
ಟೀನಾ ಸಿಧು
ಗೋವಾ: ಟಾಲಿವುಡ್ ಕೊರಿಯೋಗ್ರಾಫರ್ ಮತ್ತು ರಿಯಾಲಿಟಿ ಶೋ ವಿಜೇತೆ ಟೀನಾ ಸಿಧು ಅವರ ಮೃತದೇಹ ಗೋವಾದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟೀನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಆಪ್ತವರ್ಗ ಪೊಲೀಸರಿಗೆ ತಿಳಿಸಿದ್ದಾರೆ.
ಟೀನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಆಪ್ತವರ್ಗ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಇನ್ನೂ ಟೀನಾ ಸಾವಿಗೆ ನಿಜವಾದ ಕಾರಣವೇನು ಎಂದು ಯಾರಿಗೂ ತಿಳಿದುಬಂದಿಲ್ಲ. ಟೀನಾ ಸಾವಿನ ಸಾವಿನ ವಿಷಯವನ್ನು ಕೊರಿಯೋಗ್ರಾಫರ್ ಆಟ ಸಂದೀಪ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ನಲ್ಲಿ ಅವರು, ಟೀನಾ ಅವರ ನಿಧನ ಸುದ್ದಿ ತಿಳಿದು ಆಘಾತ ಮತ್ತು ತೀವ್ರ ದುಃಖವಾಗುತ್ತಿದೆ. ಡಾನ್ಸ್ ರಿಯಾಲಿಟಿ ಶೋನಲ್ಲಿ ಟೀನಾ ನನ್ನ ಜೋಡಿಯಾಗಿದ್ದರು. ಅವರು ತುಂಬಾ ವಿನಮ್ರ ವ್ಯಕ್ರಿಯಾಗಿದ್ದರು. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಟೀನಾಗೆ ಶಾಂತಿ ಸಿಗಲಿ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.