ವೂಟ್ ಸೆಲೆಕ್ಟ್ ನಿಂದ ಕನ್ನಡದ ಹೊಸ ವೆಬ್ ಸರಣಿ, `ಹನಿಮೂನ್’ ಪ್ರಸಾರ, ಟ್ರೈಲರ್ ಬಿಡುಗಡೆ!

ಕನ್ನಡದ ಹೊಸ ವೆಬ್ ಸರಣಿ `ಹನಿಮೂನ್’ ಟ್ರ್ರೈಲರ್ ಬಿಡುಗಡೆಯಾಗಿದ್ದು, ನಟ ನಾಗಭೂಷಣ, ಸಂಜನಾ ಆನಂದ್, ಪವನ್ ಕುಮಾರ್, ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟಿಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Published: 12th May 2022 06:38 PM  |   Last Updated: 13th May 2022 06:14 PM   |  A+A-


honeymoon Kannada web series teaser out

ಹನಿಮೂನ್ ವೆಬ್ ಸಿರೀಸ್

Online Desk

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣ, ನಾಗಭೂಷಣ ಮತ್ತು ಸಂಜನಾ ಆನಂದ್ ನಟನೆ

ಬೆಂಗಳೂರು: ಕನ್ನಡದ ಹೊಸ ವೆಬ್ ಸರಣಿ `ಹನಿಮೂನ್’ ಟೀಸರ್ ಬಿಡುಗಡೆಯಾಗಿದ್ದು, ನಟ ನಾಗಭೂಷಣ, ಸಂಜನಾ ಆನಂದ್, ಪವನ್ ಕುಮಾರ್, ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟಿಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದು ಲಘುಹಾಸ್ಯದ ಅಸಾಂಪ್ರದಾಯಿಕ ಭಾರತೀಯ ವಿವಾಹದ ಕಥೆಯಾಧಾರಿತವಾಗಿದ್ದು, ಸದ್ಯದಲ್ಲೇ ವೂಟ್ ಸೆಲೆಕ್ಟ್ನಲ್ಲಿ ಪ್ರಸಾರವಾಗಲಿದೆ. ಆರು ಕಂತುಗಳ ಹನಿಮೂನ್ ವೆಬ್ ಸೀರೀಸ್ ಅನ್ನು ಖ್ಯಾತ ನಟ ಶಿವರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ. ಇದೇ ಮೇ 20ರಂದು ಬಿಡುಗಡೆಯಾಗಲಿರುವ ಈ ಹಾಸ್ಯಪ್ರಧಾನ ಪ್ರೇಮಕತೆಯನ್ನು ನೀವು ವೂಟ್ ಸೆಲೆಕ್ಟ್ನಲ್ಲಿ ನೋಡಿ ಆನಂದಿಸಬಹುದು.

ಈಗಾಗಲೇ ಹಲವು ಸಿನಿಮಾಗಳ ನಟನೆಯಿಂದ ನಿಮ್ಮ ಮನ ಗೆದ್ದಿರುವ ನಾಗಭೂಷಣ್, ಹನಿಮೂನ್ ಸರಣಿಯ ಮುಖ್ಯಪಾತ್ರದಲ್ಲಿದ್ದಾರೆ. ಈ ಸೀರೀಸಿನ ಬರವಣಿಗೆಯೂ ಅವರದ್ದೆ.  ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ಇದ್ದಾರೆ. ಹೊಸದಾಗಿ ಮದುವೆಯಾದ ಹುಡುಗನಿಗೆ ದಾರಿ ತೋರಿಸುವ ‘ಸೂತ್ರ’ಧಾರಿಯಾಗಿ ಮತ್ತೊಬ್ಬ ಚಿತ್ರ ನಿರ್ದೇಶಕ ಲೂಸಿಯಾ ಪವನ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಅಪೂರ್ವಾ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟ್ಟಿಗೆ ಕೂಡ ಹನಿಮೂನ್‌ನಲ್ಲಿದ್ದಾರೆ.

ಈ ವೆಬ್ ಸೀರೀಸ್ ತಮ್ಮ ಮನಸ್ಸಿಗೆ ಹತ್ತಿರವಾದದ್ದು  ಎಂದು ಹೇಳಿದ ನಟ ಶಿವರಾಜ್ ಕುಮಾರ್, ‘ನಮ್ಮ ಸುತ್ತ ಸಾಕಷ್ಟು ಹೊಸ ರೀತಿಯ ಕತೆಗಳಿವೆ, ಅಂಥ ಕತೆಗಳನ್ನು ಬೆಂಬಲಿಸುತ್ತಿರುವ ವೂಟ್ ಬಗ್ಗೆ ನನಗೆ ಖುಷಿ ಅನಿಸುತ್ತೆ. ಈ ಪ್ರಾಜೆಕ್ಟಿನಲ್ಲಿ ನನ್ನ ಮಗಳೂ ಕೆಲಸ ಮಾಡಿರೋದ್ರಿಂದ ಹನಿಮೂನ್ ನನ್ನ ಮನಸಿಗೆ ಇನ್ನಷ್ಟು ಹತ್ತಿರವಾಗಿದೆ’ ಎಂದರು.

ಹನಿಮೂನ್ ಸಿರೀಸಿನ ನಾಯಕನಟ ನಾಗಭೂಷಣ್ ಮಾತನಾಡಿ, ‘ಇದು ಎಲ್ಲ ಅರೇಂಜ್ಡ್ ಮ್ಯಾರೇಜುಗಳ ಕತೆ. ಹೊಸದಾಗಿ ಮದುವೆಯಾದ ಗಂಡ ಹೆಂಡತಿಯರAತೂ ಇದರಲ್ಲಿ ತಮ್ಮನ್ನ ತಾವೇ ಕಾಣುತ್ತಾರೆ’ ಎಂದರು.

ಹನಿಮೂನ್ ಅನ್ನುವುದು ಬರೀ ಮಜಾ ಅಲ್ಲ; ಗಂಡು ಹೆಣ್ಣು ತಮ್ಮ ಹೊಸ ಬದುಕನ್ನ ಜೋಡಿಸಿಕೊಳ್ಳುವುದು ಹನಿಮೂನಲ್ಲೇ. ಒಂದಷ್ಟು ಕುತೂಹಲ, ಒಂದಷ್ಟು ಫಜೀತಿ, ಒಂದಷ್ಟು ಗುಟ್ಟುಗಳು, ಒಂದಷ್ಟು ಒದ್ದಾಟಗಳು ಹೊಸ ಜೋಡಿಯೊಂದನ್ನು ಹೇಗೆ ಹತ್ತಿರಕ್ಕೆ ತಂದು ಮುಂದಿನ ಬದುಕಿಗೆ ತಯಾರು ಮಾಡುತ್ತವೆ ಅನ್ನುವುದು ಇಲ್ಲಿನ ಕತೆ.  


Stay up to date on all the latest ಸಿನಿಮಾ ಸುದ್ದಿ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp