‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾಕ್ಕಾಗಿ ಒಂದಾದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ
ಸ್ಯಾಂಡಲ್‌ವುಡ್‌ನ ಇಬ್ಬರು ಜನಪ್ರಿಯ ರ್ಯಾಪರ್‌ಗಳೆಂದರೆ, ಅದು ಚಂದನ್ ಶೆಟ್ಟಿ ಮತ್ತು ಆಲ್ ಓಕೆ (ಅಲೋಕ್). ಈ ಇಬ್ಬರು ಈಗಾಗಲೇ ಹಲವು ಹಿಟ್ ಸಾಂಗ್‌ಗಳನ್ನು ಹಾಡಿ ಸಖತ್ ಆಗಿ ರಂಜಿಸಿದ್ದಾರೆ.
Published: 16th May 2022 11:09 AM | Last Updated: 16th May 2022 11:09 AM | A+A A-

ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ಸ್ಟಿಲ್
ಸ್ಯಾಂಡಲ್‌ವುಡ್‌ನ ಇಬ್ಬರು ಜನಪ್ರಿಯ ರ್ಯಾಪರ್‌ಗಳೆಂದರೆ, ಅದು ಚಂದನ್ ಶೆಟ್ಟಿ ಮತ್ತು ಆಲ್ ಓಕೆ (ಅಲೋಕ್). ಈ ಇಬ್ಬರು ಈಗಾಗಲೇ ಹಲವು ಹಿಟ್ ಸಾಂಗ್‌ಗಳನ್ನು ಹಾಡಿ ಸಖತ್ ಆಗಿ ರಂಜಿಸಿದ್ದಾರೆ.
ಆದರೆ ಈ ಇಬ್ಬರು ಇದುವರೆಗೂ ಒಟ್ಟಿಗೆ ಹಾಡಿರಲಿಲ್ಲ. ಆದರೆ ಅದು ಸಾಧ್ಯವಾಗಿರುವುದು ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಿಂದ. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಒಟ್ಟಿಗೆ ಹಾಡೊಂದನ್ನು ಹಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಖ್ಯಾತ ಪೋಷಕ ಕಲಾವಿದರಾದ ರಂಗಾಯಣ ರಘು, ರವಿಶಂಕರ್, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಲ್ಲಿರುವ 'ಬ್ಯಾಂಕಾಕ್ ಸಾಂಗ್'ಗೆ ಈ ಇಬ್ಬರು ಧ್ವನಿಯಾಗಿದ್ದಾರೆ.
ಈ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಲ್ಲಿ ಪೋಷಕ ಕಲಾವಿದರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದರ್ಥದಲ್ಲಿ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಇವರೇ ನಾಯಕರು. ಸಂಭಾಷಣೆಕಾರ ಅನಿಲ್ ಕುಮಾರ್ ಅವರು ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದ ನಿರ್ದೇಶನದ ಮಾಡಿದ್ದು, ಜೊತೆಗೆ ತಮ್ಮ ಸ್ನೇಹಿತರೊಂದಿಗೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಪ್ರಮುಖ ಪಾತ್ರ ಮಾಡಿದ್ದು, 'ಹಲವು ಸಿನಿಮಾಗಳಲ್ಲಿ ಅಭಿನಯಿಸುವ ವಿಲನ್‌ಗಳು ಹಾಗೂ ಕಾಮಿಡಿಯನ್ಸ್ ಸಮಾಗಮದಲ್ಲಿ ಮೂಡಿಬಂದಿರುವ ಚಿತ್ರವಿದು.ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಒಟ್ಟಿಗೆ ಹಾಡೊಂದನ್ನು ಹಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ಪೋಷಕ ಕಲಾವಿದರಾದ ರಂಗಾಯಣ ರಘು, ರವಿಶಂಕರ್, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಲ್ಲಿರುವ 'ಬ್ಯಾಂಕಾಕ್ ಸಾಂಗ್'ಗೆ ಈ ಇಬ್ಬರು ಧ್ವನಿಯಾಗಿದ್ದಾರೆ.
ಸದ್ಯ ಸೆನ್ಸಾರ್ ಪ್ರಕ್ರಿಯೆಯಲ್ಲಿದ್ದು, ಚಿತ್ರವು ಮೇ 27 ರಂದು ಥಿಯೇಟರ್‌ಗೆ ಬರಲಿದೆ. ನವೀನ್ ಕುಮಾರ್ ಅವರ ಬೆಂಬಲದೊಂದಿಗೆ ಕಾಣೆಯಾದವರ ಬಗ್ಗೆ ಪ್ರಕಟಣೆಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅನಿಲ್ ಕುಮಾರ್ ಅಭಿನಯದ ಶಿವ 143 ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಶಿವಕುಮಾರ್ ಬಿ ಕೆ ಈ ಚಿತ್ರಕ್ಕೆ ಕ್ಯಾಮೆರಾ ಕೆಲಸ ಮಾಡಿದ್ದಾರೆ.