ಹಾಸ್ಯವನ್ನು ಹಾರರ್, ಆಕ್ಷನ್ ಮತ್ತು ಸೆಂಟಿಮೆಂಟ್ ಪ್ರಕಾರಗಳೊಂದಿಗೆ ಸಂಯೋಜಿಸಬಹುದು: ನಟ ಶರಣ್

ಸ್ಯಾಂಡಲ್ ವುಡ್ ನಟ ಶರಣ್ ಒಬ್ಬ ಕುತೂಹಲಕಾರಿ ನಟ. ಹಾಸ್ಯನಟ ಮತ್ತು ಪೋಷಕ ಕಲಾವಿದರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ  99 ಚಿತ್ರಗಳಲ್ಲಿ ಅಭಿನಯಿಸಿ 100 ನೇ ಚಿತ್ರ ರಾಂಬೊದಲ್ಲಿ ನಾಯಕ ನಟನಾಗಿ ಬಡ್ತಿ ಪಡೆದರು. ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಅಲ್ಲಿಯೂ ಜನರನ್ನು ನಗಿಸುವ ಪಾತ್ರ, ಕೆಲಸವನ್ನು ಮುಂದುವರಿಸಿದ್ದಾರೆ.

Published: 04th May 2022 02:12 PM  |   Last Updated: 04th May 2022 02:21 PM   |  A+A-


Actor Sharan in Avatar Purusha

ಅವತಾರ ಪುರುಷದಲ್ಲಿ ನಟ ಶರಣ್

The New Indian Express

ಸ್ಯಾಂಡಲ್ ವುಡ್ ನಟ ಶರಣ್ ಒಬ್ಬ ಕುತೂಹಲಕಾರಿ ನಟ. ಹಾಸ್ಯನಟ ಮತ್ತು ಪೋಷಕ ಕಲಾವಿದರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ  99 ಚಿತ್ರಗಳಲ್ಲಿ ಅಭಿನಯಿಸಿ 100 ನೇ ಚಿತ್ರ ರಾಂಬೊದಲ್ಲಿ ನಾಯಕ ನಟನಾಗಿ ಬಡ್ತಿ ಪಡೆದರು. ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಅಲ್ಲಿಯೂ ಜನರನ್ನು ನಗಿಸುವ ಪಾತ್ರ, ಕೆಲಸವನ್ನು ಮುಂದುವರಿಸಿದ್ದಾರೆ.

ಇದೀಗ ನಿರ್ದೇಶಕ ಸಿಂಪಲ್ ಸುನಿಯವರ ನಿರ್ದೇಶನದ ಅವತಾರ ಪುರುಷ ಸಿನಿಮಾ ತೆರೆಗೆ ಬರುತ್ತಿದೆ. ಇದು ಶರಣ್ ಅವರು ನಾಯಕನಾಗಿ ನಟಿಸುತ್ತಿರುವ 14ನೇ ಚಿತ್ರ. ಹಾಸ್ಯವು ಒಂದು ಪ್ರಮುಖ ಮತ್ತು ಬಹುಮುಖ ಪ್ರಕಾರವಾಗಿದ್ದು ಅದನ್ನು ಹಾರರ್, ಆಕ್ಷನ್ ಮತ್ತು ಸೆಂಟಿಮೆಂಟ್ ಗಳಂತಹ ಇತರ ಪ್ರಕಾರಗಳೊಂದಿಗೆ ಸಂಯೋಜಿಸಬಹುದು. ಅವತಾರ ಪುರುಷದಲ್ಲಿ, ನಾವು ಥ್ರಿಲ್ಲರ್ ಜೊತೆಗೆ ಹಾಸ್ಯವನ್ನು ಬೆರೆಸಿದ್ದೇವೆ, ಬ್ಲ್ಯಾಕ್ ಮ್ಯಾಜಿಕ್‌ನ ಹೊಸ ಅಂಶವನ್ನು ಅನ್ವೇಷಿಸಿದ್ದೇವೆ ಎಂದು ಶರಣ್ ಹೇಳುತ್ತಾರೆ.

ಹಾಸ್ಯವು ಒಂದು ಪ್ರಮುಖ ಮತ್ತು ಬಹುಮುಖ ಪ್ರಕಾರವಾಗಿದ್ದು ಅದನ್ನು ಭಯಾನಕ, ಆಕ್ಷನ್ ಮತ್ತು ಭಾವನೆಗಳಂತಹ ಇತರ ಪ್ರಕಾರಗಳೊಂದಿಗೆ ಸಂಯೋಜಿಸಬಹುದು. ಅವತಾರ ಪುರುಷದಲ್ಲಿ, ನಾವು ಥ್ರಿಲ್ಲರ್ ಜೊತೆಗೆ ಹಾಸ್ಯವನ್ನು ಬೆರೆಸಿದ್ದೇವೆ. ಬ್ಲ್ಯಾಕ್ ಮ್ಯಾಜಿಕ್‌, ಮಾಟ-ಮಂತ್ರದ ಹೊಸ ಅಂಶವನ್ನು ಅನ್ವೇಷಿಸಿದ್ದೇವೆ ಎಂದು ಶರಣ್ ಹೇಳುತ್ತಾರೆ.

ಅವತಾರ ಪುರುಷ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಶೀರ್ಷಿಕೆಯಲ್ಲಿ ಅಷ್ಟದಿಗ್ಬಂಧನ ಮಂಡಲಕ ಎಂಬ ಪ್ರತ್ಯಯವಿದ್ದು, ಎರಡನೇ ಭಾಗ ತ್ರಿಶಂಕು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಪುಷ್ಕರ್ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ಅವತಾರ ಪುರುಷ ಚಿತ್ರವು ಮೇ 6ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಶರಣ್ ಮತ್ತು ಸುನಿ ಕಾಂಬಿನೇಷನ್ ನ ಮೊದಲ ಚಿತ್ರವಾಗಿದೆ.

ಇದನ್ನೂ ಓದಿ: 'ಅವತಾರ ಪುರುಷ' ಪ್ರೇಕ್ಷಕರಿಗೆ ನಿರಾಸೆ ಮಾಡಲ್ಲ, ಹೊಸತನ ತರಲಿದೆ: ಆಶಿಕಾ ರಂಗನಾಥ್

ಚಿತ್ರದಲ್ಲಿನ ಬ್ಲ್ಯಾಕ್ ಮ್ಯಾಜಿಕ್ ಅಂಶಗಳು ಪ್ರೇಕ್ಷಕರನ್ನು ಕುತೂಹಲಕರವಾಗಿ ನೋಡುವಂತೆ ಮಾಡುತ್ತದೆ ಎಂಬ ವಿಶ್ವಾಸದಲ್ಲಿ ಶರಣ್ ಇದ್ದಾರೆ. "ಬ್ಲಾಕ್ ಮ್ಯಾಜಿಕ್ ಸ್ವತಃ ಒಂದು ವಿಜ್ಞಾನ ಎಂದು ನಾನು ನಂಬುತ್ತೇನೆ. ನನಗೆ ಅದರ ಬಗ್ಗೆ ಜ್ಞಾನ ಕಡಿಮೆ. ಎಲ್ಲಾ ಶ್ರೇಯಸ್ಸು ನಿರ್ದೇಶಕರಿಗೆ ಸಲ್ಲುತ್ತದೆ, ಅವರು ವಿಷಯದ ಆಳಕ್ಕೆ ಹೋಗಿ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ಮಾಡಿದ್ದಾರೆ. ಚಿತ್ರಕಥೆ ಮತ್ತು ತಾಂತ್ರಿಕ ಕೌಶಲ್ಯವು ನಿಜವಾಗಿಯೂ ಉಪಯುಕ್ತವಾಗಿದೆ ಎನ್ನುತ್ತಾರೆ.

ಅವತಾರ ಪುರುಷ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಶರಣ್ ಅವರ ಪಾತ್ರವು ಅವರ ಆರಂಭಿಕ ದಿನಗಳಿಗೆ ಕರೆದೊಯ್ಯಿತಂತೆ. ಕೆಲವೊಮ್ಮೆ ಕಲಾವಿದರು ತಮ್ಮ ಹಿಂದಿನದನ್ನು ಮೆಲುಕು ಹಾಕಲು ಪಾತ್ರಗಳಲ್ಲಿ ಅವಕಾಶವನ್ನು ಪಡೆಯುತ್ತಾರೆ. ಈ ಚಿತ್ರದ ಮೂಲಕ ನನಗೆ ಸಿಕ್ಕಿದೆ. ಈ ಪಾತ್ರದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ ಎನ್ನುತ್ತಾರೆ.

ರಾಂಬೋ 2 ರ ನಂತರ ಎರಡನೇ ಬಾರಿಗೆ ಆಶಿಕಾ ರಂಗನಾಥ್ ಅವರೊಂದಿಗೆ ತೆರೆ ಹಂಚಿಕೊಂಡ ಶರಣ್, ಸಾಯಿಕುಮಾರ್, ಭವ್ಯ, ಸುಧಾ ರಾಣಿ, ಅಶುತೋಷ್ ರಾಣಾ ಮತ್ತು ಬಿ ಸುರೇಶ ಅವರಂತಹ ಬಹುಮುಖ ನಟರೊಂದಿಗೆ ಕೆಲಸ ಮಾಡುವ ಅವಕಾಶ ಕೂಡ ಅವತಾರ ಪುರುಷ ಚಿತ್ರದ ಮೂಲಕ ಸಿಕ್ಕಿದೆ. 

ಸಿನಿಮಾ ಸೆಟ್‌ಗಳಲ್ಲಿ ಅಂತಹ ಶ್ರೇಷ್ಠ ನಟರೊಂದಿಗೆ ನಟಿಸುವಾಗ ತರಗತಿಗೆ ಹೋಗುತ್ತಿರುವಂತೆ ಭಾಸವಾಯಿತು. ಅವರ ಅನುಭವಗಳು ನಮಗೆ ಜ್ಞಾನವನ್ನು ಪಡೆಯಲು ಸಹಾಯ ಮಾಡಿತು ಎನ್ನುತ್ತಾರೆ ನಟ ಶರಣ್.


Stay up to date on all the latest ಸಿನಿಮಾ ಸುದ್ದಿ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp