
ಗರುಡ ಸಿನಿಮಾ ಸ್ಟಿಲ್
2017 ರಿಂದ ತಯಾರಾಗುತ್ತಿರುವ ಧನಕುಮಾರ್ ಅವರ ಗರುಡ ಸಿನಿಮಾ ಅಂತಿಮವಾಗಿ ಮೇ 20 ರಂದು ತೆರೆಗೆ ಬರಲು ಸಿದ್ಧವಾಗಿದೆ.
ಕೊರೋನಾ ಸೋಂಕಿನ ಕಾರಣದಿಂದಾಗಿ ಇತರ ಸಿನಿಮಾಗಳಂತೆ ಗರುಡ ಚಿತ್ರ ಕೂಡ ವಿಳಂಬವಾಯಿತು, ಇದರಿಂದ ನಮಗೆ ಅನುಕೂಲವೇ ಆಯಿತು ಎಂದು ನಿರ್ಮಾಪಕ ಸಿದ್ದಾರ್ಥ್ ಮಹೇಶ್ ಹೇಳಿದ್ದಾರೆ.
ಲಾಕ್ ಡೌನ್ ಆಗುವ ಮುನ್ನವೇ ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು 2020 ರಲ್ಲಿ ಬಿಡುಗಡೆ ಮಾಡುವ ಯೋಜನೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ, ಹೀಗಾಗಿ ಸಿನಿಮಾ ಸಂಬಂಧ ಮತ್ತಷ್ಟು ಕೆಲಸ ಮಾಡಲು ಸಮಯಾವಕಾಶ ದೊರೆಯಿತು ಎಂದು ತಿಳಿಸಿದ್ದಾರೆ.
ಪೋಸ್ಟ್-ಪ್ರೊಡಕ್ಷನ್ಗಾಗಿ ನಮಗೆ ಹೆಚ್ಚಿನ ಸಮಯವಿತ್ತು. ನಾವು ಗ್ರಾಫಿಕ್ಸ್ ಮತ್ತು ಎಡಿಟಿಂಗ್ ಸುಧಾರಿಸಲು ಸಹಾಯವಾಯಿತು.
ರಘು ದೀಕ್ಷಿತ್ ಸಂಗೀತವನ್ನು ಮತ್ತಷ್ಟು ಇಂಪ್ರೂವ್ ಮಾಡಿದ್ದಾರೆ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ. ಆರೆಂಜ್ ಪಿಕ್ಸೆಲ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಗರುಡ, ಆಶಿಕಾ ರಂಗನಾಥ್, ಐಂದ್ರಿತಾ ರೇ ಮತ್ತು ಕಾಮ್ನಾ ಜೇಠ್ಮಲಾನಿ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.