
ಹನಿಮೂನ್ ವೆಬ್ ಸಿರೀಸ್
ಹನಿಮೂನ್' ಎಂಬ ವೆಬ್ ಸಿರೀಸ್ ವೂಟ್ ಸೆಲೆಕ್ಟ್ನಲ್ಲಿ ತಮಾಷೆಯ ಜೊತೆ ಜೊತೆಗೆ ಮನಮುಟ್ಟುವ ಕತೆ ವೂಟ್ ಸೆಲೆಕ್ಟ್ನಲ್ಲಿ ರಿಲೀಸ್ ಆಗುತ್ತಿದೆ.
ಆರು ಕಂತುಗಳ ಹನಿಮೂನ್ ವೆಬ್ ಸೀರೀಸ್ನ್ನು ಖ್ಯಾತ ನಟ ಶಿವ್ರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ. ವೂಟ್ನಲ್ಲಿ ಇದೇ ಮೇ 20ರಂದು 'ಹನಿಮೂನ್' ಬಿಡುಗಡೆಯಾಗಲಿದೆ.
ನಟ ನಾಗಭೂಷಣ್, 'ಹನಿಮೂನ್' ಮೂಲಕ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಜೊತೆಗೆ ಈ ಸಿರೀಸ್ಗೆ ಬರೆದಿದ್ದಾರೆ. ಈ ಸಿರೀಸ್ನಲ್ಲಿ ಸಂಜನಾ ಆನಂದ್, ಲೂಸಿಯಾ ಪವನ್, ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟ್ಟಿಗೆ ಕೂಡ ನಟಿಸಿದ್ದಾರೆ.
ಈ ವೆಬ್ ಸಿರೀಸ್ ತಮ್ಮ ಮನಸ್ಸಿಗೆ ಹತ್ತಿರವಾದದ್ದು" ಎಂದು ಹೇಳಿದ ನಟ ಶಿವರಾಜ್ ಕುಮಾರ್, ಅವರು ವೆಬ್ ಸಿರೀಸ್ ಕುರಿತಾದ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು ಓಟಿಟಿ, ಥಿಯೇಟರ್ ಕಂಟೆಂಟ್ ಬಗ್ಗೆಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹನಿಮೂನ್ ಅನ್ನುವುದು ಬರೀ ಮಜಾ ಅಲ್ಲ, ಗಂಡು ಹೆಣ್ಣು ತಮ್ಮ ಹೊಸ ಬದುಕನ್ನು ಜೋಡಿಸಿಕೊಳ್ಳುವುದು ಹನಿಮೂನ್ಲ್ಲೇ. ಒಂದಷ್ಟು ಕುತೂಹಲ, ಒಂದಷ್ಟು ಫಜೀತಿ, ಒಂದಷ್ಟು ಗುಟ್ಟುಗಳು, ಒಂದಷ್ಟು ಒದ್ದಾಟಗಳು ಹೊಸ ಜೋಡಿಯೊಂದನ್ನು ಹೇಗೆ ಹತ್ತಿರಕ್ಕೆ ತಂದು ಮುಂದಿನ ಬದುಕಿಗೆ ತಯಾರು ಮಾಡುತ್ತವೆ ಅನ್ನುವುದು ಇಲ್ಲಿನ ಕತೆ.
ಕನ್ನಡದ ಎಷ್ಟೋ ಒಳ್ಳೆಯ ಕಥೆಗಳು ಹೇಳಲು ಕಾದಿವೆ ಹಾಗೂ ಎಷ್ಟೋ ಕಥೆಗಾರರು ಗುರುತಿಸಿಕೊಳ್ಳಲು ಕಾಯುತ್ತಿದ್ದಾರೆ. ಹನಿಮೂನ್ ಕಥೆಯು ನನ್ನನ್ನು ರೋಮಾಂಚನಗೊಳಿಸಿತ. ನನ್ನ ಮಗಳು ನಿವೇದಿತಾ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರಿಂದ, ನನ್ನ ಸಂಪೂರ್ಣ ಬೆಂಬಲ ನೀಡಿದ್ದೇನೆ ಎಂದು ಶಿವರಾಜಕುಮಾರ್ ತಿಳಿಸಿದ್ದಾರೆ.
ನಾಗಭೂಷಣ ಅವರು ಆರು ಕಂತುಗಳ ಸರಣಿಯಾಗಿ ಬರೆದಿದ್ದಾರೆ, ಹನಿಮೂನ್ ಅನ್ನು ಶಿವರಾಜಕುಮಾರ್ ಅವರ ಶ್ರೀ ಮುತ್ತು ಸಿನಿ ಸರ್ವಿಸಸ್ ಬೆಂಬಲಿಸಿದೆ.
ಹನಿಮೂನ್ ಅನ್ನುವುದು ಬರೀ ಮಜಾ ಅಲ್ಲ, ಗಂಡು ಹೆಣ್ಣು ತಮ್ಮ ಹೊಸ ಬದುಕನ್ನು ಜೋಡಿಸಿಕೊಳ್ಳುವುದು ಹನಿಮೂನ್ಲ್ಲೇ. ಒಂದಷ್ಟು ಕುತೂಹಲ, ಒಂದಷ್ಟು ಫಜೀತಿ, ಒಂದಷ್ಟು ಗುಟ್ಟುಗಳು, ಒಂದಷ್ಟು ಒದ್ದಾಟಗಳು ಹೊಸ ಜೋಡಿಯೊಂದನ್ನು ಹೇಗೆ ಹತ್ತಿರಕ್ಕೆ ತಂದು ಮುಂದಿನ ಬದುಕಿಗೆ ತಯಾರು ಮಾಡುತ್ತವೆ ಅನ್ನುವುದು ಇಲ್ಲಿನ ಕತೆ.
“ಕಾಮಿಡಿ ನನ್ನ ಶಕ್ತಿ. ನನ್ನ ಆರಂಭಿಕ ದಿನಗಳಲ್ಲಿ, ನಾನು ಕೆಇಬಿ ಎಂಬ ನನ್ನ ಯೂಟ್ಯೂಬ್ ಚಾನಲ್ನಲ್ಲಿ ಡಿಜಿಟಲ್ ವಿಷಯದಲ್ಲಿ ಕೆಲಸ ಮಾಡುತ್ತಿದ್ದೆ. ಇದು ನನಗೆ ಹನಿಮೂನ್ ಕಥೆ ಮಾಡಲು ಸಹಾಯ ಮಾಡಿತು. ಚಿತ್ರೀಕರಣದ ಸಮಯದಲ್ಲಿ ನಾವು ಅನೇಕ ಸ್ಮರಣೀಯ ಕ್ಷಣಗಳನ್ನು ಹೊಂದಿದ್ದೇವೆ" ಎಂದು ನಾಗಭೂಷಣ್ ಹೇಳಿದರು.