
ಮಗಳೊಂದಿರುವ ಪ್ರಿಯಾ ಕಿಚ್ಚ ಸುದೀಪ್
ಬೆಂಗಳೂರು: ಖ್ಯಾತ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ತಮ್ಮ ಮಗಳಿಗೆ ಅದ್ಬುತ, ಅನನ್ಯ ಹಾಗೂ ಪ್ರಬುದ್ಧ ಶುಭಾಶಯ ಕೋರಿದ್ದಾರೆ. ಈ ಶುಭಾಶಯದ ಕ್ರಮ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರೌಢಾವಸ್ಥೆಗೆ ಸುಸ್ವಾಗತ, ಮಗು! ನಿಮ್ಮ ನಿರ್ಧಾರಗಳನ್ನು ನಡೆಸಲು ನಿಮ್ಮ ಆತ್ಮಸಾಕ್ಷಿಯನ್ನು ಯಾವಾಗಲೂ ಅನುಮತಿಸಿ, ನಿಮ್ಮ ಸ್ವರದಲ್ಲಿ ಸಭ್ಯರಾಗಿರಿ, ವರ್ತನೆಯಲ್ಲಿ ವಿನಮ್ರರಾಗಿರಿ ಮತ್ತು ನಿಮ್ಮ ವಿಧಾನದಲ್ಲಿ ಪ್ರಗತಿಪರರಾಗಿರಿ. ನೀವು ಲೆಜೆಂಡ್ರಿ ಕೆಲಸಗಳನ್ನು ಮಾಡಲು ಉದ್ದೇಶಿಸಿದ್ದೀರಿ ಎಂದು ನನಗೆ ತಿಳಿದಿದೆ! 18ನೇ ರಾಕ್‌ಸ್ಟಾರ್ ಶುಭಾಶಯಗಳು! ಎಂದು ಹೇಳಿದ್ದಾರೆ.
Welcome to adulthood,kiddo!Always allow your conscience to drive your decisions,be polite in your tone,humble in attitude and progressive in your approach.I know you’re destined to do legendary things!Happy 18th Rockstar!#SanviSudeephref="https://t.co/tJ2kDKSPQa">pic.twitter.com/tJ2kDKSPQa
— Priya Sudeep/ಪ್ರಿಯ (@iampriya06) May 20, 2022