಯ ಲೋಹಿತ್ ನಿರ್ದೇಶನದ ಮಾಫಿಯಾದಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಲೋಹಿತ್ ಅವರ ಮಾಫಿಯಾ ಮತ್ತು ಹರಿಪ್ರಸಾದ್ ಜಕ್ಕನ ಗಾನ ಚಿತ್ರೀಕರಣದ ಜೊತೆಗೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು ಮಹಾಂತೇಶ್ ಹಂದ್ರಾಳ್ ನಿರ್ದೇಶಿಸಿದ್ದಾರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಸಂಬಂಧಿತ ಕಥೆಯಾಗಿದೆ. ಮಹಾಂತೇಶ್ ಅವರು ಈ ಹಿಂದೆ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದಲ್ಲಿಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಇನ್ನೂ ಹೆಸರಿಡದ ಈ ಚಿತ್ರಕ್ಕೆ 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಸ್ವತಃ ನಟ ಭಾಸ್ಕರ್ ಶೆಟ್ಟಿ ಬೆಂಬಲ ನೀಡಲಿದ್ದಾರೆ. ಇದು ಭಾಸ್ಕರ್ ಅವರ ಮೊದಲ ನಿರ್ಮಾಣ ಸಾಹಸವಾಗಿದೆ. ಚಿತ್ರವು ಆಗಸ್ಟ್‌ನಲ್ಲಿ ನಿರ್ಮಾಣಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ, ಜೆ ಸ್ವಾಮಿ ಕ್ಯಾಮೆರಾ ವರ್ಕ್ ಇದೆ.