'ಕಿಸ್' ಚೆಲುವೆಗೆ ಮತ್ತೊಂದು ಬಂಪರ್ ಚಾನ್ಸ್: 'ಬಾಲಯ್ಯ' ಸಿನಿಮಾದಲ್ಲಿ ನಟಿಸುವ ಅವಕಾಶ!
ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹಾಗಂತ ಅವರು ಬಾಲಯ್ಯಗೆ ಜೋಡಿಯಾಗಿ ನಟಿಸುತ್ತಿಲ್ಲ. ಟ್ವಿಸ್ಟ್ ಏನೆಂದರೆ, ಮಗಳ ಪಾತ್ರಕ್ಕೆ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ.
Published: 23rd May 2022 02:04 PM | Last Updated: 23rd May 2022 02:24 PM | A+A A-

ಶ್ರೀಲೀಲಾ
ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹಾಗಂತ ಅವರು ಬಾಲಯ್ಯಗೆ ಜೋಡಿಯಾಗಿ ನಟಿಸುತ್ತಿಲ್ಲ. ಟ್ವಿಸ್ಟ್ ಏನೆಂದರೆ, ಮಗಳ ಪಾತ್ರಕ್ಕೆ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ.
ಕನ್ನಡದಲ್ಲಿ ‘ಕಿಸ್’ ಮತ್ತು ‘ಭರಾಟೆ’ ಚಿತ್ರದಲ್ಲಿ ನಟಿಸಿದ ಬಳಿಕ ಟಾಲಿವುಡ್ ಮಂದಿಯ ಕಣ್ಣಿಗೆ ಬಿದ್ದರು ಶ್ರೀಲೀಲಾ. ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ಅವರು ಕಾಣಿಸಿಕೊಂಡ ರೀತಿಗೆ ತೆಲುಗು ಪ್ರೇಕ್ಷಕರು ಫಿದಾ ಆದರು. ಈಗ ಅವರಿಗೆ ಟಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಹರಿದುಬರುತ್ತಿವೆ. ಈ ಸಿನಿಮಾವನ್ನು 'ಎಫ್2', 'ಸರಿಲೇರು ನೀಕೆವ್ವರು', 'ಎಫ್3' ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಿರೀಟಿ ರೆಡ್ಡಿ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ: ಶ್ರೀಲೀಲಾ
ನಂದಮೂರಿ ಬಾಲಕೃಷ್ಣ ನಟನೆಯ ಈ ಸಿನಿಮಾದಲ್ಲಿ ಶ್ರೀಲೀಲಾ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಾಲಯ್ಯ ಕರಿಯರ್ಗೆ ವಿಶೇಷವಾದ ಸಿನಿಮಾ ಎಂದು ಹೇಳಲಾಗಿದೆ. ಬಾಲಯ್ಯ ಈ ಸಿನಿಮಾದಲ್ಲಿ ವಯೋವೃದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಮಗಳಾಗಿ ಶ್ರೀಲೀಲಾ ನಟಿಸಲಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ದೊಡ್ಡ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಬಾಲಯ್ಯ ಅವರ ಪಾತ್ರವೇ ಇಡೀ ಸಿನಿಮಾದ ಹೈಲೈಟ್.
'ಜಾತಿ ರತ್ನಲು' ಖ್ಯಾತಿಯ ನವೀನ್ ಪೊಲಿಸೆಟ್ಟಿ ಜೊತೆಗೆ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. 'ಉಪ್ಪೆನ' ಸಿನಿಮಾದಿಂದ ಫೇಮಸ್ ಆಗಿರುವ ನಟ ವೈಷ್ಣವ್ ತೇಜ್ ಅವರ ಹೊಸ ಸಿನಿಮಾದಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ ನಿರ್ಮಾಪಕ ದಿಲ್ ರಾಜು ಕೂಡ ಶ್ರೀಲೀಲಾ ಕಾಲ್ ಶೀಟ್ ಪಡೆದುಕೊಂಡಿದ್ದಾರೆ.