ಅಭಿಷೇಕ್ ಧ್ವನಿ ಮತ್ತು ಕಣ್ಣುಗಳಲ್ಲಿ ಅಂಬರೀಷ್ ಕಾಣುತ್ತಾರೆ: ಬ್ಯಾಡ್ ಮ್ಯಾನರ್ಸ್ ನಿರ್ದೇಶಕ ಸೂರಿ!
ಅಭಿಷೇಕ್ ಅಂಬರೀಶ್ ಅಭಿನಯದ ನಿರ್ದೇಶಕ ಸೂರಿ ಅವರ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಮೇ 26 ರಿಂದ ಚಿತ್ರ ತಂಡ ಕೊನೆಯ ಹಂತದ ಶೂಟಿಂಗ್ ಶೆಡ್ಯೂಲ್ ಆರಂಭಿಸಲಿದ್ದು ಬಾಕಿ ಉಳಿದ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಲಿದ್ದಾರೆ.
Published: 16th May 2022 01:17 PM | Last Updated: 16th May 2022 01:22 PM | A+A A-

ಅಭಿಷೇಕ್ ಅಂಬರೀಷ್ ಮತ್ತು ಸೂರಿ
ಅಭಿಷೇಕ್ ಅಂಬರೀಶ್ ಅಭಿನಯದ ನಿರ್ದೇಶಕ ಸೂರಿ ಅವರ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಮೇ 26 ರಿಂದ ಚಿತ್ರ ತಂಡ ಕೊನೆಯ ಹಂತದ ಶೂಟಿಂಗ್ ಶೆಡ್ಯೂಲ್ ಆರಂಭಿಸಲಿದ್ದು ಬಾಕಿ ಉಳಿದ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಲಿದ್ದಾರೆ.
ಸಿನಿಮಾ ಸಂಬಂಧ ನಿರ್ದೇಶಕ ಸೂರಿ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.ನಾವು ನಿಯಮಿತ ವೇಳಾಪಟ್ಟಿಯಂತೆ ಶೂಟಿಂಗ್ ಪೂರ್ಣಗೊಳಿಸಲಿಲ್ಲ. ಈಗ ಕಥೆಯ ಕೊನೆಯ ಭಾಗದಲ್ಲಿದ್ದೇವೆ. ಇಲ್ಲಿಯವರೆಗೂ ಸತತ 126 ದಿನ ಚಿತ್ರೀಕರಣ ಮಾಡಿದ್ದೇವೆ. ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಒಟ್ಟಾರೆ ಜನರ ಮುಂದೆ ಬರಲು ಒಂದು ಒಳ್ಳೆ ಕಂಟೆಂಟ್ ನಮ್ಮ ಜತೆ ಇದೆ. ಮಾಸ್ತಿ ಕೂಡ ಸಂಭಾಷಣೆಗಳನ್ನು ಉತ್ತಮವಾಗಿ ಬರೆದಿದ್ದಾರೆ. ಸುರೇಂದ್ರನಾಥ್ ಮತ್ತು ಅಮ್ರಿಯವರು ಬರೆದಿರುವ ಚಿತ್ರಕಥೆ ಬಹಳ ಇಂಟ್ರೆಸ್ಟಿಂಗ್ ಆಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.
ಅಭಿಷೇಕ್ ನಟನೆಯಲ್ಲಿ ಪುಟ್ಟ ಮಗು. ತನ್ನ ತಂದೆಯ ಕಣ್ಣು, ಧ್ವನಿಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿದ್ದಾರೆ. ಅವರ ಆರ್ಭಟ ಈ ಬಾರಿ ಕೊಂಚ ಹೆಚ್ಚಾಗಿರುತ್ತದೆ. ಒಂದರ್ಥದಲ್ಲಿ ಬಂದು ಬಡಿದು ಬಾಯಿಗೆ ಹಾಕಿಕೊಳ್ಳುವುದು ಅಂತಾರಲ್ಲ ಹಾಗೆ ಕಾಣಿಸುತ್ತಾರವರು. ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಯಾವುದೇ ಕಾಲಘಟ್ಟಕ್ಕೂ ಹೊಂದಿಕೆಯಾಗುತ್ತದೆ. ನಾನು ಇನ್ನೂ ಒಂದೂವರೆ ವರ್ಷಕ್ಕೆ ಸಿನಿಮಾ ಬಿಡುಗಡೆ ಮಾಡಿದರೂ ಅವತ್ತಿಗೆ ಜನ ಅದನ್ನು ಕನೆಕ್ಟ್ ಮಾಡಿಕೊಳ್ಳುತ್ತಾರೆ.
ಅಭಿಷೇಕ್ ವಿಭಿನ್ನ ಟೈಮ್ಲೈನ್ಗಳಲ್ಲಿ ಮೂರು ಛಾಯೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ನಾಯಕಿಯರಾಗಿ ನಟಿಸಿದ್ದಾರೆ. ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದರ ನಡುವಿನ ತೆಳುವಾದ ಗೆರೆಯನ್ನು ಇರಿಸಿಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ.
ಇದನ್ನೂ ಓದಿ: ಎಸ್.ಕೃಷ್ಣ ನಿರ್ದೇಶನದ 'ಕಾಳಿ' ರೋಮ್ಯಾಂಟಿಕ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್!
ಸೂರಿ ಮುಂದಿನ ಸಿನಿಮಾ ಕದನ ವಿರಾಮ, ಇದಕ್ಕಾಗಿ ಅವರು ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಸದ್ಯ ಕಥೆ ಬರವಣಿಗೆಯ ಹಂತದಲ್ಲಿದೆ. ಇದಾದ ನಂತರ ನಾವು ಕಲಾವಿದರ ಆಯ್ಕೆ ಮಾಡಲಿದ್ದೇವೆ, ನಂತರ ಕಾಗೆ ಬಂಗಾರ ಶೂಟಿಂಗ್ ಕೂಡ ಪೆಂಡಿಂಗ್ ಇದೆ.
ಕೆಜಿಎಫ್ ಚಾಪ್ಟರ್-2 ಟೋಟಲ್ ಆಗಿ ದೀಪಾವಳಿ ಬೋನಸ್ ರೀತಿ ಇತ್ತು. ಇದೊಂದು ಹೊಸ ಅಲೆ ಎನ್ನಬಹುದು. ಇಲ್ಲಅವರೇ ಹೆಸರಿಟ್ಟಂತೆ ತೂಫಾನ್ ಎನ್ನಬಹುದು. ಅಲೆ ಬಂದರೆ ನೆಲ ಸಾರಿಸಿ ಗುಡಿಸಿ ಹಿಂದಕ್ಕೆ ಹೋಗುತ್ತದೆ. ಈಗ ನಮ್ಮವರೊಬ್ಬರು ಬಜೆಟ್, ಸಿನಿಮಾ, ಕಥೆ, ಕಲೆಕ್ಷನ್ ಹೀಗೆ ಎಲ್ಲ ವಿಚಾರದಲ್ಲಿಯೂ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಅಲ್ಲೊಂದು ಬಾವುಟ ನೆಟ್ಟರು.
ಸ್ಟಾರ್ ಚಿತ್ರಗಳ ಹೊರತಾಗಿ ಸ್ಯಾಂಡಲ್ವುಡ್ ಉದ್ಯಮವು ಸಾಮಾನ್ಯವಾಗಿ 10 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಕಡಿಮೆ-ಬಜೆಟ್ ಚಲನಚಿತ್ರಗಳನ್ನು ಮಾಡಲು ಹೆಸರುವಾಸಿಯಾಗಿದೆ. ಇಂದು 50 ಕೋಟಿ ರೂಪಾಯಿಗೆ ಕನ್ನಡ ಸಿನಿಮಾ ಮಾಡಲು ನಿರ್ಮಾಪಕರು ತಯಾರಾಗಿರುವುದು ಖುಷಿಯ ವಿಚಾರ. ನಾನು ಇದನ್ನು ಮೈಲಿಗಲ್ಲು ಎಂದು ಪರಿಗಣಿಸುತ್ತೇನೆ ಮತ್ತು ಎಲ್ಲಾ ಕ್ರೆಡಿಟ್ ಯಶ್, ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.