ಶಿವರಾಜ್ ಕುಮಾರ್ ಮುಂದಿನ ಸಿನಿಮಾಗೆ ಸಚಿನ್ ರವಿ ನಿರ್ದೇಶನ, ನಿರ್ಮಾಣ!
ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಅವರು ಆಕ್ಷನ್-ಪ್ಯಾಕ್ಡ್ ಸ್ಪೈ ಥ್ರಿಲ್ಲರ್ನಲ್ಲಿ ಶಿವರಾಜ್ಕುಮಾರ್ ಅವರನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು.
Published: 17th May 2022 01:08 PM | Last Updated: 17th May 2022 01:19 PM | A+A A-

ಸಚಿನ್ ರವಿ ಮತ್ತು ಶಿವರಾಜಕುಮಾರ್
ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಅವರು ಆಕ್ಷನ್-ಪ್ಯಾಕ್ಡ್ ಸ್ಪೈ ಥ್ರಿಲ್ಲರ್ನಲ್ಲಿ ಶಿವರಾಜ್ಕುಮಾರ್ ಅವರನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು.
ಇದೀಗ ಸಚಿನ್ ರವಿ ಅವರೇ ತಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ಮತ್ತು ಕಾರ್ಪೊರೇಟ್ ಕಂಪನಿಯೊಂದರ ಸಹಯೋಗದಲ್ಲಿ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಅಶ್ವತ್ಥಾಮ ಎಂದು ಹೆಸರಿಸಲಾಗಿದ್ದ ಈ ಚಿತ್ರದ ಟೈಟಲ್ ಬದಲಾಗಿದೆ, ಆದಷ್ಟು ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಹಿಂದೂ ಪುರಾಣಗಳಿಂದ ಆಧರಿಸಿದ ಅಶ್ವತ್ಥಾಮವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರವು ಆಕ್ಷನ್-ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಆಗಿರುತ್ತದೆ ಎಂದು ಸಚಿನ್ ರವಿ ಸ್ವಷ್ಟ ಪಡಿಸಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರೀಕರಣದ ವೇಳೆ ಕಥೆ ಬರೆಯಲಾಗಿತ್ತು. ಚಿತ್ರದ ಕಥೆ ಅಶ್ವತ್ಥಾಮ ತ್ಮ ಜೀವನದುದ್ದಕ್ಕೂ ಎದುರಿಸಿದ ಸಂಬಂಧಗಳು ಹಾಗೂ ಕೆಟ್ಟದ್ದನ್ನು ಅವನು ಹೇಗೆ ಸ್ವೀಕರಿಸಿದ ಎಂಬ ಬಗ್ಗೆ ಕಥೆ ಹೇಳುತ್ತದೆ ಎಂಬುದ ಕುರಿತಾಗಿದೆ.
ಇದನ್ನೂ ಓದಿ: ನೆಲ್ಸನ್ ನಿರ್ದೇಶನದ ರಜನಿಕಾಂತ್ ನಟನೆಯ 'ತಲೈವರ್ 169' ಚಿತ್ರದಲ್ಲಿ ಶಿವರಾಜ್ ಕುಮಾರ್!
ಅಮರತ್ವ ಪಡೆದ ಅಶ್ವತ್ಥಾಮ ರ ಜೊತೆ ಇತರರನ್ನು ಕರೆ ತರುವ ಸರಣಿ ಮುಂದುವರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಶಿವರಾಜಕುಮಾರ್ ಅವರು ಪ್ರಸ್ತುತ ತಮ್ಮ 125 ನೇ ಚಿತ್ರವಾದ ವೇದಾ ಚಿತ್ರೀಕರಣದಲ್ಲಿದ್ದು, ಯೋಗರಾಜ್ ಭಟ್-ರಾಕ್ ಲೈನ್ ವೆಂಕಟೇಶ್ ಅವರ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
ಸಚಿನ್ ರವಿ ಚಿತ್ರ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದೆ. ಇದಲ್ಲದೆ, ರಜನಿಕಾಂತ್-ನೆಲ್ಸನ್ ಅವರ ತಲೈವರ್ 169 ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಶಿವಣ್ಣ ಅವರನ್ನು ಸಂಪರ್ಕಿಸಲಾಗಿದೆ.