ಪ್ರತಿವರ್ಷ ಶೇ.70ರಷ್ಟು ಯುವಕರು ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿ: 'ಕ್ರಿಟಿಕಲ್ ಕೀರ್ತನೆಗಳು' ನಿರ್ದೇಶಕ!
ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್ ಅವರ ಐಪಿಎಲ್ ಬೆಟ್ಟಿಂಗ್ ಕುರಿತ ಕ್ರಿಟಿಕಲ್ ಕೀರ್ತನೆಗಳು ಮೇ 13ಕ್ಕೆ ತೆರೆ ಮೇಲೆ ಮೂಡುತ್ತಿದೆ.
Published: 12th May 2022 11:53 AM | Last Updated: 12th May 2022 11:53 AM | A+A A-

ಕ್ರಿಟಿಕಲ್ ಕೀರ್ತನೆಗಳು ಸ್ಟಿಲ್
ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್ ಅವರ ಐಪಿಎಲ್ ಬೆಟ್ಟಿಂಗ್ ಕುರಿತ ಕ್ರಿಟಿಕಲ್ ಕೀರ್ತನೆಗಳು ಮೇ 13ಕ್ಕೆ ತೆರೆ ಮೇಲೆ ಮೂಡುತ್ತಿದೆ.
ಪ್ರತಿ ವರ್ಷ 70 ಪ್ರತಿಶತ ಯುವಕರು ಐಪಿಎಲ್ ಬೆಟ್ಟಿಂಗ್ನಲ್ಲಿ ಭಾಗವಹಿಸುತ್ತಾರೆ ಹಾಗೂ ಕನಿಷ್ಠ 125 ಜನರು ಸಾಮಾನ್ಯವಾಗಿ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ನಾನು ಐಪಿಎಲ್ ಬೆಟ್ಟಿಂಗ್ಗೆ ಬಲಿಯಾಗಿದ್ದೇನೆ ಮತ್ತು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆ
ಎಂದು ನಿರ್ದೇಶಕರು ಹೇಳುತ್ತಾರೆ.
‘ಐಪಿಎಲ್ ಬೆಟ್ಟಿಂಗ್ ಅಡಿಕ್ಟ್ ಅದವರು ಹೇಗೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರುತ್ತಾರೆ ಎಂಬುದನ್ನು ಹಲವಾರು ಘಟನೆಗಳ ಮೂಲಕ ಈ ಚಿತ್ರದಲ್ಲಿ ಹೇಳಲಾಗಿದೆ. ಗಂಭೀರವಾದ ವಿಷಯವನ್ನು ಹಾಸ್ಯದ ಧಾಟಿಯಲ್ಲಿ ಹೇಳಿದರೆ ಎಲ್ಲರಿಗೂ ತಲುಪುತ್ತದೆ ಎನ್ನುವ ಉದ್ದೇಶ ಈ ಹಿಂದೆ
ಅಡಗಿದೆ. ಬೆಂಗಳೂರು, ಕುಂದಾಪುರ, ಮಂಡ್ಯ ಹಾಗೂ ಬೆಳಗಾವಿ ಹೀಗೆ ನಾಲ್ಕು ಜಿಲ್ಲೆಗಳಲ್ಲಿ ಬೇರೆ ಬೇರೆ ಕತೆಗಳು ನಡೆಯುತ್ತವೆ. ಈ ನಾಲ್ಕೂ ಕತೆಗಳು ಒಂದು ಕಡೆ ಬಂದಾಗ ಏನಾಗುತ್ತದೆ ಎಂಬುದು ಸಿನಿಮಾದಲ್ಲಿ ನೋಡಬಹುದು’ ಎಂಬುದು ನಿರ್ದೇಶಕ ಕುಮಾರ್ ತಿಳಿಸಿದ್ದಾರೆ.
ತಮ್ಮ ಮೊದಲ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ ಇಷ್ಟಪಟ್ಟವರು ಕ್ರಿಟಿಕಲ್ ಕೀರ್ತನೆಗಳೂ ಮೆಚ್ಚುತ್ತಾರೆ. ಬೆಟ್ಟಿಂಗ್ನಲ್ಲಿ ತೊಡಗಿರುವ ಜನರು ಸಾಮಾನ್ಯವಾಗಿ ಗೊಂದಲಕ್ಕೊಳಗಾಗುತ್ತಾರೆ, ಅದನ್ನು ನಾನು ಹಾಸ್ಯದ ಮೂಲಕ ವಿವರಿಸಿದ್ದೇನೆ, ಉತ್ಸಾಹದಿಂದ ಬೆಟ್ಟಿಂಗ್ ಪ್ರಾರಂಭಿಸುವ ಪ್ರತಿಯೊಬ್ಬ ವ್ಯಕ್ತಿಯು ಅಂತಿಮವಾಗಿ ಸೋಲುತ್ತಾನೆ. ಈ ವಿಷಯವು ಪ್ರತಿಯೊಬ್ಬ ಪ್ರೇಕ್ಷಕರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತದೆಈ ಸಿನಿಮಾ ಇಂದಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
“ನನ್ನ ಪ್ರಕಾರ, ಈ ಚಿತ್ರದಲ್ಲಿ ಕೆಲಸ ಮಾಡಲು ಒಬ್ಬ ಸ್ಟಾರ್ ಅಥವಾ ಹೀರೋ ಸಾಕಾಗುವುದಿಲ್ಲ. ನನ್ನ ಹಿಂದಿನ ಸಿನಿಮಾದಂತೆಯೇ ಇಲ್ಲಿಯೂ ಕಂಟೆಂಟ್ ಹೀರೋ. ಕಳೆದ ವರ್ಷದ ಐಪಿಎಲ್ನಲ್ಲಿ ನಾನು ಈ ಚಿತ್ರವನ್ನು ಬಿಡುಗಡೆ ಮಾಡಬೇಕಾಗಿತ್ತು, ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅದು ವಿಳಂಬವಾಯಿತು.
ಸುಚೇಂದ್ರ ಪ್ರಸಾದ್, ತರಂಗ ವಿಶ್ವ, ರಾಜೇಶ್ ನಟರಂಗ, ಅಪೂರ್ವ, ಅರುಣಾ ಬಾಲರಾಜ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವೀರ್ ಸಮರ್ಥ್ ಸಂಗೀತ, ಶಿವ ಸೇನಾ ಮತ್ತು ಶಿವ ಶಂಕರ್ ಡಿಓಪಿ ಇದೆ. ಕೇಸರಿ ಫಿಲಂಸ್ ಕ್ಯಾಪ್ಚರ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.