80 ಪೋಷಕರು ನಿರ್ಮಿಸಿರುವ ಸಿನಿಮಾ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ'!
ವಾಸ್ಕೋಡಗಾಮ ಚಿತ್ರ ನಿರ್ದೇಶಿಸಿದ್ದ ಮಧುಚಂದ್ರ ಅವರ ಹೊಸ ಸಿನಿಮಾ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’. ಸೃಜನ್ ಲೋಕೇಶ್, ಮೇಘನಾ ರಾಜ್ ನಟನೆಯ ಈ ಚಿತ್ರ ಮೇ 13ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ.
Published: 12th May 2022 11:24 AM | Last Updated: 12th May 2022 11:24 AM | A+A A-

'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸ್ಟಿಲ್
ವಾಸ್ಕೋಡಗಾಮ ಚಿತ್ರ ನಿರ್ದೇಶಿಸಿದ್ದ ಮಧುಚಂದ್ರ ಅವರ ಹೊಸ ಸಿನಿಮಾ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’. ಸೃಜನ್ ಲೋಕೇಶ್, ಮೇಘನಾ ರಾಜ್ ನಟನೆಯ ಈ ಚಿತ್ರ ಮೇ 13ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ.
ಈ ಜನರೇಶನ್ ಪೇರೆಂಟ್ಸ್, ಮಕ್ಕಳ ಲೈಫ್ಸ್ಟೈಲ್ ಬಗ್ಗೆ ಇರುವ ಪ್ರಾಬ್ಲಮ್ ಮೇಲೆ ಇರುವ ಕತೆ ಈ ಸಿನಿಮಾದ್ದು. ಅದಕ್ಕೆ ತಕ್ಕಂಥಾ ಟೈಟಲ್ಗಾಗಿ ಸಾಕಷ್ಟುಹುಡುಕಿದ್ವಿ. ಕೊನೆಗೆ ಸಿಕ್ಕಿದ್ದು ಈ ಟೈಟಲ್. ಇದು ಕಾಮಿಡಿ ಎಂಟರ್ಟೈನ್ಮೆಂಟ್. ಮೂವಿ ಸಬ್ಜೆಕ್ಟ್ ಗಂಭೀರವಾಗಿದೆ. ಆದರೆ ಅದನ್ನು ನಾವು ಹೇಳಿರೋದು ಎಂಟರ್ಟೈನರ್ ಆಗಿದೆ.
ಇದು ನಮ್ಮ ಮನೆ ಮಕ್ಕಳು ಹಾಗೂ ನಮ್ಮ ಅಪಾರ್ಚ್ಮೆಂಟ್ ಸುತ್ತಮುತ್ತಲ ಮಕ್ಕಳನ್ನು ಅಬ್ಸವ್ರ್ ಮಾಡ್ತಾ ಹುಟ್ಟುಕೊಂಡ ಕತೆ. ಈಗಿನ ಮಕ್ಕಳು ಮನೆಯಲ್ಲಿ ಒಬ್ಬರೇ ಇರ್ತಾರೆ. ಪೇರೆಂಟ್ಸ್ ಎಲ್ಲರಿಗೂ ಮೊಬೈಲ್ ಅಡಿಕ್ಷನ್. ಜೊತೆಗೆ ಕೆರಿಯರ್ ಬಗ್ಗೆಯೇ ಗಮನ. ಇದರಿಂದ ಮಕ್ಕಳ ಮೇಲೆ ಯಾವ ಪರಿಣಾಮ ಆಗುತ್ತೆ ಅನ್ನೋದನ್ನು ನೋಡ್ತಾ ನೋಡ್ತಾ ಈ ಸಿನಿಮಾ ಕತೆ ಹೊಳೆಯಿತು. ನನ್ನ ಮಗ ಓದುತ್ತಿರುವ ಆಲ್ಟರ್ನೇಟಿವ್ ಸ್ಕೂಲ್ನ ಇತರ ಪೋಷಕರಿಗೂ ಈ ಕತೆ ವಿವರಿಸಿದೆ. ಶುರುವಲ್ಲಿ 80 ಜನಕ್ಕೆ ಹೇಳಿದ್ದು, ಅವರ ಮೂಲಕ ಇನ್ನೊಂದಿಷ್ಟುಪೇರೆಂಟ್ಸ್ಗೂ ಹಬ್ಬಿ ಒಟ್ಟು 400 ಜನ ಪೋಷಕರಿಗೆ ಸಿನಿಮಾ ಕತೆ ನರೇಟ್ ಮಾಡಿದ್ದೆ. ಸುಮಾರು 80 ಜನ ತಾವೇ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದರು. ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಹೊಸ ಬೆಳವಣಿಗೆ ಎಂದು ಮಧು ಚಂದ್ರ ಹೇಳಿದ್ದಾರೆ.
ತಮ್ಮ ಕಾಸ್ಟಿಂಗ್ ಆಯ್ಕೆಯ ಬಗ್ಗೆ ಮಾತನಾಡುತ್ತಾ, "ಸೃಜನ್ ಲೋಕೇಶ್, ಕಿರುತೆರೆಯಲ್ಲಿ ಜನಪ್ರಿಯ ವ್ಯಕ್ತಿ, ತಮ್ಮ ಹಾಸ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ತಂದೆಯ ಪಾತ್ರಕ್ಕೆ ಅವರು ಸೂಕ್ತ ಅಂತ ಅನಿಸಿತು. ಅಂದಹಾಗೆ, ಮೇಘನಾ ರಾಜ್ ಸರ್ಜಾ ಅವರು ಈ ಹಿಂದೆ ಅಂತಹ ಪಾತ್ರವನ್ನು ಮಾಡದ ಕಾರಣಕ್ಕೆ ನಾನು ಅವರನ್ನು ಆಯ್ಕೆ ಮಾಡಿದೆ,'' ಎನ್ನುತ್ತಾರೆ ನಿರ್ದೇಶಕರು.
ಜೊತೆಗೆ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದೊಂದಿಗೆ, ನಾವು ಮೊಬೈಲ್ ಡಿ ಅಡಿಕ್ಷನ್ ಸೆಂಟರ್ ನಪರಿಕಲ್ಪನೆಯನ್ನು ಪರಿಚಯಿಸುತ್ತೇವೆ, ಹಿರಿಯ ನಟ ದತ್ತಣ್ಣ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುಧಾ ಬರಗೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.