ಅಮೀರ್ ಖಾನ್'ರ ದಂಗಲ್ ಕಲೆಕ್ಷನ್ ದಾಖಲೆ ಹಿಂದಿಕ್ಕಿ 400 ಕೋಟಿಯತ್ತ ಮುನ್ನುಗಿದ ಕೆಜಿಎಫ್ 2; ಮುಂದಿದೆ ಬಾಹುಬಲಿ 2!
ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿ ಮುನ್ನುಗುತ್ತಿರುವ ಕೆಜಿಎಫ್ 2 ಚಿತ್ರ ಇದೀಗ ಮೂಲ ಹಿಂದಿ ಭಾಷೆಯ ದಂಗಲ್ ಚಿತ್ರವನ್ನು ಹಿಂದಿಕ್ಕಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ.
Published: 05th May 2022 04:39 PM | Last Updated: 05th May 2022 04:39 PM | A+A A-

ಕೆಜಿಎಫ್ 2-ದಂಗಲ್
ಮುಂಬೈ: ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿ ಮುನ್ನುಗುತ್ತಿರುವ ಕೆಜಿಎಫ್ 2 ಚಿತ್ರ ಇದೀಗ ಮೂಲ ಹಿಂದಿ ಭಾಷೆಯ ದಂಗಲ್ ಚಿತ್ರವನ್ನು ಹಿಂದಿಕ್ಕಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ.
ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಹಿಂದಿಯಲ್ಲಿ 387 ಕೋಟಿ ರುಪಾಯಿ ಗಳಿಕೆ ಮಾಡಿತ್ತು. ನಂತರ ಬಿಡುಗಡೆಯಾಗಿದ್ದ ಬಾಹುಬಲಿ 2 ಹಿಂದಿಯಲ್ಲಿ 511 ಕೋಟಿ ಗಳಿಸುವ ಮೂಲಕ ಅಗ್ರಸ್ಥಾನಕ್ಕೇರಿತ್ತು. ಇದೀಗ ಕೆಜಿಎಫ್ 2 ಚಿತ್ರ ಅಜೇಯ 391 ಕೋಟಿ ರುಪಾಯಿ ಕಲೆಕ್ಷನ್ ಮಾಡುವ ಮೂಲಕ ದಂಗಲ್ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.
BIGGG NEWS... #KGF2 surpasses #Dangal *lifetime biz*... NOW, 2ND HIGHEST GROSSING *HINDI* FILM... Glorious march towards ₹ 400 cr begins... [Week 3] Fri 4.25 cr, Sat 7.25 cr, Sun 9.27 cr, Mon 3.75 cr, Tue 9.57 cr, Wed 8.75 cr. Total: ₹ 391.65 cr. #India biz. #Hindi pic.twitter.com/PdImtreDrB
— taran adarsh (@taran_adarsh) May 5, 2022
ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ಮೂರನೇ ವಾರವೂ ಕಲೆಕ್ಷನ್ ನಲ್ಲಿ ಸುನಾಮಿ ಎಬ್ಬಿಸಿದೆ. ಇನ್ನು ಕಳೆದ ವಾರ ಬಿಡುಗಡೆಯಾದ ಅಜೇಯ ದೇವಗನ್ ಅಭಿನಯದ ರನ್ ವೇ 34 ಮತ್ತು ಟೈಗರ್ ಶ್ರಾಫ್ ಅಭಿನಯದ ಹೀರೋಪಂತಿ 2 ಸಹ ಕೆಜಿಎಫ್ 2 ಮೂರನೇ ವಾರದ ಗಳಿಕೆಯನ್ನು ಹಿಂದಿಕ್ಕಲು ಸಾಧ್ಯವಾಗದೆ ಮಕಾಡೆ ಮಲಗಿವೆ.
ಇದನ್ನೂ ಓದಿ: ಕೆಜಿಎಫ್ 2 ಚಿತ್ರದ ಅಬ್ಬರ ನೋಡಿ ಹೆದರಿದ್ದೆ: ಬಾಲಿವುಡ್ ನಟ ಅಮೀರ್ ಖಾನ್
ಇನ್ನು ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಹ ಎಪ್ರಿಲ್ 14ರಂದೇ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ ಕೆಜಿಎಫ್ 2 ಚಿತ್ರ ಫೀವರ್ ನೋಡಿದ ಮೇಲೆ ಚಿತ್ರತಂಡ ಬಿಡುಗಡೆಯನ್ನು ಮುಂದೂಡಿತ್ತು. ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರದ ದಾಖಲೆಯನ್ನು ಕೆಜಿಎಫ್ ಧೂಳಿಪಟ ಮಾಡಿದೆ.
ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ಕೆಜಿಎಫ್: ಅಧ್ಯಾಯ 2 RRR ನ ಜೀವಿತಾವಧಿಯ ಸಂಗ್ರಹವನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ. ಮೊದಲ ಸ್ಥಾನ ಎಸ್ಎಸ್ ರಾಜಮೌಳಿ ನಿರ್ದೇಶನ ಬಾಹುಬಲಿ: ದಿ ಕನ್ಕ್ಲೂಷನ್ ಇದೆ.
#KGFChapter2 BEATS #RRRMovie to become the 2nd HIGHEST grossing movie after #Baahubali2 at the Indian Box Office.
— Manobala Vijayabalan (@ManobalaV) May 4, 2022