ರಾಕಿ ಭಾಯ್ ಸ್ಟೈಲ್ಗೆ ರಣ್ವೀರ್ ಸಿಂಗ್ ಫಿದಾ: ಕೆಜಿಎಫ್ ಚಾಪ್ಟರ್-2 ಬಗ್ಗೆ ಪ್ರತಿಕ್ರಿಯೆ!
ಎಲ್ಲಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನ ಬಾಲಿವುಡ್ ನಟ ರಣ್ವೀರ್ ಸಿಂಗ್ ವೀಕ್ಷಿಸಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರ ನೋಡಿ ರಣ್ವೀರ್ ಸಿಂಗ್ ಫಿದಾ ಆಗಿದ್ದಾರೆ.
Published: 11th May 2022 11:36 AM | Last Updated: 11th May 2022 12:48 PM | A+A A-

ರಣವೀರ್ ಸಿಂಗ್
ಬಿಡುಗಡೆಯಾಗಿ 25ಕ್ಕೂ ಹೆಚ್ಚು ದಿನಗಳು ಕಳೆದರೂ ‘ಕೆಜಿಎಫ್: ಚಾಪ್ಟರ್ 2’ ಹವಾ ಮಾತ್ರ ಕಡಿಮೆಯಾಗಿಲ್ಲ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ವಿಶ್ವದಾದ್ಯಂತ 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಎಲ್ಲಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನ ಬಾಲಿವುಡ್ ನಟ ರಣ್ವೀರ್ ಸಿಂಗ್ ವೀಕ್ಷಿಸಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರ ನೋಡಿ ರಣ್ವೀರ್ ಸಿಂಗ್ ಫಿದಾ ಆಗಿದ್ದಾರೆ.
’ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ನಾನು ನೋಡಿದಾಗ ವಾವ್ ಎನಿಸಿತು. ರಾಕಿಂಗ್ ಸ್ಟಾರ್ ಯಶ್ ಓಹೋ… ಇಡೀ ಚಿತ್ರದಲ್ಲಿ ‘’ಅವನನ್ನ ಸಾಯಿಸು ಯಶ್.. ಬಿಡಬೇಡ’’ ಅಂತಲೇ ನಾನು ಹೇಳುತ್ತಿದ್ದೆ. ಆ ತರಹದ ಸಿನಿಮಾ ನನಗೆ ಇಷ್ಟ. ಸಿನಿಮಾನೇ ನನ್ನ ಮೊದಲ ಲವ್. ‘ಮಗಧೀರ’ ಆಗಲಿ ‘ಕೆಜಿಎಫ್’ ಆಗಲಿ ರಾತ್ರಿ ಹೊತ್ತು ಒಬ್ಬನೇ ಕೂತು ನೋಡುತ್ತೇನೆ. ಕೊನೆಗೆ ಕ್ಲಾಪ್ ಮಾಡುತ್ತೇನೆ. ಅಕ್ಕ-ಪಕ್ಕ ಪ್ರೇಕ್ಷಕರು ಇಲ್ಲದೇ ಹೋದರೂ, ನಾನು ಶಿಳ್ಳೆ ಚಪ್ಪಾಳೆ ಹೊಡೆಯುತ್ತಿರುತ್ತೇನೆ. ಸಿನಿಮಾ ಕಂಡರೆ ನನಗೆ ಅಷ್ಟು ಇಷ್ಟ’’ ಎಂದು ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೆಜಿಎಫ್ ಚಾಪ್ಟರ್- 2 ಸಿನಿಮಾ ವೀಕ್ಷಣೆ ಮಾಡಿದ್ದ ರಣ್ವೀರ್, ರಾಕಿ ಭಾಯ್ ಶೈಲಿಯಲ್ಲೇ ಸೂಟ್ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ರಣ್ವೀರ್, ರಾಕಿಭಾಯ್ ವೈಬ್ಸ್ ಎಂದು ಬರೆದುಕೊಂಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಮತ್ತು ಶ್ರೀನಿಧಿ ಅವರಲ್ಲದೆ, ರವೀನಾ ಟಂಡನ್ ಮತ್ತು ಸಂಜಯ್ ದತ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.