ರವಿಚಂದ್ರನ್ ಮಗನ 'ಪ್ರಾರಂಭ' ಸಿನಿಮಾದ ಆಹ್ವಾನ ಪತ್ರಿಕೆ ವೈರಲ್
ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ರವೀಚಂದ್ರನ್ ಅವರ ಪ್ರಾರಂಭ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದ್ದಾರೆ.
Published: 03rd May 2022 04:23 PM | Last Updated: 03rd May 2022 05:31 PM | A+A A-

ಪ್ರಾರಂಭ
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ರವೀಚಂದ್ರನ್ ಅವರ ಪ್ರಾರಂಭ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದ್ದಾರೆ. ಈ ಸಿನಿಮಾ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೇನುಶ್ರೀ ತನುಷ ಪ್ರೊಡಕ್ಷನ್ ನಿರ್ಮಿಸಿರುವ ಮನೋರಂಜನ್ ರವಿಚಂದ್ರನ್ ನಾಯಕನಾಗಿ ಅಭಿನಯಿಸಿರುವ ಪ್ರಾರಂಭ ಸಿನಿಮಾ ಮೇ 13ರಂದು ಬಿಡುಗಡೆಗೊಳ್ಳುತ್ತಿದೆ. ಬಹಳ ವಿಭಿನ್ನವಾಗಿ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಇಡೀ ತಂಡ ಕರೆಯುತ್ತಿದ್ದು, ಮುಯ್ಯಿ ನಿಮ್ದು, ಮನಸ್ಸು ಮುಟ್ಟೋ ಕೆಲಸ ನಮ್ಮದು ಎಂದು ಹೇಳುತ್ತಿದೆ ತಂಡ.
ಮನು ಕಲ್ಯಾಡಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಗದೀಶ್ ಕಲ್ಯಾಡಿ ಬಂಡವಾಳ ಹೂಡಿದ್ದಾರೆ. ಇವರಿಬ್ಬರು ನಾವೆಲ್ಲಾ ಅಲ್ಪಪ್ರಿಯರು, ಕುಬೇರರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದು ಎಂದು ಚಿತ್ರಮಂದಿರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೇಳಿದ್ದಾರೆ.
ಪದಪದಕ್ಕೂ ಹೊಸತನ ಕೊಟ್ಟಿರುವ ಈ ಆಹ್ವಾನ ಪತ್ರಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಈ ಸಿನಿಮಾದಲ್ಲಿ ಕೀರ್ತಿ ಕಲ್ಕೇರಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.