ದೇಶೀಯ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಕ್ಲಬ್ ಸೇರಿದ ಕೆಜಿಎಫ್ 2: ಬಾಹುಬಲಿ 2ರ ನಂತರ ಇತಿಹಾಸ ಮರುಸೃಷ್ಟಿ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಒಂದರ ಮೇಲೊಂದು ದಾಖಲೆಗಳನ್ನು ಬರೆಯುತ್ತಲೇ ಇದೆ. ಇದೀಗ ಭಾರತದಲ್ಲಿ 1000 ಕೋಟಿ ಕಲೆಕ್ಷನ್ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ.
Published: 16th May 2022 02:38 PM | Last Updated: 16th May 2022 02:38 PM | A+A A-

ಕೆಜಿಎಫ್ 2-ಬಾಹುಬಲಿ 2
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಒಂದರ ಮೇಲೊಂದು ದಾಖಲೆಗಳನ್ನು ಬರೆಯುತ್ತಲೇ ಇದೆ. ಇದೀಗ ಭಾರತದಲ್ಲಿ 1000 ಕೋಟಿ ಕಲೆಕ್ಷನ್ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ.
ಬಾಹುಬಲಿ: ದಿ ಕನ್ಕ್ಲೂಷನ್ ನಂತರ ಕೆಜಿಎಫ್: ಅಧ್ಯಾಯ 2 ಭಾರತದಲ್ಲೇ 1000 ಕೋಟಿ ಗಡಿದಾಟುವ ಮೂಲಕ ಇತಿಹಾಸವನ್ನು ಮರುಸೃಷ್ಟಿಸಿದೆ.
ಯಶ್ ಅಭಿನಯದ ಆಕ್ಷನ್-ಡ್ರಾಮಾ ಚಿತ್ರ ಭಾರತದಲ್ಲಿ ರೂ. 1000 ಕೋಟಿ ಕ್ಲಬ್ಗೆ ಪ್ರವೇಶಿಸಿದೆ. ಅಲ್ಲದೆ ಬಿಡುಗಡೆಯಾಗಿ ಒಂದು ತಿಂಗಳು ಕಳೆದರು ಗಳಿಕೆಯಲ್ಲಿ ಕಡಿಮೆಯಾಗಿಲ್ಲ. ಜಗತ್ತಿನಾದ್ಯಂತ 1,191 ಕೋಟಿ ಕಲೆಕ್ಷನ್ ಮಾಡಿದೆ.
#KGFChapter2 WW Box Office
— Manobala Vijayabalan (@ManobalaV) May 15, 2022
Week 1 - ₹ 720.31 cr
Week 2 - ₹ 223.51 cr
Week 3 - ₹ 140.55 cr
Week 4 - ₹ 91.26 cr
Week 5
Day 1 - ₹ 5.20 cr
Day 2 - ₹ 4.34 cr
Day 3 - ₹ 6.07 cr
Total - ₹ 1191.24 cr
ROCK solid even on 5th Saturday.
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವು ಎಸ್ಎಸ್ ರಾಜಮೌಳಿಯವರ ಪ್ರಭಾಸ್-ರಾಣಾ ದಗ್ಗುಬಾಟಿ ಅಭಿನಯದ ಮಹೋನ್ನತ ಬಾಹುಬಲಿ 2 ನಂತರ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂಪಾಯಿಗಳನ್ನು ಗಳಿಸಿದ ಎರಡನೇ ಚಿತ್ರವಾಗಿದೆ.
#KGF2 creates HISTORY in India.
— Manobala Vijayabalan (@ManobalaV) May 15, 2022
CROSSES ₹1000 cr at the domestic BO.
First ever Sandalwood movie and 2nd movie of all time to achieve this HIMALAYAN feat.
ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 2000 ಕೋಟಿ ಕಲೆಕ್ಷನ್ ಮಾಡಿರಬಹುದು. ಆದರೆ ದಂಗಲ್ ಚಿತ್ರ ಭಾರತದಲ್ಲಿ ಕಲೆಕ್ಷನ್ ಮಾಡಿದ್ದು ಮಾತ್ರ 600 ಕೋಟಿ ರೂಪಾಯಿ ಒಳಗೆ. ವಿದೇಶದಲ್ಲಿ ದೊಡ್ಡ ಕಲೆಕ್ಷನ್ ಮಾಡಿದ್ದ ದಂಗಲ್ ಚಿತ್ರ ಚೀನಾದಲ್ಲೇ 1,200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಬಾಹುಬಲಿ 2 ಚಿತ್ರ ಭಾರತದಲ್ಲಿ 1,500ಕ್ಕೂ ಹೆಚ್ಚು ಕಲೆಕ್ಷನ್ ಮಾಡಿದ್ದು ವಿದೇಶಗಳಲ್ಲಿ ಆ ಚಿತ್ರದ ಕಲೆಕ್ಷನ್ 300 ಕೋಟಿ ದಾಟಿದೆ.
ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ತೆಲುಗಿನ ಬಾಹುಬಲಿ 2 ಮತ್ತು ಕನ್ನಡದ ಕೆಜಿಎಫ್ 2 ಚಿತ್ರ ಬಿಟ್ಟರೆ ಮತ್ಯಾವ ಚಿತ್ರವು 1000 ಕೋಟಿ ಸನಿಹಕ್ಕೂ ಬಂದಿಲ್ಲ.