'ಬಘೀರಾ' ಮೂಲಕ ಮತ್ತೆ ಒಂದಾದ ಪ್ರಶಾಂತ್ ನೀಲ್, ಶ್ರೀಮುರಳಿ ಜೋಡಿ; ಬೆಂಗಳೂರಿನಲ್ಲಿ ಇಂದು ಮುಹೂರ್ತ
ಉಗ್ರ ಖ್ಯಾತಿಯ ನಟ ಶ್ರೀಮುರಳಿ ಹಾಗೂ ಕೆಜಿಎಫ್ ಯಶಸ್ಸಿನಲ್ಲಿರುವ ಪ್ರಶಾಂತ್ ನೀಲ್ ಮತ್ತೆ ಒಂದಾಗಿದ್ದು, ನೂತನ ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನೆರವೇರಿದೆ.
Published: 21st May 2022 02:52 PM | Last Updated: 23rd May 2022 01:27 PM | A+A A-

ಬಘೀರ ಚಿತ್ರದ ಮುಹೂರ್ತ ಕಾರ್ಯಕ್ರಮ
ಬೆಂಗಳೂರು: ಉಗ್ರ ಖ್ಯಾತಿಯ ನಟ ಶ್ರೀಮುರಳಿ ಹಾಗೂ ಕೆಜಿಎಫ್ ಯಶಸ್ಸಿನಲ್ಲಿರುವ ಪ್ರಶಾಂತ್ ನೀಲ್ ಮತ್ತೆ ಒಂದಾಗಿದ್ದು, ನೂತನ ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನೆರವೇರಿದೆ.
ಹೌದು.. ಹೊಂಬಾಳೆ ಫಿಲ್ಮ್ಸ್ನ ಮತ್ತೊಂದು ಅದ್ದೂರಿ ಚಿತ್ರ ‘ಬಘೀರ’ ಇಂದು ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಉಗ್ರಂ ಖ್ಯಾತಿಯ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಜೋಡಿ ಮತ್ತೆ ಒಂದಾಗಿದೆ. ಅಚ್ಚರಿ ಪಡಬೇಡಿ.. ಇದು ನಿಜ.. ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಪ್ರಭಾಸ್ ಅಭಿನಯದ ಸಲಾರ್, ಆ ಬಳಿಕ ಜೂ.ಎನ್ ಟಿಆರ್ ರ ಚಿತ್ರ ಒಪ್ಪಿಕೊಂಡಿದ್ದು ಅದರ ನಡುವೆ ಕನ್ನಡ ಚಿತ್ರದಲ್ಲಿ ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ ಈ ಬಾರಿ ಅವರು ನಿರ್ದೇಶನದ ಮೂಲಕ ಅಲ್ಲ ಬದಲಿಗೆ ಕಥೆ ಮೂಲಕ ಶ್ರೀಮುರಳಿ ಚಿತ್ರದಲ್ಲಿ ಕೈ ಜೋಡಿಸಿದ್ದಾರೆ.
Here's the Glimpse from the launch of #Bagheera
— Hombale Films (@hombalefilms) May 21, 2022
Shooting begins!https://t.co/bkRKlGf9Q9@SRIMURALIII #DrSuri @prashanth_neel @VKiragandur @hombalefilms @BagheeraTheFilm pic.twitter.com/0O4ZG7Tu5X
ಈ ಬಘೀರ ಚಿತ್ರಕ್ಕೆ ಡಾ.ಸೂರಿ ಚಿತ್ರಕಥೆ, ನಿರ್ದೇಶನವಿದ್ದುಸ, ಈ ಚಿತ್ರಕ್ಕೆ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಈ ಚಿತ್ರಕ್ಕೆ ಶ್ರೀಮುರಳಿ ನಾಯಕ. ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಹೋದರ ಮಂಜುನಾಥ್ ಆರಂಭ ಫಲಕ ತೋರಿದರು. ನಿರ್ದೇಶಕ ಸೂರಿ ಅವರ ತಾಯಿ ಸರೋಜಾ ಅವರು ಕ್ಯಾಮೆರಾ ಚಾಲನೆ ಮಾಡಿದರು. ಮೇ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಎ.ಜೆ. ಶೆಟ್ಟಿ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.