
ರಾಧಿಕಾ ಪಂಡಿತ್ ಮಕ್ಕಳ ಫೋಟೋ
ಬೆಂಗಳೂರು: ನಟನೆಯಿಂದ ದೂರ ಉಳಿದು ಮಕ್ಕಳ ಆರೈಕೆ ಮಾಡುತ್ತಿರುವ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಚಟುವಟಿಕೆಯಿಂದ ಇದ್ದಾರೆ.
ಆಗಾಗ ತಮ್ಮ ಫೋಟೋ ಹಂಚಿಕೊಳ್ಳುವ ರಾಧಿಕಾ ಪಂಡಿತ್ ಇದೀಗ ತಮ್ಮ ಇಬ್ಬರು ಮಕ್ಕಳ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಆಯ್ರಾ ಮತ್ತು ಅಥರ್ವ ನೀಲಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮ್ಮಾ ರಾಧಿಕಾ ಪಂಡಿತ್ ಹಂಚಿಕೊಂಡ ಫೋಟೋದಲ್ಲಿ ಆಯ್ರಾ ಮುದ್ದಾದ ನಗೆ ಬೀರಿದ್ದರೆ, ಅಥರ್ವ್ ತನ್ನ ಕೈಯಿಂದ ಮುಖ ಮುಚ್ಚಿಕೊಂಡಿದ್ದಾರೆ. ಆದರೆ ಇವರಿಬ್ಬರು ನೀಲಿ ಬಣ್ಣದ ಬಟ್ಟೆ ತೊಟ್ಟಿರುವುದು ವಿಶೇಷ. ರಾಧಿಕಾ ಪಂಡಿತ್ ಮಂಡೇ ಬ್ಯೂಸ್ ಎಂಬ ಶೀರ್ಷಿಕೆಯಡಿ ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಆಯ್ರಾ ನಗುವೇ ಫುಲ್ ಹೈಲೇಟ್.
ಈ ಫೋಟೋವನ್ನು ಮೂರು ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, ರಾಕಿಂಗ್ ಬೇಬಿಸ್, ಕ್ಯೂಟ್ ಎಂಬ ಕಮೆಂಟ್ ಮಾಡಿದ್ದು, ಇವರಿಬ್ಬರ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.