'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಸರ್ಜಾ ಅಭಿನಯದ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಮೇ 13 ರಂದು ತೆರೆಗೆ ಬರಲಿದೆ. ಕೌಟುಂಬಿಕ ಮನೋರಂಜನಾ ಸಿನಿಮಾವನ್ನು ಮಧುಚಂದ್ರ ಆರ್ ಬರೆದು ನಿರ್ದೇಶಿಸಿದ್ದಾರೆ.
Published: 04th May 2022 11:35 AM | Last Updated: 04th May 2022 01:18 PM | A+A A-

ಸೆಲ್ಫಿ ಮಮ್ಮಿ- ಗೂಗಲ್ ಡ್ಯಾಡಿ ಸಿನಿಮಾ ಸ್ಟಿಲ್
ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಸರ್ಜಾ ಅಭಿನಯದ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಮೇ 13 ರಂದು ತೆರೆಗೆ ಬರಲಿದೆ. ಕೌಟುಂಬಿಕ ಮನೋರಂಜನಾ ಸಿನಿಮಾವನ್ನು ಮಧುಚಂದ್ರ ಆರ್ ಬರೆದು ನಿರ್ದೇಶಿಸಿದ್ದಾರೆ.
ಮಕ್ಕಳಲ್ಲಿ ತಂತ್ರಜ್ಞಾನದ ವ್ಯಸನದ ಬಗ್ಗೆ ವ್ಯವಹರಿಸುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಈ ವರ್ಷದ ಆರಂಭದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.
ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಸಿನಿಮಾ ರಿಲೀಸ್ ಡೇಟ್ ತಡವಾಯಿತು ಎಂದು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸೃಜನ್ ಲೋಕೇಶ್ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಈ ಚಿತ್ರವು ಪ್ರಸ್ತುತವಾಗಿದೆ ಎಂದು ಸೃಜನ್ ಲೋಕೇಶ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಚ್ಯುತ್ ಕುಮಾರ್, ದತ್ತಣ್ಣ, ಗಿರಿಜಾ ಲೋಕೇಶ್, ಸುಂದರ್ ರಾಜ್, ಮತ್ತು ಸುಧಾ ಬರಗೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಾಲನಟರಾದ ಬೇಬಿಶ್ರೀ, ಮಾಸ್ಟರ್ ಆಲಾಪ್ ಮತ್ತು ಮಾಸ್ಟರ್ ಸಮರ್ಥ್ ನಟಿಸಿದ್ದಾರೆ. ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಆಕಾಶ ಬುಟ್ಟಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.