ಸತೀಶ್ ನಿನಾಸಂ ನಟನೆಯ ಮುಂದಿನ ಸಿನಿಮಾ ಟೈಟಲ್ 'ಅಶೋಕ ಬ್ಲೇಡ್'!
ನಟ ನೀನಾಸಂ ಸತೀಶ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಅಶೋಕ ಬ್ಲೇಡ್’ ಎಂದು ಶೀರ್ಷಿಕೆ ಇಡಲಾಗಿದೆ.
Published: 16th May 2022 12:25 PM | Last Updated: 16th May 2022 01:21 PM | A+A A-

ಸತೀಶ್ ನಿನಾಸಂ
ನಟ ನೀನಾಸಂ ಸತೀಶ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಅಶೋಕ ಬ್ಲೇಡ್’ ಎಂದು ಶೀರ್ಷಿಕೆ ಇಡಲಾಗಿದೆ.
ನಾನು ಹಲವಾರು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಿ. ಶೇಷಾದ್ರಿ, ಟಿ.ಎನ್. ಸೀತಾರಾಂ ಅವರ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ವರ್ಧನ್ ಮತ್ತು ದೀಪಕ್ ನಾಯ್ಡು ಅವರ ಪರಿಚಯವಾಯಿತು. ಮೂರು ಜನ ಸೇರಿ 10 ವರ್ಷಗಳ ಹಿಂದೆ ಒಂದು ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿ, ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದೇವೆ. ಒಂದು ಚಿತ್ರ ನಿರ್ಮಾಣ ಮಾಡುವ ಯೋಚನೆ ಇತ್ತು. ಟಿ.ಕೆ. ದಯಾನಂದ್ ಅವರ ಹತ್ತಿರ ಒಂದೊಳ್ಳೆಯ ಕಥೆ ಇದೆ ಎಂದು ಗೊತ್ತಾಯಿತು" ನಿರ್ದೇಶಕ ವಿನೋದ್ ದೋಂಡಾಳೆ ಮಾಹಿತಿ ನೀಡಿದರು. ಸುಮಾರು 20 ವರ್ಷಗಳ ಅನುಭವವನ್ನು ಒಟ್ಟುಗೂಡಿಸಿ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ನೀಡಿರುವ ಅವರು, ‘ಸಾಮಾನ್ಯವಾಗಿ ಹೀರೋಗೆ ಕಥೆ ಹೇಳೋಕೆ ನಿರ್ದೇಶಕರು ಬರುತ್ತಾರೆ. ಆದರೆ, ನಾನೇ ಕಥೆಯನ್ನು ಹುಡುಕಿಕೊಂಡು ಹೋಗಿದ್ದು’ ಎಂದು ಹೇಳಿದ್ದಾರೆ. ಈ ಮೂಲಕ ಸಿನಿಮಾ ಆರಂಭವಾಗಿದ್ದು ಹೇಗೆ ಎನ್ನುವ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇದನ್ನೂ ಓದಿ: ನನ್ನ ಸಿನಿಮಾ ರಿಲೀಸ್ ಮಾಡಲು ಥಿಯೇಟರ್ ನಲ್ಲಿ 100% ಸೀಟ್ ಆಕ್ಯುಪೆನ್ಸಿಗಾಗಿ ಕಾಯುತ್ತಿದ್ದೇನೆ ಸತೀಶ್ ನೀನಾಸಂ
ಚಿತ್ರ ಕಥೆ ನೈಜ ಘಟನೆಯನ್ನು ಆಧರಿಸಿದೆ. 70 ಮತ್ತು 80 ರ ದಶಕದ ಕುರಿತ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಸತೀಶ್ ಒಂದು ಸಮುದಾಯಕ್ಕಾಗಿ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಲ್ಕು ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಅವರ ಜೀವನದ ವಿವಿಧ ಹಂತಗಳ ಮೂಲಕ ಸಾಗುತ್ತದೆ - ಯೌವನ (25), ಮಧ್ಯವಯಸ್ಸು (35), ಮತ್ತು ವೃದ್ಧಾಪ್ಯ (70) ಕುರಿತಾಗಿದೆ.
ಚಾಮರಾಜನಗರ ಮತ್ತು ನಂಜನಗೂಡಿನ ಸ್ಥಳಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆಯಲಿದೆ. ವೃದ್ಧಿ ಕ್ರಿಯೇಷನ್ಸ್ ಮತ್ತು ಸತೀಶ್ ಪಿಕ್ಚರ್ಸ್ ಬೆಂಬಲಿತ ಅಶೋಕ ಬ್ಲೇಡ್ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಲವಿತ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಕಾವ್ಯ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರತಂಡ ಇತರ ಪೋಷಕ ನಟರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.