'ಸಾರಾ ವಜ್ರ'ದ ನಫೀಸಾ ಪಾತ್ರ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತು: ಅನು ಪ್ರಭಾಕರ್ ಮುಖರ್ಜಿ

ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನು ಪ್ರಭಾಕರ್ ಮುಖರ್ಜಿ ಸಾರಾ ವಜ್ರದಲ್ಲಿ ಲೀಡ್ ಪಾತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

Published: 19th May 2022 01:56 PM  |   Last Updated: 19th May 2022 02:44 PM   |  A+A-


Anu Prabhakar Mukherjee

ಅನು ಪ್ರಭಾಕರ್ ಮುಖರ್ಜಿ

The New Indian Express

ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನು ಪ್ರಭಾಕರ್ ಮುಖರ್ಜಿ ಸಾರಾ ವಜ್ರದಲ್ಲಿ ಲೀಡ್ ಪಾತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

ಕನ್ನಡದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್‌ ಅವರ ಕಾದಂಬರಿ “ಸಾರಾ ವಜ್ರ’ ಹೆಸರಿನಲ್ಲಿ ಸಿನಿಮಾವಾಗಿದ್ದು, ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಇನ್ನು ಈ ಚಿತ್ರದ ಕಥೆ 1989ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ. ತ್ರಿವಳಿ ತಲಾಖ್‌ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣ ಚಿತ್ರದಲ್ಲಿದೆ.

ನಾಯಕಿ ಅನು ಪ್ರಭಾಕರ್‌ ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ಅಭಿನಯಿಸಿದ್ದು, 20ನೇ ವಯಸ್ಸಿನಿಂದ 60 ವರ್ಷದ ಮಹಿಳೆಯಾಗಿ ವಿಭಿನ್ನ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ.

ಕಮ್ ಬ್ಯಾಕ್ ಸಿನಿಮಾ ಬಗ್ಗೆ ಮಾತನಾಡಿರುವ ಅನು, ನನ್ನ ಕುಟುಂಬದ ಮೇಲೆ ಗಮನ ಕೇಂದ್ರೀಕರಿಸಬೇಕಾದ ಕಾರಣ ನಾನು ಚಿತ್ರರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೆ.  ಅರ್ನಾ ಅವರಂತಹ ಯುವ ನಿರ್ದೇಶಕರು ಈ ಕಾದಂಬರಿಯನ್ನು ಹೇಗೆ ತೆರೆಗೆ ತರುತ್ತಾರೆ ಎಂಬ ಬಗ್ಗೆ ಅವರು ಸ್ವಲ್ಪ ಆತಂಕಗೊಂಡಿದ್ದಾಗಿ ಅನು ಪ್ರಭಾಕರ್ ತಿಳಿಸಿದ್ದಾರೆ.

ಆಕೆ ಬರೆದ ಸ್ಕ್ರಿಪ್ಟ್ ನನಗೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವಲ್ಲಿ ಭರವಸೆ ನೀಡಿತು. ಕಾದಂಬರಿಯನ್ನು ತೆರೆಗೆ ಅಳವಡಿಸುವಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಅನು ನಿರ್ದೇಶಕರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಸಾರಾ ಎದುರಿಸಿದ ಅಗ್ನಿಪರೀಕ್ಷೆಗಳನ್ನು ಮತ್ತು ಅವಳ ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳುವ ಅನ್ವೇಷಣೆ ಕುರಿತ ಚಿತ್ರ ಇದಾಗಿದೆ.

ಗಿರೀಶ್ ಕಾಸರವಳ್ಳಿ ಮತ್ತು ನಾಗಾಭರಣ ಅವರಂತಹ ನಿರ್ದೇಶಕರು ಕಾದಂಬರಿಯನ್ನು ಚಲನಚಿತ್ರವಾಗಿ ಅಳವಡಿಸುವಲ್ಲಿ ತಮ್ಮ ಪರಿಣತಿಯನ್ನು ಸಾಬೀತುಪಡಿಸಿದ್ದಾರೆ. ಆದರೆ ಶ್ವೇತಾ ಶೆಟ್ಟಿ ಆಕೆಯ ವಯಸ್ಸು ಮತ್ತು ಅನುಭವವದಿಂದ ನಾನು ಪ್ರಭಾವಿತಳಾಗಿದ್ದೆ ಎಂದು ಅನು ಹೇಳುತ್ತಾರೆ. ಪಾತ್ರದ ಯಶಸ್ಸಿಗಾಗಿ ನಾನು ಚಿಂತಿಸುತ್ತಿದ್ದೆ, ಹೀಗಾಗಿ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾಗಿ ಅನು ಪ್ರಭಾಕರ್ ಮಾಹಿತಿ ನೀಡಿದ್ದಾರೆ.

ನನ್ನ ಪತಿಯಿಂದ (ನಟ ರಘು ಮುಖರ್ಜಿ) ನನಗೆ ಸಾಕಷ್ಟು ಬೆಂಬಲವಿತ್ತು. ಇದಲ್ಲದೆ, ನಿರ್ದೇಶಕರ ಸ್ಪಷ್ಟತೆಯಿಂದ  ಪಾತ್ರವನ್ನು ನಿರ್ವಹಿಸಲು ಸಹಾಯ ಮಾಡಿತು ಎಂದು ಹೇಳಿದ್ದಾರೆ. ಸಾರಾ ವಜ್ರ ಚಿತ್ರದ ಶೂಟಿಂಗ್ 2020 ರಲ್ಲಿ ಮುಗಿದಿದ್ದರೂ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಬೇಕಾಯಿತು. ಅಂತಿಮವಾಗಿ ಶುಕ್ರವಾರ ತೆರೆ ಕಾಣುತ್ತಿದೆ.

ದೇವೇಂದ್ರ ರೆಡ್ಡಿಯವರ ಸಂಭ್ರಮ ಡ್ರೀಮ್ ಹೌಸ್ ಬೆಂಬಲದೊಂದಿಗೆ, ಸಾರಾ ವಜ್ರದಲ್ಲಿ ಸುಧಾ ಬೆಳವಾಡಿ, ರೆಹಮಾನ್ ಹಾಸನ್ ಮತ್ತು ರಮೇಶ್ ಭಟ್ ಸಹ ನಟಿಸಿದ್ದಾರೆ. ಚಿತ್ರವು ಮೇ 20 ರಂದು ಬಿಡುಗಡೆಯಾಗಲಿದೆ.


Stay up to date on all the latest ಸಿನಿಮಾ ಸುದ್ದಿ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp