'ವಿಕ್ರಾಂತ್ ರೋಣ' ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ದಿನಗಣನೆ
ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಸಿನಿಮಾ ಫೋಸ್ಟರ್, ಫಸ್ಟ್ ಲುಕ್ , ಟೀಸರ್ ನಿಂದ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Published: 21st May 2022 10:37 PM | Last Updated: 21st May 2022 10:40 PM | A+A A-

ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಸಿನಿಮಾ ಫೋಸ್ಟರ್, ಫಸ್ಟ್ ಲುಕ್ , ಟೀಸರ್ ನಿಂದ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಹೈವೋಲ್ಜೇಜ್ ಹಾಡಾದ ಗಡಂಗ್ ರಕ್ಕಮ್ಮ ಲಿರಿಕಲ್ ಹಾಡು ಬಿಡುಗಡೆಗೆ ಇನ್ನೆರೆಡು ದಿನ ಬಾಕಿಯಿದ್ದು, ಮೇ 23 ರಂದು ಕನ್ನಡದಲ್ಲಿ ಮಧ್ಯಾಹ್ನ 3.05ಕ್ಕೆ ರಿಲೀಸ್ ಆಗಲಿದೆ. ಮೇ 24ರಂದು ಮಧ್ಯಾಹ್ನ 1.05ಕ್ಕೆ ಹಿಂದಿಯಲ್ಲಿ, ಮೇ 25 ರಂದು ತೆಲುಗಿನಲ್ಲಿ, ಮೇ 26 ರಂದು ತಮಿಳು, ಮೇ 27 ರಂದು ಮಲಯಾಳಂನಲ್ಲಿ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಈ ಬಗ್ಗೆ ನಟ ಸುದೀಪ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
2 Days To Go | Welcome Gadang Rakkamma - The Queen Of Good Times #RaRaRakkamma lyric video on
— Kichcha Sudeepa (@KicchaSudeep) May 21, 2022
Kannada - 23 May - 3:05 PM
Hindi - 24 May - 1:05 PM
Telugu - 25 May - 1:05 PM
Tamil - 26 May - 1:05 PM
Malayalam - 27 May - 1:05 PM #VRonJuly28 @Asli_Jacqueline @vikrantrona pic.twitter.com/t2psX6HLzq
ಇದರೊಂದಿಗೆ ಚಿತ್ರದ ಹಿಂದಿ 3 ಡಿ ಅವತರಣಿಕೆಯ ವಿತರಣೆ ಹಕ್ಕನ್ನು ಪಿವಿಆರ್ ಸಂಸ್ಥೆ ಪಡೆದುಕೊಂಡಿದೆ. ನಿರೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ 3 ಡಿ ವರ್ಸನ್ ನಲ್ಲಿ ಜುಲೈ 28ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
When good intentions and efforts meet great strengths.
— Kichcha Sudeepa (@KicchaSudeep) May 20, 2022
Welcome on board @PicturesPVR ..
#VikrantRona pic.twitter.com/73scF8xYzG