
ರಾಜಮಾರ್ತಾಂಡ
ರಾಜಮಾರ್ತಾಂಡ ಚಿತ್ರದ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಧ್ರುವ ಸರ್ಜಾ ಶಿವಣ್ಣನ ಮಾದರಿಯಲ್ಲೇ ಅಣ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಅವರ ನಿಧನದಿಂದಾಗಿ ರಾಜಮಾರ್ತಾಂಡ ಚಿತ್ರದ ಡಬ್ಬಂಗ್ ಕಾರ್ಯ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಧ್ರುವ ಸರ್ಜಾ ಈಗ ಡಬ್ಬಿಂಗ್ ಮುಗಿಸಿದ್ದು, ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ರಾಜಮಾರ್ತಾಂಡ' ನಿರ್ದೇಶಕರಿಗೆ ಧ್ರುವ ಸರ್ಜಾ ಮಾತು ಕೊಟ್ಟಿದ್ದರು. ಅಣ್ಣ ಅರ್ಧಕ್ಕೆ ಬಿಟ್ಟು ಹೋದ ಸಿನಿಮಾದ ಕೆಲಸವನ್ನು ಪೂರ್ತಿ ಮಾಡಿಕೊಡುವ ಭರವಸೆ ನೀಡಿದ್ದರು. ಅದರಂತೆ ನಿನ್ನೆ ( ಮೇ 9) 'ರಾಜಮಾರ್ತಾಂಡ' ಚಿತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.
ಮೈಕ್ ಮುಂದೆ ನಿಂತು ಧ್ರುವ ಸರ್ಜಾ ಅಣ್ಣ ದೃಶ್ಯಗಳಿಗೆ ಧ್ವನಿ ನೀಡುತ್ತಿರುವ ವಿಡಿಯೋ ಅಭಿಮಾನಿಗಳ ಮನ ಕಲುಕಿದೆ. 'ಸಮಧಾನ ಸಮಾಧಾನ.. ಅಕ್ಕ ತಂಗಿಯಂದಿರೇ.. ಅಣ್ಣ-ತಮ್ಮಂದಿರೇ.. ಬಂಧು ಬಾಂಧವರೇ.. ನನ್ನನ್ನ ನಂಬಿ ಓಟ್ ಹಾಕಿ. ನನ್ನ ಕೊನೆ ಉಸಿರಿರುವವರೆಗೂ ನಿಮ್ಮಗಳಿಗೋಸ್ಕರನೇ ಹೋರಾಡ್ತೀನಿ' ಎಂಬ ಡೈಲಾಗ್ಗೆ ಧ್ರುವ ವಾಯ್ಸ್ ನೀಡಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ಸಿನಿಮಾಗೆ ಬಹುಭಾಷಾ ಕಲಾವಿದರನ್ನು ಕರೆತರುತ್ತಿರುವ ನಿರ್ದೇಶಕ ಪ್ರೇಮ್!
ಈಗಾಗಲೇ ಎಲ್ಲಿರಿಗೂ ಗೊತ್ತಿರುವ ಹಾಗೇ ಈ ಸಿನಿಮಾದಲ್ಲಿ ಅಣ್ಣ ಚಿರಂಜೀವಿ ಸರ್ಜಾಗೆ ತಮ್ಮ ಧ್ರುವ ಸರ್ಜಾ ಧನಿಯಾಗಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬರದಿಂದ ಸಾಗುತ್ತಿವೆ. ಕೊನೇ ಹಂತದ ಕೆಲಸಗಳು ಮಾತ್ರ ಬಾಕಿ ಇವೆ.ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರಬೇಕು ಎಂಬ ಆಶಯದೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ.
ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ದಿನಾಂಕನ್ನು ಚಿತ್ರತಂಡ ಘೋಷಣೆ ಮಾಡಲಿದೆಯಂತೆ. ಕೊನೆಯ ಬಾರಿಗೆ ಚಿರಂಜೀವಿ ಸರ್ಜಾರನ್ನು ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
39ನೇ ವಯಸ್ಸಿಗೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು.ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕಾದ ದೊಡ್ಡ ನಷ್ಟ. ಚಿರು ನಮ್ಮನ್ನೆಲ್ಲ ಬಿಟ್ಟು ಹೋಗಿ ಇಷ್ಟು ದಿನ ಕಳೆದರೂ, ಅವರ ನೆನಪುಗಳು ಮಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲಿದೆ.