ನಾಳೆ ಒಂದೇ ದಿನ ಓಟಿಟಿ ಮತ್ತು ಚಿತ್ರಮಂದಿರದಲ್ಲಿ 11 ಕನ್ನಡ ಚಿತ್ರಗಳು ತೆರೆಗೆ; ಇಲ್ಲಿದೆ ಸಂಪೂರ್ಣ ಮಾಹಿತಿ...

ನಾಳೆ ಚಂದನವನದಲ್ಲಿ ಒಂದೇ ದಿನ ಬರೊಬ್ಬರಿ 11 ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅನು ಪ್ರಭಾಕರ್ ಅಭಿನಯದ ಸಾರಾ ವಜ್ರ ಮತ್ತು ಡಾಲಿ ಧನಂಜಯ್ ಅಭಿನಯದ ಟ್ವಿಂಟಿ ಒನ್ ಹವರ್ಸ್ ಚಿತ್ರಗಳು ಸೇರಿದಂತೆ ಒಟ್ಟು 11 ಚಿತ್ರಗಳು ಬಿಡುಗಡೆಯಾಗುತ್ತಿವೆ.

Published: 19th May 2022 07:52 PM  |   Last Updated: 19th May 2022 08:14 PM   |  A+A-


11-kannada-movies

11 ಕನ್ನಡ ಚಿತ್ರಗಳು ತೆರೆಗೆ

Online Desk

ಬೆಂಗಳೂರು: ನಾಳೆ ಚಂದನವನದಲ್ಲಿ ಒಂದೇ ದಿನ ಬರೊಬ್ಬರಿ 11 ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅನು ಪ್ರಭಾಕರ್ ಅಭಿನಯದ ಸಾರಾ ವಜ್ರ ಮತ್ತು ಡಾಲಿ ಧನಂಜಯ್ ಅಭಿನಯದ ಟ್ವಿಂಟಿ ಒನ್ ಹವರ್ಸ್ ಚಿತ್ರಗಳು ಸೇರಿದಂತೆ ಒಟ್ಟು 11 ಚಿತ್ರಗಳು ಬಿಡುಗಡೆಯಾಗುತ್ತಿವೆ.

ಮೇ ಮೊದಲ ವಾರದಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಬಿಡುಗಡೆಯ ಅಬ್ಬರ ಜೋರಾಗಿದೆ. ಮೇ ತಿಂಗಳಿನಲ್ಲಿ ಕನ್ನಡದಲ್ಲಿ ಯಾವುದೇ ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳ ಬಿಡುಗಡೆ ಇಲ್ಲದಿರುವುದರಿಂದ, ಕಳೆದ ಎರಡು-ಮೂರು ವರ್ಷಗಳಿಂದ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಬಹುತೇಕ ಹೊಸಬರ ಸಿನಿಮಾಗಳು ಮೇ ತಿಂಗಳಿನಲ್ಲಿ ತೆರೆಗೆ ಬರಲು ಮುಂದಾಗಿವೆ. ಹೀಗಾಗಿ ಚಿತ್ರರಂಗ ಮತ್ತು ಪ್ರೇಕ್ಷಕರ ನಿರೀಕ್ಷೆಯಂತೆ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿ ಹೊಸಬರ ಸಿನಿಮಾಗಳು ಸ್ಯಾಂಡಲ್‌ ವುಡ್‌ನ‌ಲ್ಲಿ ರಂಗು ಹೆಚ್ಚಿಸಲಿವೆ. ಕೋವಿಡ್-19 ಸಾಂಕ್ರಾಮಿಕ 3ನೇ ಅಲೆ ಮತ್ತು ಕೆಜಿಎಫ್-2, ಆರ್ ಆರ್ ಆರ್ ನಂತಹ ದೊಡ್ಡ ಚಿತ್ರಗಳ ಪ್ರಭಾವದಿಂದಾಗಿ ಸಾಕಷ್ಟು ಚಿತ್ರಗಳು ಈ ಹಿಂದೆ ಬಿಡುಗಡೆಗೆ ಹಿಂದೇಟು ಹಾಕಿದ್ದವು. ಆದರೆ ಇದೀಗ ಸದ್ಯ ಮಾರುಕಟ್ಟೆಯಲ್ಲಿ ಕೆಜಿಎಫ್2 ಚಿತ್ರವನ್ನು ಬಿಟ್ಟರೆ ಯಾವುದೇ ದೊಡ್ಡ ಚಿತ್ರಗಳು ಇಲ್ಲ. ಹೀಗಾಗಿ ಬಿಡುಗಡೆಗೆ ಇದೇ ಸೂಕ್ತ ಸಮಯ ಎಂದು ತಿಳಿದಂತಿರುವ ಚಿತ್ರತಂಡಗಳು ತಮ್ಮ ತಮ್ಮ ಚಿತ್ರಗಳನ್ನು ತೆರೆಮೇಲೆ ತರಲು ಮುಂದಾಗಿವೆ. 

ಈ ಹಿಂದೆ ಮೇ ಮೊದಲ ಶುಕ್ರವಾರ ಅಂದರೆ ಮೇ. 6ಕ್ಕೆ “ಅವತಾರ ಪುರುಷ’, “ಟಕ್ಕರ್‌’, “ಪುರುಷೋತ್ತಮ’, “ದ್ವಿಮುಖ’, “ನೆನಪಾಗುತ್ತಿಲ್ಲ’, ಮತ್ತು “ಮ್ಯಾನ್‌ ಆಫ್ ದಿ ಮ್ಯಾಚ್‌’ (ಓಟಿಟಿ) ಆರು ಸಿನಿಮಾಗಳು ಬಿಡುಗಡೆಯಾಗಿದ್ದವು. ಮೇ ಎರಡನೇ ಶುಕ್ರವಾರ (ಮೇ 13) “ಕಸ್ತೂರಿ ಮಹಲ್‌’, “ಕ್ರಿಟಿಕಲ್‌ ಕೀರ್ತನೆಗಳು’, “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಮತ್ತು “ಅತ್ಯುತ್ತಮ’ ಎಂಬ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು.

ನಾಳೆ ಅಂದರೆ ಮೇ 20 ಶುಕ್ರವಾರದಂದೆ ಈ ಸಂಖ್ಯೆಯನ್ನೂ ಮೀರಿಸುವಂತೆ ಒಟ್ಟು 11 ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ನಾಳೆ ಒಂದೇ ದಿನ ಒಟ್ಟು 11 ಚಿತ್ರಗಳು ತೆರೆಗೆ ಬರುತ್ತಿವೆ ಎಂದು ಸ್ಯಾಂಡಲ್ ವುಡ್ ಮೂಲಗಳು ತಿಳಿಸಿವೆ. ಈ ಪೈಕಿ ಸಾಹಿತಿ ಸಾರಾ ಅಬೂಬಕ್ಕರ್‌ ಅವರ ಕಾದಂಬರಿ ‘ವಜ್ರಗಳು’ ಆಧಾರಿತ ‘ಸಾರಾ ವಜ್ರ’ ಮತ್ತು ಡಾಲಿ ಧನಂಜಯ ಅಭಿನಯದ ಟ್ವೆಂಟಿವನ್‌ ಅವರ್ಸ್‌ ಸಿನಿಮಾ ಕೂಡ ನಾಳೆಯೇ ತೆರೆಗೆ ಬರುತ್ತಿದೆ.

ಟ್ವೆಂಟಿ ವನ್‌ ಅವರ್ಸ್‌

ನಟಿ ಅನು ಪ್ರಭಾಕರ್, ಪತ್ರಕರ್ತ ರೆಹಮಾನ್‌ ಹಾಸನ್‌, ರಮೇಶ್ ಭಟ್, ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್ ಪೂಜಾರಿ, ವಿಭಾಸ್, ಸಾಯಿತೋಷಿತ್, ಅಂಕಿತಾ, ಆಯುಷ್ ಜಿ. ಶೆಟ್ಟಿ ತಾರಾಬಳಗದಲ್ಲಿದ್ದಾರೆ. ಪತ್ರಕರ್ತ ಬಿ.ಎಂ. ಹನೀಫ್‌ ಅವರ ಸಾಹಿತ್ಯದ ಐದು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಆರ್ನಾ ಸಾಧ್ಯ (ಶ್ವೇತಾ) ಚಿತ್ರ ನಿರ್ದೇಶಿಸಿದ್ದಾರೆ.

ಡಾಲಿ ಧನಂಜಯ ಅವರ ಟ್ವೆಂಟಿವನ್‌ ಅವರ್ಸ್‌ ಕೂಡ ನಾಳೆಯೇ ತೆರೆ ಬರುತ್ತಿದ್ದು, ರಾಹುಲ್‌ ಮಹದೇವ್‌, ಅಪೂರ್ವಾ ಭಾರಾದ್ವಾಜ್‌, ದುರ್ಗಾ ಕೃಷ್ಣ ಚಿತ್ರದಲ್ಲಿ ಅಭಿನಯಸಿದ್ದಾರೆ. ಜೈಶಂಕರ್‌ ಪಂಡಿತ್‌ ಚಿತ್ರ ನಿರ್ದೇಶಿಸಿದ್ದಾರೆ.
 
ಪ್ರಾರಂಭ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ ಪ್ರಾರಂಭ ಚಿತ್ರ ಕೂಡ ನಾಳೆಯೇ ತೆರೆಗೆ  ಬರುತ್ತಿದ್ದು, ಕೀರ್ತಿ ಕಲ್ಕೇರಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನು ಕಲ್ಯಾಡಿ ಚಿತ್ರದ ನಿರ್ದೇಶಕರಾಗಿದ್ದು ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣವಿದೆ. ಜಗದೀಶ್‌ ಕಲ್ಯಾಡಿ ಈ ಚಿತ್ರದ ನಿರ್ಮಾಪಕರು.

ಸಾರಾವಜ್ರ

ಸಿದ್ಧಾರ್ಥ್‌ ಮಹೇಶ್‌, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್‌ ಅಭಿನಯದ ಗರುಡ ಸಿನಿಮಾ ಸಹ ನಾಳೆ ತೆರೆ ಕಾಣುತ್ತಿದೆ. ಕುಟುಂಬ ಹಾಗೂ ದೇಶಕ್ಕೆ ಮಾರಕವಾಗಿರುವ ಶಕ್ತಿಗಳ ವಿರುದ್ಧ ನಾಯಕನ ಹೋರಾಟ ಚಿತ್ರದ ಕಥೆಯಾಗಿದ್ದು, ಧನಕುಮಾರ್‌ ಕೆ. ಈ ಚಿತ್ರದ ನಿರ್ದೇಶಕರು ಮತ್ತು ರಾಜ ರೆಡ್ಡಿ ನಿರ್ಮಾಪಕರಾಗಿದ್ದಾರೆ.

ಸಕುಟುಂಬ ಸಮೇತ: ಆಧುನಿಕ ಕುಟುಂಬಗಳ ನಡುವಿನ ತೊಳಲಾಟ, ಪ್ರೇಮ-ವಿವಾಹ ಕುರಿತಾದ 'ಸಕುಟುಂಬ ಸಮೇತ' ಸಿನಿಮಾ ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಭರತ್ ಜಿಬಿ, ಶ್ರೀ ರವಿಕುಮಾರ್ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಪಿ.ಕೆ. ನಿರ್ದೇಶನ ಮಾಡಿದ್ದಾರೆ.

ಪ್ರಾರಂಭ

ಕಟಿಂಗ್ ಶಾಪ್: ಎಡಿಟರ್‌ ಒಬ್ಬನ ಕತೆ ಹೊಂದಿರುವ 'ಕಟಿಂಗ್ ಶಾಪ್' ಸಿನಿಮಾ ಕೂಡ ಶುಕ್ರವಾರ ತೆರೆಗೆ ಬರುತ್ತಿದೆ. ಪ್ರವೀಣ್ ನಾಯಕನಾಗಿ ನಟಿಸಿದ್ದಾರೆ. ಪವನ್ ಭಟ್ ನಿರ್ದೇಶನ ಮಾಡಿದ್ದಾರೆ. 

ಕಾಣೆಯಾದವರ ಬಗ್ಗೆ ಪ್ರಕಟಣೆ: 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ, ತಬಲಾ ನಾಣಿ, ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರಕ್ಕೆ ಅನಿಲ್‌ ಕುಮಾರ್‌ ಅವರ ನಿರ್ದೇಶನವಿದೆ.

 

ಸಕುಟುಂಬ ಸಮೇತ

ದಾರಿ ಯಾವುದಯ್ಯ ವೈಕುಂಠಕ್ಕೆ: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ, ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ "ಅತ್ಯುತ್ತಮ ಕನ್ನಡ ಚಿತ್ರ" ಪ್ರಶಸ್ತಿ ಪಡೆದಿದ್ದ 'ದಾರಿ ಯಾವುದಯ್ಯ ವೈಕುಂಠಕ್ಕೆ' ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಸಿದ್ದು ಪೂರ್ಣಚಂದ್ರ ಅವರದ್ದು. ‘ತಿಥಿ ‘ಖ್ಯಾತಿಯ ಪೂಜಾ, ವರ್ಧನ್, ಬಲ ರಾಜ್ವಾಡಿ, ಅನುಷಾ, ಶೀಬಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ ಸೇರಿ ಇನ್ನೂ ಮುಂತಾದವರು ನಟಿಸಿದ್ದಾರೆ.

 

 

ಕಾಣೆಯಾದವರ ಬಗ್ಗೆ ಪ್ರಕಟಣೆ

‘ಕಂಡ್ಡಿಡಿ‌ ನೋಡಣ’: ‘ಚಾಲೆಂಜಿಂಗ್ ಥ್ರಿಲ್ಲರ್ ಕಥಾಹಂದರದ ‘ಕಂಡ್ಡಿಡಿ ನೋಡಣ’ ಸಿನಿಮಾವು ರಾಜ್ಯದಾದ್ಯಂತ ನಾಳೆ ಅಂದರೆ ಮೇ 20 ಶುಕ್ರವಾರದಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಉತ್ತರ ಕರ್ನಾಟಕದ ಹೆಚ್ಚು ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ’ ಎಂದು ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಹೇಳಿದ್ದಾರೆ. ಪ್ರಣವ್ ಸೂರ್ಯ, ರಘು ವಡ್ಡಿ, ಕಲ್ಲಪ್ಪ ಶಿರಕೋಳ, ಆಕಾಶ್, ಅನು, ಮಂಜುನಾಥ್ ಹಾಗೂ ದಿವ್ಯಾ ನಟಿಸಿದ್ದಾರೆ.

 

ಈ ಚಿತ್ರಗಳು ಮಾತ್ರವಲ್ಲದೇ ಆ್ಯಂಗರ್‌ ಹಾಗೂ ಪ್ರೀತ್ಸು ಸಿನಿಮಾಗಳು ಕೂಡ ತೆರೆಗೆ ಬರಲಿವೆ ಎಂದು ಚಂದನವನದ ಮೂಲಗಳು ತಿಳಿಸಿವೆ. 
 


Stay up to date on all the latest ಸಿನಿಮಾ ಸುದ್ದಿ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp