ಮನುರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ' ಚಿತ್ರದ ಬಿಡುಗಡೆಗೆ ಮಹೂರ್ತ ಫಿಕ್ಸ್!
ಕ್ರೇಜಿಸ್ಟಾರ್ ರವಿಚಂದ್ರನ್ರ ಪುತ್ರ ಮನುರಂಜನ್ ಅಭಿನಯದ 'ಪ್ರಾರಂಭ' ಬಿಡುಗಡೆಗೆ ಸಿದ್ಧವಾಗಿದೆ. ಮನುರಂಜನ್ ನಟನೆಯ ಪ್ರಾರಂಭ ಸಿನಿಮಾ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ.
Published: 18th May 2022 12:28 PM | Last Updated: 18th May 2022 01:22 PM | A+A A-

ಪ್ರಾರಂಭ ಸಿನಿಮಾ ಸ್ಟಿಲ್
ಕ್ರೇಜಿಸ್ಟಾರ್ ರವಿಚಂದ್ರನ್ರ ಪುತ್ರ ಮನುರಂಜನ್ ಅಭಿನಯದ 'ಪ್ರಾರಂಭ' ಬಿಡುಗಡೆಗೆ ಸಿದ್ಧವಾಗಿದೆ. ಮನುರಂಜನ್ ನಟನೆಯ ಪ್ರಾರಂಭ ಸಿನಿಮಾ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ
ಈ ಹಿಂದೆ ಕೆಲ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಮನು ಕಲ್ಯಾಡಿ ಈ ಬಾರಿ ರವಿಚಂದ್ರನ್ ಪುತ್ರನಿಗಾಗಿ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಹೆಣೆದಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮನು ಕಲ್ಯಾಡಿ ಅವರೇ ಬರೆದಿದ್ದಾರೆ.
ಪ್ರಜ್ವಲ್ ಪೈ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು. ಈಚೆಗಷ್ಟೇ ಈ ಸಿನಿಮಾದ ಪ್ರಚಾರದ ಸಲುವಾಗಿ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಆಹ್ವಾನಿಸುವ ವಿಶೇಷ ಆಹ್ವಾನ ಪತ್ರಿಕೆಗೆ ಎಲ್ಲೆಡೆ ವೈರಲ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಜೇನುಶ್ರೀ ತನುಷಾ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾದ ಪ್ರಾರಂಭ ಸಿನಿಮಾಗೆ ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣವಿದೆ. ಚಿತ್ರದಲ್ಲಿ ಶಾಂಭವಿ ವೆಂಕಟೇಶ್ ಮತ್ತು ಕಡ್ಡಿಪುಡಿ ಚಂದ್ರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ರವಿಚಂದ್ರನ್ ಮಗನ 'ಪ್ರಾರಂಭ' ಸಿನಿಮಾದ ಆಹ್ವಾನ ಪತ್ರಿಕೆ ವೈರಲ್
ಯು/ಎ ಸರ್ಟಿಫಿಕೇಟ್ ಪಡೆದಿರುವ ಪ್ರಾರಂಭ ಸಿನಿಮಾದಲ್ಲಿ ಲಿಪ್ಲಾಕ್ ದೃಶ್ಯಗಳಿಂದ ಸಂಚಲನ ಮೂಡಿಸಿದೆ, ಇದೀಗ ಒಂದಕ್ಕೆ ಕತ್ತರಿ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಸಾಹೇಬ, ಬೃಹಸ್ಪತಿ ಮತ್ತು ಮುಗಿಲ್ಪೇಟೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮನೋರಂಜನ್ ಅವರ ನಾಲ್ಕನೇ ಪ್ರಾಜೆಕ್ಟ್ ಆಗಿದೆ.