'ಬಾನದಾರಿಯಲ್ಲಿ' ವನ್ಯಜೀವಿ ಛಾಯಾಗ್ರಾಹಕಿಯಾಗಿ ರೀಷ್ಮಾ ನಾಣಯ್ಯ!
'ಬಾನದಾರಿಯಲ್ಲಿ' ಸಿನಿಮಾ ಚಿತ್ರ ತಂಡ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಹಸ ನಾಟಕದಲ್ಲಿ ಸರ್ಫರ್ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಅವರ ಪಾತ್ರದ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು.
Published: 21st May 2022 10:46 AM | Last Updated: 23rd May 2022 01:25 PM | A+A A-

ರೀಷ್ಮಾ ನಾಣಯ್ಯ
'ಬಾನದಾರಿಯಲ್ಲಿ' ಸಿನಿಮಾ ಚಿತ್ರ ತಂಡ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿತ್ತು.
ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಹಸ ನಾಟಕದಲ್ಲಿ ಸರ್ಫರ್ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಅವರ ಪಾತ್ರದ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಅವರ ಪಾತ್ರದ ವಿವರಗಳನ್ನು ಹಂಚಿಕೊಂಡಿದ್ದಾರೆ.
ವನ್ಯಜೀವಿ ಛಾಯಾಗ್ರಾಹಕಿ ಕಾದಂಬರಿ ಪಾತ್ರದಲ್ಲಿ ರೀಷ್ಮಾ ನಟಿಸಲಿದ್ದಾರೆ. ಪ್ರೀತಾ ಜಯರಾಮನ್ ಅವರ ಕಥೆ ಮತ್ತು ಪ್ರೀತಂ ಗುಬ್ಬಿ ಅವರ ಚಿತ್ರಕಥೆಯೊಂದಿಗೆ, ಮೇ 25 ರಂದು ಚಿತ್ರೀಕರಣ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಬಾನದಾರಿಯಲ್ಲಿ' ರುಕ್ಮಿಣಿ ವಸಂತ್ ಸರ್ಫಿಂಗ್!
ಬೆಂಗಳೂರು, ಚೆನ್ನೈ, ವಾರಣಾಸಿ ಮತ್ತು ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯಲಿದೆ. ವಿ ಹರಿಕೃಷ್ಣ ಸಂಗೀತ ನೀಡಿದರೆ, ಅಭಿಲಾಶ್ ಕಲತಿ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ.